ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಏಮ್ಸ್‌ನಲ್ಲಿ ಮಕ್ಕಳ ಲಸಿಕೆಯ ಕ್ಲಿನಿಕಲ್ ಪ್ರಯೋಗ ಆರಂಭ

|
Google Oneindia Kannada News

ನವದೆಹಲಿ, ಜೂನ್ 07: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ತೋರಲಿದೆ ಎಂಬ ತಜ್ಞರ ಎಚ್ಚರಿಕೆ ನಡುವೆ ಮಕ್ಕಳಿಗೆ ಲಸಿಕೆ ಅಭಿವೃದ್ಧಿ ಕುರಿತ ಪ್ರಯೋಗಗಳ ಚರ್ಚೆ ಆರಂಭವಾಗಿದೆ. ಈ ನಡುವೆ ದೆಹಲಿಯ ಏಮ್ಸ್‌ನಲ್ಲಿ ಸೋಮವಾರದಿಂದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಲಿದೆ.

ಈಚೆಗೆ ಪಾಟ್ನಾದ ಏಮ್ಸ್‌ನಲ್ಲಿ ಪ್ರಯೋಗ ಆರಂಭವಾಗಿತ್ತು. ಇದೀಗ ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ 2-18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಿದ್ಧಪಡಿಸಿದ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ಆರಂಭವಾಗಲಿದೆ.

ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆ

"ಭಾರತದಲ್ಲಿ ಮಕ್ಕಳಿಗೆ ಯಾವುದೇ ಲಸಿಕೆಗೆ ಅನುಮೋದನೆ ನೀಡಲಾಗಿಲ್ಲ. ಆದರೆ 2-18 ವರ್ಷದೊಳಗಿನ ಮಕ್ಕಳ ಮೇಲೆ 2/3 ಹಂತದ ಪ್ರಯೋಗಗಳನ್ನು ನಡೆಸಲಾಗುವುದು. 2-18 ವರ್ಷದೊಳಗಿನ 525 ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗ ನಡೆಯಲಿದೆ" ಎಂದು ಈಚೆಗೆ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ತಿಳಿಸಿದ್ದರು.

Clinical Trials of Covaxin On Children Begins Today In AIIMS Delhi

"ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಯನ್ನು 18 ವರ್ಷದೊಳಗಿನವರ ಬಳಕೆಗೆ ಸಿದ್ಧತೆ ನಡೆಸಲಾಗುತ್ತಿದೆ. 2 ರಿಂದ 18 ವರ್ಷ ವಯಸ್ಸಿನವರ ಮೇಲೆ ಎರಡು ಹಾಗೂ ಮೂರನೇ ಹಂತದ ಪ್ರಯೋಗಗಳನ್ನು ಜೂನ್ ತಿಂಗಳಿನಲ್ಲಿ ಆರಂಭಿಸಲಾಗುತ್ತದೆ" ಎಂದು ಭಾರತ್ ಬಯೋಟೆಕ್ ತಿಳಿಸಿತ್ತು.

ಕಾನ್ಪುರ್ ಪ್ರಖರ್ ಆಸ್ಪತ್ರೆ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮಡಿಕಲ್ ಸೈನ್ಸಸ್, ಪಾಟ್ನಾ, ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್, ಪ್ರಣಾಮ್ ಆಸ್ಪತ್ರೆ ಹೈದರಾಬಾದ್, ಮೆಡಿಟ್ರಿನಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಾಗ್ಪುರದಲ್ಲಿ ಪ್ರಯೋಗ ನಡೆಯಲಿದೆ. 3 ವರ್ಗದ ಮಕ್ಕಳ ಮೇಲೆ ಈ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು, ಮೊದಲ ಹಂತ 12ರಿಂದ 18 ವರ್ಷದ ಮಕ್ಕಳು, 2ನೇ ಹಂತದಲ್ಲಿ 6ರಿಂದ 12 ವರ್ಷದ ಮಕ್ಕಳು ಹಾಗೂ 3ನೇ ವರ್ಗ 2ರಿಂದ 6 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ಬೇಕಾದ ತಂತ್ರಜ್ಞಾನ ಹಾಗೂ ಲ್ಯಾಬ್ ಸಿದ್ಧಪಡಿಸಲಾಗಿದೆ.

ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದವರಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗ ನಡೆಸಲು ತಜ್ಞರ ಸಮಿತಿ ಈ ಹಿಂದೆ ಶಿಫಾರಸ್ಸು ಮಾಡಿತ್ತು.

ಅಮೆರಿಕದಲ್ಲಿ ಹಾಗೂ ಕೆನಡಾದಲ್ಲಿ ಈಗಾಗಲೇ ಮಕ್ಕಳಿಗೆ ಫೈಜರ್ ಲಸಿಕೆ ನೀಡಲಾಗುತ್ತಿದೆ. 3-17 ವರ್ಷದೊಳಗಿನ ಮಕ್ಕಳಿಗೆ ಸಿನೋವ್ಯಾಕ್‌ನ ಕೊರೊನಾ ಲಸಿಕೆ ತುರ್ತು ಬಳಕೆಗೆ ಚೀನಾ ಅನುಮೋದನೆ ನೀಡಿದೆ.

English summary
Delhi AIIMS to begin conducting trials of Covaxin on children from today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X