ಸ್ವಚ್ಛತೆಯಲ್ಲಿ ಬೆಂಗ್ಳೂರು ನಗರ ರೈಲ್ವೆ ನಿಲ್ದಾಣಕ್ಕೆ 10ನೇ ಸ್ಥಾನ

Posted By:
Subscribe to Oneindia Kannada

ನವದೆಹಲಿ, ಮೇ 18 : ಭಾರತೀಯ ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಕುರಿತ ಸಮೀಕ್ಷಾ ವರದಿಯನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಬಿಡುಗಡೆ ಮಾಡಿದ್ದಾರೆ.

ಈ ವರದಿಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣ ಎನ್ನುವ ಕೀರ್ತಿಗೆ ಪಾತ್ರವಾಗಿದ್ದು, 'ಎ1' ವಿಭಾಗದಲ್ಲಿ ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ 10 ಮತ್ತು ಯಶವಂತಪುರ ರೈಲ್ವೆ ನಿಲ್ದಾಣ 32ನೇ ಸ್ಥಾನ ಪಡೆದಿವೆ.

ಇನ್ನು ಮೈಸೂರು 14 ಮತ್ತು ಬಂಗಾರಪೇಟೆ 35ನೇ ಸ್ಥಾನದಲ್ಲಿವೆ. ತೆಲಂಗಾಣದ ಸಿಕಂದರಾಬಾದ್ ಜಂಕ್ಷನ್‌ ಮತ್ತು ಜಮ್ಮು ತವಿ ರೈಲ್ವೆ ನಿಲ್ದಾಣಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ.

ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಭಾರತೀಯ ಗುಣಮಟ್ಟ ನಿಯಂತ್ರಣ ವಿಭಾಗ ಈ ಸಮೀಕ್ಷೆಯನ್ನು 407 ರೈಲ್ವೆ ನಿಲ್ದಾಣಗಳಲ್ಲಿ ಕೈಗೊಂಡಿತ್ತು.

‘ಎ’ ಮತ್ತು ‘ಎ1’ ವಿಭಾಗ

‘ಎ’ ಮತ್ತು ‘ಎ1’ ವಿಭಾಗ

ವಾರ್ಷಿಕ 50 ಕೋಟಿಗೂ ಹೆಚ್ಚು ಆದಾಯ ಹೊಂದಿರುವ ರೈಲ್ವೆ ನಿಲ್ದಾಣಗಳಿಗೆ ‘ಎ1' ವಿಭಾಗದಲ್ಲಿ ರ್ಯಾಂಕಿಂಗ್ ನೀಡಲಾಗಿದೆ. ವಾರ್ಷಿಕ 6 ಕೋಟಿಯಿಂದ 50 ಕೋಟಿವರೆಗೆ ಆದಾಯ ಹೊಂದಿರುವ ನಿಲ್ದಾಣಗಳನ್ನು ‘ಎ' ವಿಭಾಗಕ್ಕೆ ಸೇರಿಸಲಾಗಿದೆ.

ಬೆಂಗಳೂರು ನಗರ ನಿಲ್ದಾಣಕ್ಕೆ ‘ಎ1’

ಬೆಂಗಳೂರು ನಗರ ನಿಲ್ದಾಣಕ್ಕೆ ‘ಎ1’

‘ಎ1' ಮತ್ತು ‘ಎ' ವಿಭಾಗದ ರೈಲ್ವೆ ನಿಲ್ದಾಣಗಳಿಗೆ ಪ್ರತ್ಯೇಕ ರ್ಯಾಂಕಿಂಗ್ ನೀಡಲಾಗಿದೆ. ‘ಎ1' ವಿಭಾಗದಲ್ಲಿ ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ 10 ಮತ್ತು ಯಶವಂತಪುರ ರೈಲ್ವೆ ನಿಲ್ದಾಣ 32ನೇ ಸ್ಥಾನದಲ್ಲಿವೆ.

 ‘ಎ’ ಮತ್ತು ‘ಎ1’ ವಿಭಾಗದಲ್ಲಿ ಯಾವುವು?

‘ಎ’ ಮತ್ತು ‘ಎ1’ ವಿಭಾಗದಲ್ಲಿ ಯಾವುವು?

ಕರ್ನಾಟಕದಲ್ಲಿ ಈ ಎರಡು ನಿಲ್ದಾಣಗಳು ಮಾತ್ರ ‘ಎ1' ವಿಭಾಗದಲ್ಲಿ ಅರ್ಹತೆ ಪಡೆದಿವೆ. ಪಂಜಾಬ್‌ನ ಬೀಯಾಸ್ ‘ಎ‘ ವಿಭಾಗದಲ್ಲಿ ಪ್ರಥಮ ರ್ಯಾಂಕಿಂಗ್ ಪಡೆದಿದೆ. ತೆಲಂಗಾಣದ ಕಮ್ಮಮ್ ಮತ್ತು ಮಹಾರಾಷ್ಟ್ರದ ಅಹ್ಮದನಗರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಬಿಹಾರದ ದರ್ಭಾಂಗ ಜಂಕ್ಷನ್‌ ‘ಎ1' ವಿಭಾಗದಲ್ಲಿ 75ನೇ ಸ್ಥಾನ ಹಾಗೂ ‘ಎ' ವಿಭಾಗದಲ್ಲಿ ಅದೇ ರಾಜ್ಯದ ಜೋಗ್ಬಾನಿ 332ನೇ ಸ್ಥಾನ ಪಡೆದಿದೆ.

ಸಮೀಕ್ಷೆಯಲ್ಲಿ ಪರಿಗಣಿಸಲಾದ ಅಂಶಗಳು

ಸಮೀಕ್ಷೆಯಲ್ಲಿ ಪರಿಗಣಿಸಲಾದ ಅಂಶಗಳು

ಪಾರ್ಕಿಂಗ್ ಪ್ರದೇಶ, ಶೌಚಾಲಯ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಮುಖ್ಯ ಪ್ರವೇಶ ದ್ವಾರದ ಪ್ರದೇಶದಲ್ಲಿನ ಸ್ವಚ್ಛತೆ ಸೇರಿದಂತೆ ಹಲವಾರು ಅಂಶಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಜತೆಗೆ ರೈಲ್ವೆ ಪ್ರಯಾಣಿಕರ ಅಭಿಪ್ರಾಯಗಳನ್ನು ಸಹ ಪಡೆಯಲಾಗಿದೆ ಎಂದು ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The cleanest Railway station survey report was released by Railway Minister Suresh Prabhu. Beas railway station is the cleanest, followed by Vishakhapatnam and Khammam, out of 407 stations in India.
Please Wait while comments are loading...