• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸರಕಾರಕ್ಕೆ ಸರೀ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್

|

ನವದೆಹಲಿ, ಸೆ 4: ಗಂಗಾನದಿ ಶುದ್ದೀಕರಣ ಸಂಬಂಧ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಏನೇನು ಯೋಜನೆಯನ್ನು ಹಾಕಿಕೊಂಡಿದ್ದೀರಿ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿ ಎಂದು ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.

ಈಗ ನೀವು ಸಾಗುತ್ತಿರುವ ವೇಗದಲ್ಲಿ ಗಂಗಾನದಿ ಶುದ್ದೀಕರಣವಾಗಲು ಇನ್ನೂರು ವರ್ಷಗಳು ಬೇಕಾಗಬಹುದು. ಈ ಭಾರೀ ಯೋಜನೆಯನ್ನು ಹಂತ ಹಂತವಾಗಿ ಯಾವ ರೀತಿಯಲ್ಲಿ ಕಾರ್ಯಗತಕ್ಕೆ ತರಲಾಗುವುದು ಎನ್ನುವುದನ್ನು ವಿವರಿಸಿರಿ ಎಂದು ನ್ಯಾಯಾಲಯ ಸರಕಾರಕ್ಕೆ ತಾಕೀತು ಮಾಡಿದೆ.

ಅಧಿಕಾರಶಾಹಿಯಂತೆ ಉತ್ತರ ನೀಡದೇ ನ್ಯಾಯಾಲಯಕ್ಕೆ ಯೋಜನೆಯನ್ನು ಸವಿವರವಾಗಿ ನೀಡುವಂತೆ ಬಿಸಿಮುಟ್ಟಿಸಿರುವ ಸುಪ್ರೀಂ, ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯ ಸಂಬಂಧ ಹೇಗೆ ಕೆಲಸ ಮಾಡುತ್ತೀರಾ ಎನ್ನುವುದನ್ನು ತಿಳಿಸಿರಿ ಎಂದು ಮೋದಿ ಸರಕಾರಕ್ಕೆ ಬಿಸಿ ಮುಟ್ಟಿಸಿದೆ. (ಗಂಗಾ ಶುದ್ದೀಕರಣದ ಜವಾಬ್ದಾರಿ ಪೇಜಾವರ ಶ್ರೀಗಳಿಗೆ)

ನ್ಯಾ.ಟಿ ಎಸ್ ಠಾಕೂರ್ ಮತ್ತು ನ್ಯಾ.ಭಾನುಮತಿ ಅವರಿರುವ ನ್ಯಾಯಪೀಠ, ನಮಗೆ ಸರಕಾರದ ಕನಸುಗಳು ಬೇಕಾಗಿಲ್ಲ. ಈ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸುವಿರಿ ಎನ್ನುವದನ್ನು ಸವಿವರವಾಗಿ ವಿವರಿಸಿ ಎಂದು ಕಟು ಶಬ್ದದಲ್ಲಿ ತಿಳಿಸಿದೆ.

ಮೋದಿ ಸರಕಾರಕ್ಕೆ ಸುಪ್ರೀಂಕೋರ್ಟ್ ನೀಡಿದ ಅಭಯ. ಮುಂದೆ ಓದಿ..

ಮೋದಿ ಸರಕಾರಕ್ಕೆ ಸುಪ್ರೀಂ ಅಭಯ

ಯೋಜನೆ ವೇಗದಲ್ಲಿ ಸಾಗಲು ಏನಾದರೂ ಅಡಚಣೆ ಇದ್ದಲ್ಲಿ ತಿಳಿಸಿ. ನಿಮ್ಮ ಬೆಂಬಲಕ್ಕೆ ಸರ್ವೋಚ್ಚ ನ್ಯಾಯಾಲಯವಿದೆ. ಗಂಗಾನದಿ ಪ್ರದೇಶದಲ್ಲಿರುವ ಕೈಗಾರಿಕೆಗಳನ್ನು ಬೇರಡೆ ಸ್ಥಳಾಂತರಿಸಲು ನ್ಯಾಯಾಲಯ ನಿಮ್ಮ ಪರವಾಗಿ ನಿಲ್ಲುತ್ತದೆ - ಸುಪ್ರೀಕೋರ್ಟ್. (ಚಿತ್ರ: ಪಿಟಿಐ)

ಗಂಗಾ ಶುದ್ದೀಕರಣ ಯೋಜನೆ ಕ್ಲಿಷ್ಟಕರ

ಚುನಾವಣೆಯಲ್ಲಿನ ನಿಮ್ಮ ಸರಕಾರದ ಪ್ರಣಾಳಿಕೆಯ ಪ್ರಕಾರ ಗಂಗಾ ಶುದ್ದೀಕರಣ ಯೋಜನೆ ಅತಿ ಮಹತ್ವದ್ದು. ಗಂಗಾ ಶುದ್ದೀಕರಣ ಯೋಜನೆ ಕ್ಲಿಷಕರವಾದದ್ದು ಎನ್ನುವುದು ಕೋರ್ಟಿಗೂ ಅರಿತಿದೆ. ನೀವು ಈಗ ಸಾಗಿದ ರೀತಿಯಲ್ಲಿ ಸಾಗಿದರೆ ಗಂಗಾ ಶುದ್ದೀಕರಣವಾಗಲು ಎರಡು ಶತಮಾನ ತೆಗೆದುಕೊಳ್ಳಬಹುದು - ಸುಪ್ರೀಕೋರ್ಟ್.

ಹೊಸ ಅಫಿಡವಿಟ್ ಸಲ್ಲಿಸಿ

ನೀವು ಸಲ್ಲಿಸಿದ ಕಾಟಾಚಾರದ ವರದಿ ಬಗ್ಗೆ ನಮಗೆ ಅಸಮಾಧಾನವಿದೆ. ಇನ್ನೂ ಮೂರು ವಾರದ ಗಡುವಿನಲ್ಲಿ ಹೊಸ ಅಫಿಡವಿಟ್ ಸಲ್ಲಿಸಿ ಎಂದು ಮೋದಿ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. (ಚಿತ್ರ: ಪಿಟಿಐ)

ರೈತಾಪಿ ವರ್ಗದ ಆಶಾಕಿರಣ

ಗಂಗಾ ಶುದ್ದೀಕರಣ ಯೋಜನೆಯ ಹಿಂದೆ ಹಲವು ರಾಜ್ಯಗಳ ಕನಸು ಇದೆ. ಗಂಗಾ ಮತ್ತು ಅದರ ಇತರ ಉಪನದಿಗಳ ಶುದ್ದೀಕರಣ ರೈತಾಪಿ ವರ್ಗದ ಮತ್ತು ಜನರ ಆಶಾಕಿರಣ. ಇದು ನಿಮ್ಮ ಚುನಾವಣೆಯ ಪ್ರಮುಖ ಪ್ರಣಾಳಿಕೆ ಎನ್ನುವುದನ್ನು ಮರೆಯಬೇಡಿ - ಸುಪ್ರೀಕೋರ್ಟ್. (ಚಿತ್ರ: ಪಿಟಿಐ)

ಮಾಲಿನ್ಯರಹಿತ ಗಂಗೆ

ಎರಡುವರೆ ಸಾವಿರ ಕಿಲೋಮೀಟರ್ ಹರಿಯುವ ಗಂಗಾನದಿಯನ್ನು ಮಾಲಿನ್ಯರಹಿತವಾಗಿ ಹೇಗೆ ಮಾಡುತ್ತೀರಾ? ನಮ್ಮ ಕಾಲಘಟ್ಟದಲ್ಲಿ ಮಹತ್ವಾಕಾಂಕ್ಷೆಯ ಈ ಯೋಜನೆ ಒಂದು ಹಂತಕ್ಕಾದರೂ ಕಾರ್ಯಗತವಾಗುತ್ತದಾ - ಸುಪ್ರೀಂ ತರಾಟೆ (ಚಿತ್ರ: ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Clean up Ganga river may take two centuries, Supreme Court to Narendra Modi government. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more