ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಸಿಜೆಐ ನೇಮಿಸುವ ಕಾಲ ಬಂದಿದೆ: ಎಸ್‌ಎ ಬೋಬ್ಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಸುಪ್ರೀಂಕೋರ್ಟ್‌ಗೆ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಯಾಗುವ ಸಮಯ ಬಂದಿದೆ ಎಂದು ಸಿಜೆಐ ಎಸ್‌ಎ ಬೋಬ್ಡೆ ಹೇಳಿದ್ದಾರೆ. ನ್ಯಾಯಾಂಗದಲ್ಲಿ ಮಹಿಳೆಯ ಪ್ರಾತಿನಿಧ್ಯ ಹೆಚ್ಚುವಂತೆ ಮಾಡಲು ಕೊಲಿಜಿಯಂ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಮಹಿಳೆಯೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಸಮಯ ಬಂದಿದೆ ಎಂದು ನಮಗೆ ಅನಿಸುತ್ತಿದೆ. ಮಹಿಳೆಯರ ಹಿತಾಸಕ್ತಿ ವಿಚಾರ ನಮ್ಮ ಮನದಲ್ಲಿದೆ. ಕೊಲಿಜಿಯಂ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮಹಿಳಾ ಸಿಜೆಐ ನೇಮಕವಾಗುತ್ತಾರೆ ಎಂಬ ಆಶಾವಾದವಿದೆ' ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡ ವಿಶೇಷ ನ್ಯಾಯಪೀಠ ಹೇಳಿತು.

ಆಕ್ಷೇಪದ ನಡುವೆಯೂ ಕೊಲಿಜಿಯಂ ಸಭೆ ಕರೆದ ಸಿಜೆಐ: ಫಲಿತಾಂಶವಿಲ್ಲದೆ ಅಂತ್ಯಆಕ್ಷೇಪದ ನಡುವೆಯೂ ಕೊಲಿಜಿಯಂ ಸಭೆ ಕರೆದ ಸಿಜೆಐ: ಫಲಿತಾಂಶವಿಲ್ಲದೆ ಅಂತ್ಯ

ಮನೆ ನಿರ್ವಹಣೆಯ ಜವಾಬ್ದಾರಿಗಳನ್ನು ಮುಂದಿಟ್ಟು ಅನೇಕ ಮಹಿಳಾ ವಕೀಲರು ನ್ಯಾಯಾಧೀಶ ಸ್ಥಾನಕ್ಕೆ ಏರುವ ಪ್ರಸ್ತಾವಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಸಿಜೆಐ ಹೇಳಿದ್ದಾರೆ.

CJI SA Bobde Says Time Has Come For A Woman Chief Justice Of India

'ನ್ಯಾಯಾಧೀಶರನ್ನಾಗಿ ಮಹಿಳಾ ವಕೀಲರನ್ನು ನೇಮಿಸುವಲ್ಲಿನ ಸಮಸ್ಯೆಗಳ ಬಗ್ಗೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ನನಗೆ ಹೇಳಿದ್ದಾರೆ. ತಮ್ಮ ಮಕ್ಕಳ ಓದಿನ ಬಗ್ಗೆ ಗಮನ ಹರಿಸಬೇಕು ಅಥವಾ ಮನೆ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂಬ ಕಾರಣಗಳಿಂದ ಅವರು ಹೆಚ್ಚಿನ ಸಂದರ್ಭಗಳಲ್ಲಿ ಈ ಹುದ್ದೆಯನ್ನು ನಿರಾಕರಿಸುತ್ತಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

ಸಂಸ್ಕೃತ ಅಧಿಕೃತ ಭಾಷೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಅಂಬೇಡ್ಕರ್: ಸಿಜೆಐ ಬೋಬ್ಡೆಸಂಸ್ಕೃತ ಅಧಿಕೃತ ಭಾಷೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಅಂಬೇಡ್ಕರ್: ಸಿಜೆಐ ಬೋಬ್ಡೆ

ಆದರೆ ಸಿಜೆಐ ಅವರ ಹೇಳಿಕೆಗೆ ಮಹಿಳಾ ವಕೀಲರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 'ನಾವು ಸಿದ್ಧ. ಈ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಮತ್ತು ಸಂಸ್ಥೆಗೆ ಸೇವೆ ಸಲ್ಲಿಸಲು ಹೆಚ್ಚು ಸಂತಸಪಡುತ್ತೇವೆ' ಎಂದು ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ಹೇಳಿದೆ.

English summary
CJI SA Bobde said time has come for a woman Chief Justice of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X