ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಜೆಐ ಎಚ್ಎಲ್ ದತ್ತು ನಿವೃತ್ತಿ, ಠಾಕೂರ್ ಮುಂದಿನ ಸಿಜೆಐ

By Mahesh
|
Google Oneindia Kannada News

ನವದೆಹಲಿ, ನ.04: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ, ಕರ್ನಾಟಕದ ಮೂಲದ ಎಚ್.ಎಲ್ ದತ್ತು ಅವರ ನಿವೃತ್ತಿ ದಿನಾಂಕ ಘೋಷಣೆಯಾಗಿದೆ. ನ್ಯಾ. ದತ್ತು ಅವರ ಸ್ಥಾನಕ್ಕೆ ಮುಂದಿನ ಸಿಜೆಐಯಾಗಿ ಜಸ್ಟೀಸ್ ಟಿಎಸ್ ಠಾಕೂರ್ ಅವರನ್ನು ಶಿಫಾರಸು ಮಾಡಲಾಗಿದೆ.

ಡಿಸೆಂಬರ್ 2, 2015ರಂದು ಎಚ್. ಎಲ್ ದತ್ತು ಅವರು ನಿವೃತ್ತಿಯಾಗಲಿದ್ದಾರೆ. ಜಸ್ಟೀಸ್ ಟಿ.ಎಚ್ ಠಾಕೂರ್ ಅವರ ಹೆಸರನ್ನು ನ್ಯಾ. ದತ್ತು ಅವರು ಶಿಫಾರಸು ಮಾಡಿದ್ದಾರೆ. [ಸಿಜೆಐ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ವ್ಯಕ್ತಿ ಚಿತ್ರ]

Justice TS Thakur

ನ್ಯಾ. ದತ್ತು ಅವರ ಶಿಫಾರಸ್ಸನ್ನು ಮೋದಿ ಸರ್ಕಾರ ಈಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳಿಸಿ ಅವರ ಅಂಕಿತ ಪಡೆಯಬೇಕಿದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಅಧಿಕೃತವಾಗಿ ಮುಂದಿನ ಸಿಜೆಐ ಹೆಸರನ್ನು ಘೋಷಿಸಲಾಗುತ್ತದೆ.

ಜಸ್ಟೀಸ್ ಠಾಕೂರ್ ಅವರು ಕೂಡಾ ನಿವೃತ್ತಿ ಹೊಸ್ತಿಲಲ್ಲಿದ್ದಾರೆ. ಜನವರಿ 3, 2017ರಂದು ನಿವೃತ್ತಿ ಹೊಂದಲಿರುವ ಠಾಕೂರ್ ಅವರು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2009ರಲ್ಲಿ ಸುಪ್ರೀಂಕೋರ್ಟಿನ ಜಡ್ಜ್ ಆಗಿ ಬಡ್ತಿ ಪಡೆದಿದ್ದರು.

ಸಿಜೆಐ ದತ್ತು: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆರ್.ಎಂ ಲೋಧಾ ಅವರ ಸೇವಾ ಅವಧಿ ಪೂರ್ಣಗೊಂಡ ಬಳಿಕ. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ನ್ಯಾ.ದತ್ತು ಅಲಂಕರಿಸಿದ್ದಾರೆ. ದತ್ತು ಅವರು ಸಿಜೆಐ ಆದ ನಾಲ್ಕನೇ ಕನ್ನಡಿಗರಾಗಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಎಚ್.ಎಲ್.ದತ್ತು ಅವರು, ಕೇರಳ ಹಾಗೂ ಪಂಜಾಬ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು.

English summary
Chief Justice of India, HL Dattu, who will retire on December 2, has recommended the name of Justice Thakur, the senior most judge as his successor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X