ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಬಂಧ ತೆರವು: ಭಾರತ-ಉಕ್ರೇನ್ ನಡುವೆ ವಿಮಾನಗಳ ಹಾರಾಟ ಶುರು

|
Google Oneindia Kannada News

ನವದೆಹಲಿ, ಫೆಬ್ರವರಿ 17: ಭಾರತ-ಉಕ್ರೇನ್ ನಡುವೆ ಮತ್ತೆ ವಿಮಾನಗಳ ಹಾರಾಟ ಶುರುವಾಗಿದೆ. ಎರಡು ದೇಶಗಳ ನಡುವಿನ ಏರ್ ಬಬಲ್ ವ್ಯವಸ್ಥೆಯಲ್ಲಿ, ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಪರಸ್ಪರರ ಪ್ರಾಂತ್ಯಗಳಲ್ಲಿ ಹಾರಾಟಕ್ಕೆ ಬಿಡಬಹುದು. ಪ್ರಸ್ತುತ, ಭಾರತವು 35 ದೇಶಗಳೊಂದಿಗೆ ಏರ್ ಬಬಲ್ ವ್ಯವಸ್ಥೆಯನ್ನು ಹೊಂದಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಪೂರ್ವ ಯುರೋಪಿಯನ್ ರಾಷ್ಟ್ರದಿಂದ ಭಾರತೀಯರ ಪ್ರಯಾಣಕ್ಕೆ ಅನುಕೂಲವಾಗುವಂತೆ ದ್ವಿಪಕ್ಷೀಯ ವಾಯುಸಂಚಾರ ವ್ಯವಸ್ಥೆಯಡಿ ಭಾರತ ಮತ್ತು ಉಕ್ರೇನ್ ನಡುವೆ ಕಾರ್ಯನಿರ್ವಹಿಸಬಹುದಾದ ವಿಮಾನಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ.

ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರು ಉಕ್ರೇನ್‌ ತೊರೆಯಲು ಸೂಚನೆಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರು ಉಕ್ರೇನ್‌ ತೊರೆಯಲು ಸೂಚನೆ

ರಷ್ಯಾ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಉಕ್ರೇನ್‌ನಲ್ಲಿ ಈಗಿರುವ ಪರಿಸ್ಥಿತಿಯ ನಡುವೆ, ಭಾರತವು ತನ್ನ ನಾಗರಿಕರಿಗೆ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ. ಏರ್ ಬಬಲ್ ವ್ಯವಸ್ಥೆ ಅಡಿಯಲ್ಲಿ ಭಾರತ ಮತ್ತು ಉಕ್ರೇನ್ ನಡುವಿನ ಸೀಮಿತ ಸಂಖ್ಯೆಯಲ್ಲಿ ವಿಮಾನಗಳ ಹಾರಾಟ ಮೇಲಿನ ನಿರ್ಬಂಧಗಳನ್ನು ಸಚಿವಾಲಯ ತೆಗೆದುಹಾಕಿದೆ.

Civil Aviation Ministry Removes Curbs On Number Of Flights Between India-Ukraine

ಚಾರ್ಟರ್ಡ್ ವಿಮಾನಗಳು ಸೇರಿದಂತೆ ಯಾವುದೇ ವಿಮಾನಗಳನ್ನು ಉಭಯ ದೇಶಗಳ ನಡುವೆ ಕಾರ್ಯನಿರ್ವಹಿಸಬಹುದಾಗಿದೆ. ಬೇಡಿಕೆಯ ಹೆಚ್ಚಳದಿಂದಾಗಿ ಉಕ್ರೇನ್‌ಗೆ ವಿಮಾನಗಳ ಹಾರಾಟ ನಡೆಸಲು ವಿದೇಶಾಂಗ ಸಚಿವಾಲಯಗಳನ್ನು ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಚಿವಾಲಯವು ವಿಮಾನ ಸೇವೆಗಳಿಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

ಮಾರ್ಚ್ 23, 2020ರಿಂದ ಭಾರತಕ್ಕೆ ಮತ್ತು ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಉಕ್ರೇನ್ ನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್, ಏರ್ ಅರೇಬಿಯಾ, ಫ್ಲೈ ದುಬೈ ಮತ್ತು ಕತಾರ್ ಏರ್‌ವೇಸ್ ಪ್ರಸ್ತುತ ಉಕ್ರೇನ್‌ನಿಂದ ಹಾರಾಟ ನಡೆಸುತ್ತಿವೆ.

ಉಕ್ರೇನ್ ವಿವಾದ: ನಮಗೆ ಯುದ್ಧ ಬೇಡ ಎಂದು ಹಿಂದೆ ಸರಿದ ರಷ್ಯಾಉಕ್ರೇನ್ ವಿವಾದ: ನಮಗೆ ಯುದ್ಧ ಬೇಡ ಎಂದು ಹಿಂದೆ ಸರಿದ ರಷ್ಯಾ

ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು, ಉಕ್ರೇನಿಯನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್, ಏರ್ ಇಂಡಿಯಾ, ಇತ್ಯಾದಿಗಳನ್ನು ಒಳಗೊಂಡಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನಗಳನ್ನು ಹಾರಾಟಕ್ಕೆ ತರಲು ಯೋಜಿಸಲಾಗುತ್ತದೆ. ದೃಢೀಕರಿಸಿದ ನಂತರ ರಾಯಭಾರ ಕಚೇರಿಯು ಅದರ ವಿವರಗಳನ್ನು ನೀಡುತ್ತದೆ ಎಂದಿದ್ದಾರೆ.

ಪ್ರಸ್ತುತ ಪರಿಸ್ಥಿತಿಯ ಅನಿಶ್ಚಿತತೆಯ ದೃಷ್ಟಿಯಿಂದ ಆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿತ್ತು.

ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನಗಳನ್ನು ಯೋಜಿಸಲಾಗುತ್ತಿದೆ ಎಂದು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಿಂದ ಭಾರತಕ್ಕೆ ವಿಮಾನಗಳ ಲಭ್ಯತೆಯಿಲ್ಲದ ಕುರಿತು ಹಲವಾರು ಮನವಿಗಳನ್ನು ಸ್ವೀಕರಿಸುತ್ತಿದೆ.

ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಭಯಭೀತರಾಗಬೇಡಿ, ಭಾರತಕ್ಕೆ ಪ್ರಯಾಣಿಸಲು ಲಭ್ಯವಿರುವ ಮತ್ತು ಅನುಕೂಲಕರ ವಿಮಾನಗಳನ್ನು ಕಾಯ್ದಿರಿಸಿ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

English summary
The Ministry of Civil Aviation has removed the curbs on the number of flights that can be operated between India and Ukraine under the bilateral air bubble arrangement to facilitate travel of Indians from the eastern European nation, according to a senior official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X