ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ?

|
Google Oneindia Kannada News

ನವದೆಹಲಿ, ಡಿಸೆಂಬರ್ 09: ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ(Citizenship Amendment Bill)ಯನ್ನು ಮೊದಲಿಗೆ ಲೋಕಸಭೆ ನಂತರ ಸಂಸತ್ತಿನ ಮೇಲ್ಮನೆಯಲ್ಲಿ ಎನ್ಡಿಎ ಸರ್ಕಾರ ಇಂದು ಮಂಡನೆ ಮಾಡಲಿದೆ. ಸಂಸತ್ತಿನ ಎರಡು ಸದನಗಳ ಅನುಮೋದನೆ ಪಡೆದುಕೊಳ್ಳಬೇಕು ಎಂಬ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿದೆ. ಆದರೆ, ರಾಜ್ಯಸಭೆಯಲ್ಲಿ ಮೋದಿ ಸರ್ಕಾರಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಾಗಿ ಬೇಕಿದೆ.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲ ನಿವಾಸಿಗಳು ಪೈಕಿ ಅನೇಕರು ಭಾರತವನ್ನು ಪ್ರವೇಶಿಸಿ ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಇಲ್ಲಿ ಹೀಗೆ ನೆಲೆಸಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಧರ್ಮದ ಜನರಿಗೆ ಕಾಯಂ ಪೌರತ್ವ ನೀಡಲು 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಂಡಿಸಲು ಸರ್ಕಾರ ಮುಂದಾಗಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ

ಮೇಲ್ಕಂಡ ಧರ್ಮಕ್ಕೆ ಸೇರಿದ ವ್ಯಕ್ತಿಗಳ ತಂದೆ ಭಾರತದಲ್ಲೇ ಜನಿಸಿದ ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲದಿದ್ದರೆ, ಆತ ಭಾರತದಲ್ಲಿ ಕನಿಷ್ಠ 6 ವರ್ಷಗಳ ಕಾಲ ನೆಲೆಸಿರುವುದಕ್ಕೆ ದಾಖಲೆ ತೋರಿಸಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಪ್ರಸ್ತಾವಿತ ಮಸೂದೆ ಅವಕಾಶ ನೀಡಲಿದೆ.

Citizenship Amendment Bill: How Do The Numbers Stack Up In The Rajya Sabha?

ದೆಹಲಿ, ರಾಜಸ್ತಾನ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಿಂದ ಬಂದ ಹಿಂದು, ಸಿಖ್, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಧರ್ಮದವರು ಭಾರತದ ಶಾಶ್ವತ ಪ್ರಜೆಗಳನ್ನಾಗಿ ಮಾಡಿ ಎಂದು ಮನವಿ ಮಾಡಿದ್ದರು.ಪೌರತ್ವ ಕಾಯ್ದೆ ಪ್ರಕಾರ , ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶವಿಲ್ಲ. ಆದರೆ ಹೊಸ ತಿದ್ದುಪಡಿ ಮಸೂದೆ ಅನ್ವಯ ಮುಸ್ಲಿಮೇತರರಿಗೆ ಸೇರಿದ ಅಕ್ರಮ ವಲಸಿಗರು ಭಾರತದಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದರೆ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಂಶವನ್ನು ಅನೇಕ ಮುಸ್ಲಿಮರು ವಿರೋಧಿಸಿದ್ದಾರೆ.

ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?

ರಾಜ್ಯಸಭೆಯಲ್ಲಿ ಸಂಖ್ಯಾಬಲ:
ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಮಾಡಿ ಒಪ್ಪಿಗೆ ಪಡೆಯಲು ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಿದೆ. ಕಾಂಗ್ರೆಸ್, ಟಿಡಿಪಿ, ಡಿಎಂಕೆ, ಎಎಪಿ, ಟಿಎಂಸಿ ಈಗಾಗಲೇ ಮಸೂದೆಯನ್ನು ವಿರೋಧಿಸಿವೆ. ಟಿಆರ್​ಎಸ್, ಎಸ್​ಪಿ, ಎನ್​ಪಿಎಫ್ ಕೂಡ ವಿರೋಧಿಸುವ ಸಾಧ್ಯತೆ ಇದೆ.

ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಮಸೂದೆ ಮಂಡಿಸಿದ್ದ ವೇಳೆ ಕೇಂದ್ರಕ್ಕೆ ಬಿಜು ಜನತಾದಳ, ಬಿಎಸ್​ಪಿ, ವೈಎಸ್​ಆರ್​ಸಿಪಿ ಬೆಂಬಲಿಸಿದ್ದನ್ನು ಸ್ಮರಿಸಬಹುದು. ಈಗ ಶಿರೋಮಣಿ ಅಕಾಲಿದಳ, ಜೆಡಿಯು, 11 ಸ್ಥಾನ ಹೊಂದಿರುವ ಎಐಎಡಿಎಂಕೆ ಕೂಡಾ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿವೆ. ಬಹುಕಾಲದ ಮಿತ್ರ ಪಕ್ಷ ಶಿವಸೇನಾ ಬಲವಾಗಿ ಮಸೂದೆಯನ್ನು ಖಂಡಿಸಿದೆ.

ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ?ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ?

ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದು, ಮಸೂದೆ ಅನುಮೋದನೆಗೊಳ್ಳಲು ಒಟ್ಟು 120 ರಿಂದ 122 ಸದಸ್ಯರ ಬೆಂಬಲ ಬೇಕಿದೆ. ಸದ್ಯ 238 ಸದಸ್ಯರಿದ್ದು, 119-120 ಸದಸ್ಯರು ಮಸೂದೆಯ ಪರ ಮತ ಹಾಕಿದರೆ ಬಿಜೆಪಿ ಗೆಲುವು ಸಾಧಿಸಬಹುದು. ಬಿಜೆಪಿ 83 ಸ್ಥಾನ ಹೊಂದಿದೆ. ಬಿಜೆಡಿ(7), ತೆಲಂಗಾಣ ರಾಷ್ಟ್ರೀಯ ಸಮಿತಿ(6), ವೈಎಸ್ ಆರ್ ಕಾಂಗ್ರೆಸ್ (2) ಬೆಂಬಲದ ಮೇಲೆ ಬಿಜೆಪಿ ನಂಬಿಕೆ ಇರಿಸಿಕೊಂಡಿದೆ.

 ಅಕ್ರಮ ವಲಸಿಗರಿಗೆ ಭಾರತದ ಪೌರತ್ವ

ಅಕ್ರಮ ವಲಸಿಗರಿಗೆ ಭಾರತದ ಪೌರತ್ವ

ದೆಹಲಿ, ರಾಜಸ್ತಾನ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಿಂದ ಬಂದ ಹಿಂದು, ಸಿಖ್, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಧರ್ಮದವರು ಭಾರತದ ಶಾಶ್ವತ ಪ್ರಜೆಗಳನ್ನಾಗಿ ಮಾಡಿ ಎಂದು ಮನವಿ ಮಾಡಿದ್ದರು. ಪೌರತ್ವ ಕಾಯ್ದೆ ಪ್ರಕಾರ , ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶವಿಲ್ಲ. ಆದರೆ ಹೊಸ ತಿದ್ದುಪಡಿ ಮಸೂದೆ ಅನ್ವಯ ಮುಸ್ಲಿಮೇತರರಿಗೆ ಸೇರಿದ ಅಕ್ರಮ ವಲಸಿಗರು ಭಾರತದಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದರೆ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಂಶವನ್ನು ಅನೇಕ ಮುಸ್ಲಿಮರು ವಿರೋಧಿಸಿದ್ದಾರೆ.

 ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಿದೆ

ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಿದೆ

ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಮಾಡಿ ಒಪ್ಪಿಗೆ ಪಡೆಯಲು ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಿದೆ. ಕಾಂಗ್ರೆಸ್, ಟಿಡಿಪಿ, ಡಿಎಂಕೆ, ಎಎಪಿ, ಟಿಎಂಸಿ ಈಗಾಗಲೇ ಮಸೂದೆಯನ್ನು ವಿರೋಧಿಸಿವೆ. ಟಿಆರ್​ಎಸ್, ಎಸ್​ಪಿ, ಎನ್​ಪಿಎಫ್ ಕೂಡ ವಿರೋಧಿಸುವ ಸಾಧ್ಯತೆ ಇದೆ.

 ವಸೇನಾ ಬಲವಾಗಿ ಮಸೂದೆಯನ್ನು ಖಂಡಿಸಿದೆ

ವಸೇನಾ ಬಲವಾಗಿ ಮಸೂದೆಯನ್ನು ಖಂಡಿಸಿದೆ

ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಮಸೂದೆ ಮಂಡಿಸಿದ್ದ ವೇಳೆ ಕೇಂದ್ರಕ್ಕೆ ಬಿಜು ಜನತಾದಳ, ಬಿಎಸ್​ಪಿ, ವೈಎಸ್​ಆರ್​ಸಿಪಿ ಬೆಂಬಲಿಸಿದ್ದನ್ನು ಸ್ಮರಿಸಬಹುದು. ಈಗ ಶಿರೋಮಣಿ ಅಕಾಲಿದಳ, ಜೆಡಿಯು, 11 ಸ್ಥಾನ ಹೊಂದಿರುವ ಎಐಎಡಿಎಂಕೆ ಕೂಡಾ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿವೆ. ಬಹುಕಾಲದ ಮಿತ್ರ ಪಕ್ಷ ಶಿವಸೇನಾ ಬಲವಾಗಿ ಮಸೂದೆಯನ್ನು ಖಂಡಿಸಿದೆ.

 ರಾಜ್ಯಸಭೆಯಲ್ಲಿ ಸಂಖ್ಯಾಬಲ?

ರಾಜ್ಯಸಭೆಯಲ್ಲಿ ಸಂಖ್ಯಾಬಲ?

ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದು, ಮಸೂದೆ ಅನುಮೋದನೆಗೊಳ್ಳಲು ಒಟ್ಟು 120 ರಿಂದ 122 ಸದಸ್ಯರ ಬೆಂಬಲ ಬೇಕಿದೆ. ಸದ್ಯ 238 ಸದಸ್ಯರಿದ್ದು, 119-120 ಸದಸ್ಯರು ಮಸೂದೆಯ ಪರ ಮತ ಹಾಕಿದರೆ ಬಿಜೆಪಿ ಗೆಲುವು ಸಾಧಿಸಬಹುದು. ಬಿಜೆಪಿ 83 ಸ್ಥಾನ ಹೊಂದಿದೆ. ಬಿಜೆಡಿ(7), ತೆಲಂಗಾಣ ರಾಷ್ಟ್ರೀಯ ಸಮಿತಿ(6), ವೈಎಸ್ ಆರ್ ಕಾಂಗ್ರೆಸ್ (2) ಬೆಂಬಲದ ಮೇಲೆ ಬಿಜೆಪಿ ನಂಬಿಕೆ ಇರಿಸಿಕೊಂಡಿದೆ.

English summary
Citizenship Amendment Bill: Seven seats of the 245-member Rajya Sabha are currently vacant. So the current strength of the Upper House is 238, and 120 votes are needed to pass any Bill. The BJP itself has 83 seats and together with its NDA allies it falls short of the halfway mark of 119.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X