• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮೀಕ್ಷೆ: ಭಾರತದಲ್ಲಿ ಉದ್ಯೋಗ ಮತ್ತು ಹಣಕಾಸು ಸಮಸ್ಯೆ ಅಧಿಕ!

By Mahesh
|

ಬೆಂಗಳೂರು, ಜುಲೈ 10 : ಸಿಗ್ನಾ ಟಿಟಿಕೆ ಇನ್ಶೂರೆನ್ಸ್, ಅಮೆರಿಕ ಮೂಲದ ಆರೋಗ್ಯ ಸೇವಾ ಕಂಪನಿಯಾದ ಸಿಗ್ನಾ ಕಾರ್ಪೊರೇಷನ್ ಹಾಗೂ ಭಾರತೀಯ ಉದ್ಯಮ ಸಮೂಹವಾದ ಟಿಟಿಕೆ ಗ್ರೂಪ್‍ನ ಜಂಟಿ ಸಹಭಾಗಿತ್ವದ ಕಂಪನಿಯಾಗಿದ್ದು, ಇಂದು 2018 ಸಿಗ್ನಾ 360 ಸಿಗ್ರಿ ಕ್ಷೇಮ ಸಮೀಕ್ಷೆ- ಭವಿಷ್ಯದ ಖಾತ್ರಿಯ 2018 ಸಿಗ್ನಾ 360 ಡಿಗ್ರಿ ವೆಲ್‍ಬೀಯಿಂಗ್ ಸರ್ವೆ- ಫ್ಯೂಚರ್ ಅಶ್ಶೂರ್ಡ್ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ಈ ಫಲಿತಾಂಶಗಳಿಂದ ತಿಳಿದುಬಂದಂತೆ, ಇತರ ಅಭಿವೃದ್ಧಿಶೀಲ ದೇಶಗಳು ಮತ್ತು ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಚೀನಾ, ಬ್ರೆಜಿಲ್ ಮತ್ತು ಇಂಡೋನೇಷ್ಯಾಗಳಿಗೆ ಹೋಲಿಸಿದರೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಒತ್ತಡದ ಪ್ರಮಾಣ ಅತ್ಯಧಿಕ.

ಭಾರತವು ಮಹಿಳೆಯರಿಗೆ ಅಪಾಯಕಾರಿ ದೇಶವಲ್ಲ: ಮಹಿಳಾ ಆಯೋಗ

ಇದೀಗ ನಾಲ್ಕನೇ ವರ್ಷದ ಸಮೀಕ್ಷೆಯಲ್ಲಿ ಭವಿಷ್ಯದ ಚಿಂತನೆಯ ದೃಷ್ಟಿಕೋನವನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿದ್ದು, ಫ್ಯೂಚರ್ ಅಶ್ಶೂರ್ಡ್ ಸಮೀಕ್ಷೆಯಲ್ಲಿ ಜನರ ಆರೀಗ್ಯ ಬಗೆಗಿನ ತಿಳಿವಳಿಕೆ ಮತ್ತು ಕಳಕಳಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಜತೆಗೆ ದೈಹಿಕ, ಕುಟುಂಬ, ಸಾಮಾಜಿಕ, ಹಣಕಾಸು ಮತ್ತು ವೃತ್ತಿ ಹೀಗೆ ಐದು ಪ್ರಮುಖ ಕ್ಷೇತ್ರಗಳಲ್ಲಿನ ಕ್ಷೇಮ ಬಗೆಗಿನ ಭಾವನೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಈ ವರ್ಷದ ಸಮೀಕ್ಷೆಯು ಸಿಗ್ನಾದ ಅತ್ಯಂತ ವಿಸ್ತøತ ಸಾರ್ವತ್ರಿಕ ಸಮೀಕ್ಷೆಯಾಗಿದ್ದು, 14500ಕ್ಕೂ ಅಧಿಕ ಜನರನ್ನು ವಿಶ್ವದ 23ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಸಂಪರ್ಕಿಸಲಾಗಿದೆ.

ಕ್ಷೇಮ ಸೂಚ್ಯಂಕದಲ್ಲಿ ಅಗ್ರಸ್ಥಾನ

ಕ್ಷೇಮ ಸೂಚ್ಯಂಕದಲ್ಲಿ ಅಗ್ರಸ್ಥಾನ

ಸತತ ನಾಲ್ಕನೇ ವರ್ಷ ಕೂಡಾ ಭಾರತ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಕ್ಷೇಮ ಸೂಚ್ಯಂಕದಲ್ಲಿ ಅಗ್ರಸ್ಥಾನವನ್ನು ಮುಂದುವರಿಸಿಕೊಂಡು ಹೋಗಿದೆ. ಭಾರತ ದೈಹಿಕ, ಸಾಮಾಜಿಕ ಹಾಗೂ ಕುಟುಂಬ ಕ್ಷೇಮದಲ್ಲಿ ಅಲ್ಪ ಇಳಿಕೆಯನ್ನು ದಾಖಲಿಸಿದೆ.

ಆದರೆ, ಉದ್ಯೋಗ ಮತ್ತು ಹಣಕಾಸು ಕ್ಷೇತ್ರದ ಕಲ್ಯಾಣದ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ದೈಹಿಕ ಕ್ಷೇತ್ರದಲ್ಲಿ ಗರಿಷ್ಠ ಶೇಕಡಾವಾರು ಇಳಿಕೆ ಕಂಡುಬಂದಿದ್ದು, ತೂಕ ಹಾಗೂ ಪೌಷ್ಟಿಕಾಂಶ ನಿರ್ವಹಣೆ ಮತ್ತು ನಿದ್ದೆಗೆ ಸಂಬಂಧಿಸಿದ ಸವಾಲುಗಳು ಇದಕ್ಕೆ ಕಾರಣ.

ಸಾಮಾಜಿಕ ಸ್ತಂಭ ಕ್ಷೇತ್ರದಲ್ಲಿ, ಭಾರತದ ಶೇಕಡ 50ಕ್ಕಿಂತಲೂ ಅಧಿಕ ಮಂದಿ, ತಾವು ಸ್ನೇಹಿತರ ಜತೆ ಸಾಕಷ್ಟು ಸಮಯ ಕಳೆಯುತ್ತೇವೆ ಅಥವಾ ಹವ್ಯಾಸಗಳಿಗೆ ಸಾಕಷ್ಟು ಸಮಯಾವಕಾಶ ಸಿಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕುಟುಂಬ ಕ್ಷೇಮ ಕ್ಷೇತ್ರದ ಇಳಿಕೆಗೆ ಪ್ರಮುಖ ಕಾರಣ, ಪೋಷಕರು ಹಾಗೂ ಮಕ್ಕಳಿಗೆ ಹಣಕಾಸು ಬೆಂಬಲ ನೀಡುವ ಸಾಮಥ್ರ್ಯಕ್ಕೆ ಸಂಬಂಧಿಸಿದ ಆತಂಕಗಳು.

ವೃದ್ಧರ ಶೋಷಣೆ: ಮಂಗಳೂರು ನಂ.1: ಸಮೀಕ್ಷೆ ವರದಿ

ಉದ್ಯೋಗಸ್ಥಳದ ಕ್ಷೇಮಕ್ಕೆ ಅತ್ಯಧಿಕ ಅಂಕ

ಉದ್ಯೋಗಸ್ಥಳದ ಕ್ಷೇಮಕ್ಕೆ ಅತ್ಯಧಿಕ ಅಂಕ

ಜನತೆ ವ್ಯಕ್ತಡಿಸಿದ ಅಭಿಪ್ರಾಯದಂತೆ ಕೆಲಸ ಮತ್ತು ಹಣಕಾಸು ವಿಷಯಗಳು ಅತ್ಯಧಿಕ ಪ್ರಮಾಣದ ಒತ್ತಡಕ್ಕೆ ಕಾರಣ. ಆದಾಗ್ಯೂ ಉದ್ಯೋಗ ಸ್ಥಳದ ಕ್ಷೇಮವು ಒಟ್ಟಾರೆ ಅತ್ಯಧಿಕ ಅಂಕಗಳನ್ನು ದಾಖಲಿಸಿದೆ.

ಸಮೀಕ್ಷೆಗೆ ಒಳಪಡಿಸಿದ ಶೇಕಡ 50ಕ್ಕಿಂತ ಅಧಿಕ ಮಂದಿ ಉದ್ಯೋಗಕ್ಷೇತ್ರದ ಕಲ್ಯಾಣ ಕಾರ್ಯಕ್ರಮಗಳಿಗೆ ತಮಗೆ ಬೆಂಬಲ ದೊರಕಿದೆ ಹಾಗೂ ತಾವು ಅದರಲ್ಲಿ ಪಾಲ್ಗೊಂಡಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುಪಾಲು ಅಂದರೆ ಶೇಕಡ 87ರಷ್ಟು ಮಂದಿ, ಉದ್ಯೋಗಸ್ಥಳದ ಕಲ್ಯಾಣ ಕಾರ್ಯಕ್ರಮಗಳು ಎರಡು ಸಂಭಾವ್ಯ ಉದ್ಯೋಗದಾತರನ್ನು ಆಯ್ಕೆ ಮಾಡುವಲ್ಲಿ ಮಹತ್ವದ ಅಂಶ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಪ್ರಸ್ತುತ ಉದ್ಯೋಗ ಸ್ಥಳದ ಕಲ್ಯಾಣ ಕಾರ್ಯಕ್ರ್ಮಗಳು ಅಲ್ಪಮಟ್ಟದ ಒತ್ತಡಕ್ಕೆ ಕಾರಣವಾದರೂ ಇದು ಬಹುತೇಕ ನಿರ್ವಹಿಸಬಹುದಾದ ಅಂಶ. ಇದರಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ ಎಂದು ಬಹುತೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ 570 ಜಿಲ್ಲೆಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತ: ಅಧ್ಯಯನ

ಒಳ್ಳೆಯ ಆರೋಗ್ಯವೇ ಒಳ್ಳೆಯ ವ್ಯವಹಾರ

ಒಳ್ಳೆಯ ಆರೋಗ್ಯವೇ ಒಳ್ಳೆಯ ವ್ಯವಹಾರ

"ಉದ್ಯೋಗಸ್ಥಳವು ಪ್ರತಿಯೊಬ್ಬ ಉದ್ಯೋಗಿಯ ಆರೋಗ್ಯ ಮತ್ತು ಕಲ್ಯಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉದ್ಯೋಗಕ್ಷೇತ್ರದ ಒತ್ತಡವನ್ನು ನಿರ್ವಹಿಸುವುದು ಕಾರ್ಪೊರೇಟ್ ವಲಯದಲ್ಲಿ ಮಹತ್ವದ್ದು; ಏಕೆಂದರೆ ಉದ್ಯೋಗಿಗಳ ಲಾಭದ ಪ್ಯಾಕೇಜ್‍ನಲ್ಲಿ ಕಾರ್ಪೊರೇಟ್ ಕಂಪನಿಗಳು ಆರೋಗ್ಯ ಮತ್ತು ಕಲ್ಯಾಣ ವಿಷಯವನ್ನೂ ಸೇರಿಸಿರುತ್ತಾರೆ.

ಉದ್ಯೋಗದಾತರು ಕೆಲಸದ ಅವಧಿಯನ್ನು ಸಡಿಲಿಸುವುದು ಅಥವಾ ಮಾನಸಿಕ ಕಲ್ಯಾಣ ಸೇರಿದಂತೆ ಒತ್ತಡ ನಿವಾರಣೆ ಯೋಜನೆಗಳಿಗೆ ಪ್ರಾಯೋಗಿಕ ಪರಿಹಾರವನ್ನು ನೀಡಬಹುದು. ಇಂಥ ಸೌಲಭ್ಯಗಳು ಉದ್ಯೋಗಿಗಳ ವಿಶ್ವಾಸವನ್ನು ಹೆಚ್ಚಿಸಲಿದ್ದು, ಉದ್ಯೋಗಸ್ಥಳದಲ್ಲಿ ತಮ್ಮ ಪಾತ್ರ ಮಹತ್ವದ್ದು ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ ಹಾಗೂ ಭವಿಷ್ಯದ ಬಗ್ಗೆ ಖಾತ್ರಿ ಇರುತ್ತದೆ.

ದಿನದ ಕೊನೆಗೆ ಒಳ್ಳೆಯ ಆರೋಗ್ಯವೇ ಒಳ್ಳೆಯ ವ್ಯವಹಾರ" ಎಂದು ಸಿಗ್ನಾ ಟಿಟಿಕೆ ಹೆಲ್ತ್ ಇನ್ಶೂರೆನ್ಸ್‍ನ ಆಡಳಿತ ನಿರ್ದೇಶಕ & ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸೂನ್ ಸಿಕ್ದರ್ ಹೇಳುತ್ತಾರೆ.

ಹಣಕಾಸು ಸನ್ನದ್ಧತೆಯೇ ಪ್ರಮುಖ ಆತಂಕ

ಹಣಕಾಸು ಸನ್ನದ್ಧತೆಯೇ ಪ್ರಮುಖ ಆತಂಕ

ಸಮೀಕ್ಷೆಯಿಂದ ತಿಳಿದುಬಂದಂತೆ, ಭಾರತದಲ್ಲಿ ಸಮೀಕ್ಷೆಗೆ ಒಳಪಟ್ಟ ಪ್ರತಿ ಇಬ್ಬರ ಪೈಕಿ ಒಬ್ಬರು, ತಮ್ಮ ಉಳಿತಾಯದಿಂದ ವೈದ್ಯಕೀಯ ವೆಚ್ಚವನ್ನು ವೃದ್ಧಾಪ್ಯದಲ್ಲಿ ಭರಿಸಲು ಯೋಜನೆ ಹಾಕಿಕೊಂಡಿದ್ದಾರೆ. ವೈದ್ಯಕೀಯ ವೆಚ್ಚಕ್ಕಾಗಿ ವಿಮೆಯನ್ನು ಆಯ್ಕೆ ಮಾಡಿಕೊಂಡಿರುವವರು ನಂತರದ ಸ್ಥಾನದಲ್ಲಿದ್ದಾರೆ.

ಭಾರತದ ಪ್ರತಿ 10 ಮಂದಿಯ ಪೈಕಿ ನಾಲ್ವರು, ಸ್ವತಃ ತಾವೇ ಆರೋಗ್ಯ ವಿಮೆಯನ್ನು ಖರೀದಿಸಿದ್ದಾರೆ. ವೃದ್ಧಾಪ್ಯಕ್ಕೆ ತಾವು ಸಿದ್ಧ ಎಂದು ಪ್ರತಿಪಾದಿಸುವ ವ್ಯಕ್ತಿಗಳು ಉತ್ತಮ ಯೋಜನೆಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ನಿಯತವಾಗಿ ಆರೊಗ್ಯ ತಪಾಸಣೆ ಮಾಡಿಸುತ್ತಾರೆ ಹಾಗೂ ವಿಮೆ ಮಾಡಿಸುತ್ತಾರೆ. ಇವರು ಸಾಮಾನ್ಯವಾಗಿ ಮಕ್ಕಳ ಮದುವೆ ಮಾಡಿರುತ್ತಾರೆ. ಈ ಪೈಕಿ ಬಹುತೇಕ ಮಂದಿ ಪೂರ್ಣಕಾಲಿಕ ಉದ್ಯೋಗಿಗಳು ಹಾಗೂ ಶ್ರೀಮಂತವರ್ಗದವರು.

ಆರೋಗ್ಯಮಾಹಿತಿ ಹಂಚಿಕೊಳ್ಳಲು ಉತ್ಸುಕ

ಆರೋಗ್ಯಮಾಹಿತಿ ಹಂಚಿಕೊಳ್ಳಲು ಉತ್ಸುಕ

ಭಾರತದಲ್ಲಿ ಖಾಸಗಿ ಆರೋಗ್ಯ ಸೇವಾ ಕ್ಷೇತ್ರವು ಸಾರ್ವಜನಿಕರಿಗೆ ಪ್ರತಿ ಆಯಾಮಗಳಲ್ಲಿ ಶ್ರೇಷ್ಠ ಸೇವೆಯನ್ನು ಒದಗಿಸುತ್ತದೆ. ವೆಚ್ಚವನ್ನು ಹೊರತುಪಡಿಸಿದರೆ, ಖಾಸಗಿ ಆರೋಗ್ಯಸೇವೆ ಅತ್ಯುತ್ತಮ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದರ ಪರಿಣಾಮವಾಗಿ ಭಾರತದಲ್ಲಿ ಖಾಸಗಿ ವಲಯದ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಲ್ಲ ವೈದ್ಯಕೀಯ ಸ್ಥಿತಿಯಲ್ಲಿ ಜನ ಇದನ್ನೇ ಬಹುತೇಕ ಬಳಕೆ ಮಾಡಿಕೊಳ್ಳುತ್ತಾರೆ.

ಭಾರತದಲ್ಲಿ ಇನ್ನೊಂದು ವೈಶಿಷ್ಟ್ಯವೆಂದರೆ ತಮ್ಮ ಆರೋಗ್ಯ ಮಾಹಿತಿಗಳನ್ನು ಹಂಚಿಕೊಳ್ಳುವಲ್ಲಿ ಜನರಿಗೆ ಅತೀವ ಆಸಕ್ತಿ. ಸಮೀಕ್ಷೆಗೆ ಒಳಪಡಿಸಿದ ವ್ಯಕ್ತಿಗಳ ಪೈಕಿ ಶೇಕಡ 90ರಷ್ಟು ಮಂದಿ, ತಮ್ಮ ಆರೋಗ್ಯ ಮಾಹಿತಿಗಳನ್ನು ಹಂಚಿಕೊಳ್ಳಲು ಮುಕ್ತ ಮನಸ್ಸಿನಿಂದ ಇರುವುದಾಗಿ ಹೇಳಿದ್ದಾರೆ. ಇದು ವೆಚ್ಚ ಕಡಿಮೆಯಾಗಲು ಮತ್ತು ಉತ್ತಮ ಚಿಕಿತ್ಸೆಗೆ ನೆರವಾಗುತ್ತದೆ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಈ ಆರೋಗ್ಯ ಮಾಹಿತಿಯನ್ನು ಹೇಗೆ ಬಳಕೆ ಮಾಡಿಕೊಳ್ಳುತ್ಥಾರೆ ಎನ್ನುವುದು ಮುಖ್ಯವಾಗಿದ್ದು, ಶೇಕಡ 50ರಷ್ಟು ಮಂದಿ ತಮ್ಮ ಆರೋಗ್ಯ ಮಾಹಿತಿಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎನ್ನುವುದನ್ನು ತಾವು ತಿಳಿಯಬಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

2018 ಸಿಗ್ನಾ 360 ಡಿಗ್ರಿ ವೆಲ್‍ಬೀಯಿಂಗ್ ಸರ್ವೆ

2018 ಸಿಗ್ನಾ 360 ಡಿಗ್ರಿ ವೆಲ್‍ಬೀಯಿಂಗ್ ಸರ್ವೆ

2018 ಸಿಗ್ನಾ 360 ಡಿಗ್ರಿ ವೆಲ್‍ಬೀಯಿಂಗ್ ಸರ್ವೆ- ಫ್ಯೂಚರ್ ಅಶ್ಶೂರ್ಡ್‍ನಲ್ಲಿ ಒಟ್ಟು 14467 ಮಂದಿಯನ್ನು ಆನ್‍ಲೈನ್ ಮೂಲಕ ಸಂದರ್ಶಿಸಲಾಗಿದ್ದು, 2018ರ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ 23 ದೇಶಗಳು ಹಾಗೂ ಪ್ರದೇಶಗಳಲ್ಲಿ ನಡೆಸಲಾಗಿದೆ. ಇದರ ಮಾಹಿತಿಯನ್ನು ಇಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಸಿಗ್ನಾ ಟಿಟಿಕೆ ಹೆಲ್ತ್‍ಕೇರ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಬಗ್ಗೆ

ಸಿಗ್ನಾ ಟಿಟಿಕೆ ಹೆಲ್ತ್‍ಕೇರ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಅಮೆರಿಕ ಮೂಲದ ಜಾಗತಿಕ ಆರೋಗ್ಯಸೇವಾ ಅಗ್ರಗಣ್ಯ ಕಂಪನಿಯಾದ ಸಿಗ್ನಾ ಕಾರ್ಪೊರೇಷನ್ ಮತ್ತು ಭಾರತದ ಉದ್ಯಮಸಮೂಹವಾದ ಟಿಟಿಕೆ ಗ್ರೂಪ್‍ನ ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ. ಸಿಗ್ನಾ ಕಾರ್ಪೊರೇಷನ್ (ಎನ್‍ವೈಎಸ್‍ಇ:ಸಿಐ), 30 ದೇಶಗಳ ವ್ಯಾಪ್ತಿಯಲ್ಲಿ ತನ್ನ ಉತ್ಪನ್ನಗಳ ಮಾರಾಟ ಮಾಡುತ್ತಿದೆ ಹಾಗೂ 95 ದಶಲಕ್ಷಕ್ಕೂ ಅಧಿಕ ಗ್ರಾಹಕ ಸಂಪರ್ಕವನ್ನು ವಿಶ್ವಾದ್ಯಂತ ಹೊಂದಿದೆ. ಟಟಿಕೆ ಭಾರತದಲ್ಲಿ ವಿಸ್ತøತವಾಗಿ ಖ್ಯಾತಿ ಇರುವ ಕಂಪನಿಯಾಗಿದ್ದು, ಗುಣಮಟ್ಟದ ಗ್ರಾಹಕ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಕಳೆದ ಎಂಟು ದಶಕಗಳಿಂದ ಜನಜನಿತವಾಗಿದೆ.

English summary
India sees high level of stress due to work and finance related issues, reveals 2018 Cigna 360° Well-being Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more