ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಭದ್ರತೆಯ ವೆಚ್ಚದ ವಿವರ ಬಹಿರಂಗಕ್ಕೆ ಸಿಐಸಿ ನಕಾರ

|
Google Oneindia Kannada News

ನವದೆಹಲಿ, ಆಗಸ್ಟ್ 27: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಿರುವ ಭದ್ರತೆಯ ವೆಚ್ಚವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತಿಳಿಸಿದೆ.

ಖಾಸಗಿ ಮಾಹಿತಿ ಹಾಗೂ ಸುರಕ್ಷತೆಯ ಕಾರಣಗಳಿಂದ ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಿಐಸಿ ಹೇಳಿದೆ.

ಮೋದಿ ನಾಲ್ಕು ವರ್ಷದ ವಿದೇಶ ಪ್ರಯಾಣ ವೆಚ್ಚ 355 ಕೋಟಿಮೋದಿ ನಾಲ್ಕು ವರ್ಷದ ವಿದೇಶ ಪ್ರಯಾಣ ವೆಚ್ಚ 355 ಕೋಟಿ

ಖಾಸಗಿ ವ್ಯಕ್ತಿ ಮತ್ತು ಅಧಿಕಾರಿಗಳಿಗೆ ಭದ್ರತಾ ಸೌಲಭ್ಯವನ್ನು ಒದಗಿಸುವ ಆಡಳಿತ ನಿಯಮಗಳ ಕುರಿತು ಸಹ ವಿವರ ನೀಡಲಾಗದು ಎಂದು ಸಹ ಅರ್ಜಿದಾರರಿಗೆ ಅದು ತಿಳಿಸಿದೆ.

CIC denied to disclose Amit Shahs secrurity expenses

ಅಮಿತ್ ಶಾ ಅವರು ರಾಜ್ಯಸಭೆಯ ಸದಸ್ಯರಾಗುವ ಮೊದಲು, 2014ರ ಜುಲೈ 5ರಂದು ಅರ್ಜಿ ಸಲ್ಲಿಸಿದ್ದ ಆರ್‌ಟಿಐ ಕಾರ್ಯಕರ್ತ ದೀಪಕ್ ಜುನೇಜಾ, ಸರ್ಕಾರದಿಂದ ಭದ್ರತೆ ಪಡೆದುಕೊಂಡಿರುವ ಜನರ ಪಟ್ಟಿಯನ್ನು ನೀಡುವಂತೆಯೂ ಕೋರಿದ್ದರು.

ಯಾವುದೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಮಾಹಿತಿಯನ್ನು ಹೊರತಾಗಿಸುವ ಸೆಕ್ಷನ್ 8 (1) (g) ಅಡಿಯಲ್ಲಿ ಒದಗಿಸಲು ಸಾಧ್ಯವಿಲ್ಲ ಎಂದು ಗೃಹಸಚಿವಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.

ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ ಬರೋಬ್ಬರಿ ಶೇ 539 ರಷ್ಟು ಏರಿಕೆ!ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ ಬರೋಬ್ಬರಿ ಶೇ 539 ರಷ್ಟು ಏರಿಕೆ!

ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) jಅನ್ನೂ ಉಲ್ಲೇಖಿಸಿದ್ದ ಸಚಿವಾಲಯ, ಖಾಸಗಿತನಕ್ಕೆ ಭಂಗತರುವಂತಹ ಮಾಹಿತಿ ಮತ್ತು ಸಾರ್ವಜನಿಕ ಚಟುವಟಿಕೆಗೆ ಸಂಬಂಧವಿರದ ಮಾಹಿತಿಗಳನ್ನು ನೀಡಲಾಗದು ಎಂದಿತ್ತು. ಇದನ್ನು ಎತ್ತಿಹಿಡಿದಿದ್ದ ಸಿಐಸಿ, ಸಂಸತ್‌ನಲ್ಲಿ ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

'ಜಾಹೀರಾತಿಗಾಗಿ ಸಿದ್ದರಾಮಯ್ಯ ಸರ್ಕಾರ 226 ಕೋಟಿ ಖರ್ಚು ಮಾಡಿದೆ''ಜಾಹೀರಾತಿಗಾಗಿ ಸಿದ್ದರಾಮಯ್ಯ ಸರ್ಕಾರ 226 ಕೋಟಿ ಖರ್ಚು ಮಾಡಿದೆ'

ಸಿಐಸಿ ಆದೇಶವನ್ನು ಜುನೇಜಾ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿದಾರರು ಬಯಸಿದ ಮಾಹಿತಿಯು ಸೆಕ್ಷನ್ 8(1) g ಮತ್ತು j ಅಡಿಯಿಂದ ಹೊರತಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮತ್ತೆ ಪರಿಶೀಲಿಸುವಂತೆ ಸಿಐಸಿಗೆ ಕೋರ್ಟ್ ಸೂಚಿಸಿತ್ತು.

ಗೃಹಸಚಿವಾಲಯ ಮತ್ತು ಜುನೇಜಾ ಅವರ ಹೇಳಿಕೆಗಳನ್ನು ಮತ್ತೆ ಪರಿಶೀಲನೆಗೆ ಒಳಪಡಿಸಿದ ಸಿಐಸಿಯ ಆಯುಕ್ತ ಯಶೋವರ್ಧನ್ ಆಜಾದ್, ಜೀವಬೆದರಿಕೆಗೆ ಒಳಗಾಗಿರುವ ವ್ಯಕ್ತಿಯ ಭದ್ರತೆಯ ವಿವರಗಳನ್ನು ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Central Information Commission again denied to reveal the information of security expenses given to Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X