ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ವಿರುದ್ಧ ಸಂಘಟಿತರಾಗಿ ಹೋರಾಡಿ: ಚರ್ಚ್‌ಗಳಲ್ಲಿ ಕರೆ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಕ್ರಿಸ್ ಮಸ್ ಸಂಭ್ರಮಾಚರಣೆಗಳ ವೇಳೆ ಚರ್ಚ್‌ಗಳಲ್ಲಿ ಬದುಕಿನ ಸಂಕಷ್ಟದ ಸಮಯದ ಸವಾಲುಗಳನ್ನು ಎದುರಿಸುವುದು ಹೇಗೆ ಎಂದು ನೀಡಲಾಗುವ ಸಾಮಾನ್ಯ ಧರ್ಮೋಪದೇಶಗಳ ನಡುವೆ ಈ ಬಾರಿ ನಾಲ್ಕು ರಾಜ್ಯಗಳಲ್ಲಿನ ಚರ್ಚ್‌ಗಳ ಧಾರ್ಮಿಕ ಮುಖಂಡರು ಪೌರತ್ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್‌ಸಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎನ್ನಲಾಗಿದೆ.

ದೇಶದಲ್ಲಿನ ರಾಜಕೀಯ ದ್ವೇಷವನ್ನು ಅಂತ್ಯಗಾಣಿಸಬೇಕು. ಅದಕ್ಕಾಗಿ ಹೊಸ ಕಾನೂನಿನ ವಿರುದ್ಧ ಪ್ರಾಚೀನ ಸೇಂಟ್ ಪೌಲ್ಸ್ ಕ್ಯಾಥೆಡ್ರಲ್‌ನಿಂದ ಎಲ್ಲ ಚರ್ಚ್‌ಗಳ ಸದಸ್ಯರೂ ಸೇರಿ ಗುರುವಾರ ಬೃಹತ್ ಮೆರವಣಿಗೆ ನಡೆಸುವಂತೆ ಕೋಲ್ಕತಾದಲ್ಲಿ ಕರೆ ನೀಡಲಾಗಿದೆ. ಗುರುವಾರದ ಮೆರವಣಿಗೆಗೆ ಕ್ರೈಸ್ತರು ಮಾತ್ರವಲ್ಲದೆ ಎಲ್ಲ ಧರ್ಮಗಳ ಜನರು ಸಿಎಎ ವಿರುದ್ಧ ಸೇರಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದು ಕೋಲ್ಕತಾದ ಧಾರ್ಮಿಕ ಮುಖಂಡರೊಬ್ಬರು ತಿಳಿಸಿದ್ದಾರೆ.

ಪ್ರತಿಭಟನೆಯಿಂದ ಆಸ್ತಿ ಹಾನಿ: ನಷ್ಟ ಪರಿಹಾರ ನೀಡುವಂತೆ ಸರ್ಕಾರ ನೊಟೀಸ್ಪ್ರತಿಭಟನೆಯಿಂದ ಆಸ್ತಿ ಹಾನಿ: ನಷ್ಟ ಪರಿಹಾರ ನೀಡುವಂತೆ ಸರ್ಕಾರ ನೊಟೀಸ್

ಉತ್ತರ ಭಾರತದ ಚರ್ಚ್‌ಗಳಲ್ಲಿಯೇ ಪ್ರಮುಖ ಸ್ಥಾನ ಹೊಂದಿರುವ ಕೋಲ್ಕತಾದ ಸೇಂಟ್ ಪೌಲ್ ಕ್ಯಾಥೆಡ್ರಲ್‌ನಲ್ಲಿನ ಪ್ರಸಿದ್ಧ ಮಧ್ಯರಾತ್ರಿ ಧರ್ಮೋಪದೇಶದಲ್ಲಿ 'ಪ್ರಸ್ತುತದ ವಿಭಜನೀಯ ವಾತಾವರಣ'ದ ನಡುವೆ 'ಏಕತೆ ಮತ್ತು ಶಾಂತಿ'ಯನ್ನು ಕಾಪಾಡುವ ಮಾರ್ಗಗಳನ್ನು ಕಂಡುಕೊಳ್ಳುವ ಕುರಿತು ಅಭಿಪ್ರಾಯ ವ್ಯಕ್ತವಾಯಿತು.

Churches Christmas Sermons Calls People To Oppose CAAs

'ದಬ್ಬಾಳಿಕೆ ಮಾಡುವ ದುಷ್ಕರ್ಮಿಗಳಲ್ಲಿ ದೇವರ ಭಯವನ್ನು ಮೂಡಿಸಬೇಕಿದೆ. ಜನರಲ್ಲಿ ಈ ರೀತಿಯ ಮಾನಸಿಕ ಭಯವನ್ನು ಬಿತ್ತುವ ಬದಲು ಅವರು ಎತ್ತ ಸಾಗುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇಲ್ಲಿ ನೆರೆದಿರುವ ಜನಸಮೂಹಕ್ಕೆ ಹೇಳುತ್ತಿದ್ದೇನೆ, ಎನ್‌ಆರ್‌ಸಿ ಅಥವಾ ಸಿಎಎ ಬಗ್ಗೆ ಕಳವಳ ಪಡುವುದು ಬೇಡ. ತಮ್ಮ ಬಳಿ ಅಗತ್ಯ ದಾಖಲೆಗಳಿರಲಿ, ಇಲ್ಲದಿರಲಿ ಜನರ ಮನಸ್ಸಿನಲ್ಲಿರುವ ಆತಂಕವನ್ನು ಹೊರತೆಗೆಯುವ ಮೂಲಕ ಬಡವರು ಮತ್ತು ಅಗತ್ಯ ಇರುವವರಿಗೆ ಸಹಾಯ ಮಾಡಿ' ಎಂದು ಸೇಂಟ್ ಜಾನ್ಸ್ ಚರ್ಚ್‌ನ ಫಾದರ್ ಪ್ರದೀಪ್ ನಂದ ಹೇಳಿದರು.

ಸುತ್ತಲೂ ಪೊಲೀಸರು, ಗಾಂಧಿ ಚಿತ್ರ ಕೈಯಲ್ಲಿ: ಯಾರೀ ಯುವ ನಾಯಕಿ?ಸುತ್ತಲೂ ಪೊಲೀಸರು, ಗಾಂಧಿ ಚಿತ್ರ ಕೈಯಲ್ಲಿ: ಯಾರೀ ಯುವ ನಾಯಕಿ?

ಕೇರಳದ ಸೈರೊ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ ಕೂಡ ಕಠಿಣ ಸಂದೇಶ ರವಾನಿಸಿದ್ದು, 'ಜನರು ಮತ್ತು ಸಮಾಜದ ನಡುವೆ ಭಿನ್ನಾಭಿಪ್ರಾಯ ಹಾಗೂ ವಿಭಜನೆಯನ್ನು ಸೃಷ್ಟಿಸುವ ಮೂಲಕ ನಮ್ಮನ್ನು ಉದ್ವಿಗ್ನಗೊಳಿಸಲಾಗುತ್ತಿದೆ' ಎಂದು ಆರೋಪಿಸಲಾಗಿದೆ.

ತೆಲಂಗಾಣದ ಸಿಕಂದರಾಬಾದ್ ಮತ್ತು ಅಸ್ಸಾಂನ ದಿಬ್ರುಗಡ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಕೂಡ ಸಿಎಎ ವಿರುದ್ಧದ ಸಂಘಟಿತ ಹೋರಾಟಕ್ಕೆ ಕರೆ ನೀಡಲಾಗಿದೆ.

English summary
Some churches across India during Christmas eve and morning sermons called people to fight against CAA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X