ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷ, ಕ್ರಿಸ್‌ಮಸ್‌ ಆಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯಗಳ ಪಟ್ಟಿ

|
Google Oneindia Kannada News

ನವದೆಹಲಿ, ಡಿಸೆಂಬರ್ 22: ದೇಶಾದ್ಯಂತ ಎರಡನೇ ಹಂತದ ಕೊರೊನಾ ಅಲೆ ಬೀಸಲಿದೆ ಎನ್ನುವ ಎಚ್ಚರಿಕೆಗಳನ್ನು ಆರೋಗ್ಯ ತಜ್ಞರು ನೀಡುತ್ತಿದ್ದಾರೆ.

ಹೀಗಾಗಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯ ಮೇಲೆ ನಿರ್ಬಂಧ ಹೇರಬೇಕೆನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಇಲ್ಲಿಯವರೆಗೆ ಕೇವಲ ಐದು ರಾಜ್ಯಗಳು ಮಾತ್ರ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗಳ ಮೇಲೆ ನಿಯಂತ್ರಣ ಹೇರಿವೆ.

ಕೋವಿಡ್ ರೂಪಾಂತರ: ನೈಟ್ ಕರ್ಫ್ಯೂ ಹಾಕುವ ಬಗ್ಗೆ ಯಡಿಯೂರಪ್ಪ ಮಹತ್ವದ ಹೇಳಿಕೆ!ಕೋವಿಡ್ ರೂಪಾಂತರ: ನೈಟ್ ಕರ್ಫ್ಯೂ ಹಾಕುವ ಬಗ್ಗೆ ಯಡಿಯೂರಪ್ಪ ಮಹತ್ವದ ಹೇಳಿಕೆ!

ಸದ್ಯಕ್ಕೆ ಕರ್ನಾಟಕ,ಮಹಾರಾಷ್ಟ್ರ,ಹಿಮಾಚಲಪ್ರದೇಶ, ಪಂಜಾಬ್ ಮತ್ತು ಮಣಿಪುರದಲ್ಲಿ ನಿಯಂತ್ರಣ ಹೇರಲಾಗಿದೆ.

Christmas And New Year Celebration, State Wise List Of Night Curfew

ರಾಜ್ಯವಾರು ನಿರ್ಬಂಧದ ನಿಯಮಗಳು ಹೀಗಿವೆ

ಕರ್ನಾಟಕ: ಇಂಗ್ಲೆಂಡ್‌ನಲ್ಲಿ ಪತ್ತೆ ಆಗಿರುವ ಕೊರೊನಾ ವೈರಸ್‌ನ ಹೊಸ ಪ್ರಬೇಧ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ನೂಕಿದೆ. ಯು.ಕೆ. ಡೆನ್ಮಾರ್ಕ್, ನೆದರ್ ಲ್ಯಾಂಡ್ ಮೊದಲಾದ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬಗೆಯ ವೈರಾಣು ಹರಡಿರುವುದು ಪತ್ತೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಇಂದು (ಡಿ.22) ರಾತ್ರಿಯಿಂದ ಇಂಗ್ಲೆಂಡ್‌ನಿಂದ ಬರುವ ಎಲ್ಲ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ಇಂಗ್ಲೆಂಡ್‌ನಿಂದ ನಿನ್ನೆ ರಾಜ್ಯಕ್ಕೆ ಒಟ್ಟು 537 ಜನರು ರಾಜ್ಯಕ್ಕೆ ಬಂದಿದ್ದರು. ಅವರಲ್ಲಿ 138 ಜನರು ಕೋವಿಡ್ ನೆಗೆಟಿವ್ ವರದಿ ತಂದಿರಲಿಲ್ಲ.

ರಾಜ್ಯ ಸರ್ಕಾರವೂ ಹೊಸ ಬಗೆಯ ಕೋರೊನಾ ವೈರಸ್ ಕುರಿತು ಕ್ರಮಕೈಗೊಂಡಿದೆ. ಹೀಗಾಗಿ ಮತ್ತೊಮ್ಮೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಕೊರೋನಾ ರೂಪಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.

ಮಹಾರಾಷ್ಟ್ರ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಜನವರಿ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಮಾಡಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಕರ್ಫ್ಯೂ ಡಿಸೆಂಬರ್ 22ರಿಂದ ಆರಂಭವಾಗಲಿದೆ.

ಮಹಾರಾಷ್ಟ್ರದಲ್ಲಿ ಇಂದು 3811 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 18,96,518 ಮಂದಿ ಕೊರೊನಾ ಸೋಂಕಿತರಿದ್ದಾರೆ. 17.84 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ನಿನ್ನೆ 98 ಮಂದಿ ಮೃತಪಟ್ಟಿದ್ದು, ಇದುವರೆಗೆ 48,746 ಮಂದಿ ಸಾವನ್ನಪ್ಪಿದಂತಾಗಿದೆ. ರಾಜ್ಯದಲ್ಲಿ ಈಗ 62,743 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ 586 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 2,86,850 ಪ್ರಕರಣಗಳಿವೆ.

ಹಿಮಾಚಲಪ್ರದೇಶ: ಡಿಸೆಂಬರ್ 14ರಿಂದ ಜನವರಿ 5ರವರೆಗೆ ಹಿಮಾಚಲ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಇರಲಿದೆ. ಅದರಲ್ಲೂ ಎಂಟು ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ .

ಪಂಜಾಬ್: ಜನವರಿ 1ರ ವರೆಗೆ ರಾತ್ರಿ ಕ್ರಫ್ಯೂ ವಿಧಿಸಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಮಣಿಪುರ: ನವೆಂಬರ್ ಅಂತ್ಯದಿಂದ ರಾತ್ರಿ ಕರ್ಫ್ಯೂ ಜಾರಿಮಾಡಲಾಗಿದೆ. ಸಂಜೆ 6 ರಿಂದ ಬೆಳಗಿನ ಜಾವ ನಾಲ್ಕರವರೆಗೆ ವರ್ಷಾಂತ್ಯದವರೆಗೂ ಈ ಕರ್ಫ್ಯೂ ಮುಂದುವರೆಯಲಿದೆ.

English summary
India is witnessing a reduction in the daily number of COVID-19 cases being reported, but the news of a new "out-of-control" coronavirus strain found in the UK has sent the government into a spiral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X