• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ

By Prasad
|

ತಿರುವನಂತಪುರಂ, ಜುಲೈ 12 : ಮತ್ತೊಬ್ಬ ಪಾದ್ರಿಯೊಂದಿಗೆ ತನಗೆ ದೈಹಿಕ ಸಂಬಂಧವಿದೆ ಎಂದು ತಪ್ಪೊಪ್ಪಿಕೊಂಡ ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡ ಪಾದ್ರಿಯನ್ನು ಗುರುವಾರ ಕೊಲ್ಲಂನಲ್ಲಿ ಬಂಧಿಸಲಾಗಿದೆ.

ಕೊಲ್ಲಂ ನಿವಾಸಿಯಾಗಿರುವ 40 ವರ್ಷದ ಫಾದರ್ ಜಾಬ್ ಮ್ಯಾಥ್ಯೂ, ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. 2009ರಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದನ್ನೇ ಬ್ಲಾಕ್ ಮೇಲ್ ಮಾಡಲು ಮತ್ತು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಂಡು ಧರ್ಮಗುರು ಈತ.

ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ

ಈ ಲೈಂಗಿಕ ಹಗರಣ ಕೇರಳದಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿದ್ದು, ಕ್ರೈಸ್ತ ಧಾರ್ಮಿಕ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿದೆ. ಶಾಲಾ ಶಿಕ್ಷಕಿಯಾಗಿರುವ ಆ ಮಹಿಳೆಯನ್ನು ಒಬ್ಬಿಬ್ಬರಲ್ಲಿ ನಾಲ್ವರು ಪಾದ್ರಿಗಳು ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾರೆ.

ಚರ್ಚ್ ಲೈಂಗಿಕ ಹಗರಣದಲ್ಲಿ ನಾಲ್ವರು ಪಾದ್ರಿಗಳ ವಿರುದ್ಧ ಪ್ರಕರಣ ದಾಖಲು

ಎರಡು ದಿನಗಳ ಹಿಂದೆ ಮೂವರು ಪಾದ್ರಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕೇರಳ ಹೈ ಕೋರ್ಟ್ ಆ ಅರ್ಜಿಗಳನ್ನು ತಿರಸ್ಕರಿಸಿದೆ. ಕೂಡಲೆ ಕಾರ್ಯಪ್ರವೃತ್ತರಾದ ಕ್ರೈಂ ರೆಕಾರ್ಡ್ ಬ್ಯೂರೋ ಪೊಲೀಸರು ಒಬ್ಬ ಪಾದ್ರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವರದಿಯ ಪ್ರಕಾರ, ಮ್ಯಾಥ್ಯೂನೇ ಶರಣಾಗತನಾಗಿದ್ದಾನೆ.

ನಾಲ್ವರು ಪಾದ್ರಿಗಳ ಹೆಸರು ಪ್ರಸ್ತಾಪ

ನಾಲ್ವರು ಪಾದ್ರಿಗಳ ಹೆಸರು ಪ್ರಸ್ತಾಪ

ಮಹಿಳೆ ಅಪ್ರಾಪ್ರ ವಯಸ್ಕಳಾಗಿದ್ದಾಗಲೇ (ಹದಿನಾರರ ಹರೆಯ) ಚರ್ಚಿನಲ್ಲಿ ಓದುತ್ತಿದ್ದ ಪಾದ್ರಿ (ಯುವಕನಾಗಿದ್ದಾಗ) ಆಕೆಯೊಂದಿಗೆ ಸ್ನೇಹ ಬೆಳೆಸಿ, ಆತ್ಮೀಯತೆಯನ್ನು ದುರ್ಬಳಕೆ ಮಾಡಿಕೊಂಡು ದೈಹಿಕ ಸಂಬಂಧ ಬೆಳಸಿದ್ದ. ಮಹಿಳೆಯ ಮದುವೆಯ ನಂತರವೂ ಇದು ಹತ್ತು ವರ್ಷಗಳ ಕಾಲ ತನ್ನ ವಾಂಛೆಯನ್ನು ತೀರಿಸಿಕೊಳ್ಳುತ್ತಿದ್ದ. ಇದು ಅತಿರೇಕಕ್ಕೆ ಹೋಗುತ್ತಿದ್ದಂತೆ ಮಹಿಳೆಯ ಗಂಡನೇ ಚರ್ಚಿಗೆ ದೂರು ನೀಡಿದ್ದ. ಮಹಿಳೆಯ ಗಂಡ ಐವರು ಪಾದ್ರಿಗಳನ್ನು ಹೆಸರಿಸಿದ್ದರೆ, ಮಹಿಳೆ ನಾಲ್ವರು ಪಾದ್ರಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸೋನಿ ವರ್ಗೀಸ್, ಜಾಬ್ ಮ್ಯಾಥ್ಯೂ, ಅಬ್ರಹಾಂ ವರ್ಗೀಸ್ ಮತ್ತು ಫಾದರ್ ಜೈಸ್ ಕೆ ಜಾರ್ಜ್.

ಕೇರಳದಲ್ಲಿ ಪಾದ್ರಿಯಿಂದ ಮತ್ತೊಂದು ಅತ್ಯಾಚಾರ ಪ್ರಕರಣ

ಪರಿಚಯ, ಸ್ನೇಹ, ಆತ್ಮೀಯತೆ, ಲೈಂಗಿಕತೆ

ಪರಿಚಯ, ಸ್ನೇಹ, ಆತ್ಮೀಯತೆ, ಲೈಂಗಿಕತೆ

1999ರಲ್ಲಿ ಸೋನಿ ವರ್ಗೀಸ್ ಎಂಬ ವಿದ್ಯಾರ್ಥಿಯೊಂದಿಗೆ ಅಪ್ರಾಪ್ತ ವಯಸ್ಕಳಾಗಿದ್ದ ಮಹಿಳೆಗೆ ಚರ್ಚಿನಲ್ಲಿ ಗೆಳೆತನವಿತ್ತು. ಆಗ ಆಕೆಗೆ ಕೇವಲ ಹದಿನಾರರ ತುಂಬು ಹರೆಯ. ಸೋನಿ ವರ್ಗೀಸ್ ಮುಂದೆ ಪಾದ್ರಿಯಾದ ಮೇಲೂ ಮತ್ತು ತನ್ನ ಮದುವೆಯಾದ ಮೇಲೂ ಮಹಿಳೆಯ ಮೇಲೆ ಬಲಾತ್ಕಾರ ಮಾಡುತ್ತಿದ್ದ. ಇದು ಹತ್ತು ವರ್ಷಗಳ ಕಾಲ ನಡೆದಿದೆ.

ಕನ್ಫೆಷನ್ ಬಾಕ್ಸ್ ನಲ್ಲಿ ಮಹಿಳೆಯ ತಪ್ಪೊಪ್ಪಿಗೆ

ಕನ್ಫೆಷನ್ ಬಾಕ್ಸ್ ನಲ್ಲಿ ಮಹಿಳೆಯ ತಪ್ಪೊಪ್ಪಿಗೆ

2009ರಲ್ಲಿ ಪರಿಚಯವಾಗಿದ್ದು ಜಾಬ್ ಮ್ಯಾಥ್ಯೂ. ಅವರ ಮುಂದೆ ತನಗೆ ಸೋನಿ ವರ್ಗೀಸ್ ಜೊತೆ ಸಂಬಂಧವಿದೆ ಮತ್ತು ಮದುವೆಯ ನಂತರವೂ ಆತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಕನ್ಫೆಷನ್ ಬಾಕ್ಸ್ ನಲ್ಲಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಜಾಬ್ ಮ್ಯಾಥ್ಯೂ ಬಿಡಬೇಕಲ್ಲ? ಆತನೂ ಮಹಿಳೆಯ ಅಸಹಾಯಕತೆಯನ್ನು ದುರ್ಬಳಸಿಕೊಂಡು, ಆಕೆಗೆ ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಅತ್ಯಾಚಾರವನ್ನೂ ಮಾಡಿದ್ದಾನೆ.

ಗಂಡನಿಗೆ ಹೇಳುವುದಾಗಿ ಬೆದರಿಸಿ ಅತ್ಯಾಚಾರ

ಗಂಡನಿಗೆ ಹೇಳುವುದಾಗಿ ಬೆದರಿಸಿ ಅತ್ಯಾಚಾರ

ಫಾದರ್ ಸೋನಿ ವರ್ಗೀಸ್ ಜೊತೆಗಿನ ಲೈಂಗಿಕ ಸಂಬಂಧ, ಸೋನಿ ನೀಡಿದ್ದ ಬೆದರಿಕೆ, ಅತ್ಯಾಚಾರ ಮಾಡಿದ್ದ ಸಂಗತಿಯ ತಪ್ಪೊಪ್ಪಿಗೆ ಹೇಳಿಕೆಯನ್ನು ಆಕೆಯ ಗಂಡನಿಗೆ ತಿಳಿಸುವುದಾಗಿ ಬೆದರಿಸಿ, ಪಕ್ಕದ ಚರ್ಚ್ ಪಾದ್ರಿ ಜಾಬ್ ವರ್ಗೀಸ್ ತನ್ನ ಚರ್ಚಿಗೆ ಮಹಿಳೆಯನ್ನು ಕರೆಸಿಕೊಂಡು ಆಕೆಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡಿರುವುದು ಗುರುತರ ಅಪರಾಧ ಎಂದು ಹೇಳಿರುವ ಕೋರ್ಟ್ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದೆ.

ಎಲ್ಲ ಪಾದ್ರಿಗಳು ಈ ಅಪರಾಧದಲ್ಲಿ ಸಮಾನರು

ಎಲ್ಲ ಪಾದ್ರಿಗಳು ಈ ಅಪರಾಧದಲ್ಲಿ ಸಮಾನರು

ಯಾವುದೇ ಸಂದರ್ಭದಲ್ಲಿ ಲೈಂಗಿಕ ಕೃತ್ಯಕ್ಕೆ ತನ್ನ ಸಹಮತ ಇರಲಿಲ್ಲ. ಎಲ್ಲ ನಾಲ್ವರು ಪಾದ್ರಿಗಳು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಹೈಕೋರ್ಟಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸಮಾಜದ ಮೇಲೆ ಪ್ರಭುತ್ವ ಇರುವ ಈ ನಾಲ್ವರು ಪಾದ್ರಿಗಳು ಅಧಿಕಾರವನ್ನು ದುರ್ಬಳಸಿಕೊಂಡು ಅಮಾಯಕ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ, ಎಲ್ಲರೂ ಈ ಅಪರಾಧದಲ್ಲಿ ಸಮಾನರು ಎಂದೂ ಕೋರ್ಟ್ ಚಾಟಿ ಬೀಸಿದೆ. ಎಲ್ಲ ನಾಲ್ವರು ಪಾದ್ರಿಗಳ ಕಾಮತೃಷೆಗೆ ಮಹಿಳೆ ಬಲಿಪಶುವಾಗಿದ್ದಾಳೆ ಎಂದು ಕೋರ್ಟ್ ಹೇಳಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ

ತನ್ನ ಹೆಂಡತಿ ನಾಲ್ವರು ಪಾದ್ರಿಗಳ ಕಾಮತೃಷೆಗೆ ಬಲಿಯಾಗಿದ್ದನ್ನು ಚರ್ಚಿಗೆ ತಿಳಿಸಿದ ಆಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನವೆಬ್ಬಿಸಿತು. ಈ ಬಗ್ಗೆ ಆಕೆಯ ಗಂಡ ಚರ್ಚಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆಗ ಪೊಲೀಸ್ ಇಲಾಖೆ ಸಾರ್ವಜನಿಕರಿಂದ ತೀವ್ರ ಒತ್ತಡಕ್ಕೆ ಒಳಗಾಗಿ ಪಾದ್ರಿಗಳ ಮೇಲೆ ಸ್ವಯಂಆಗಿ ದೂರು ದಾಖಲಿಸಿಕೊಳ್ಳಬೇಕಾಯಿತು. ಸದ್ಯಕ್ಕೆ ಒಬ್ಬರು ಪಾದ್ರಿ ಮಾತ್ರ ಬಂಧಿತರಾಗಿದ್ದಾರೆ. ಫಾದರ್ ಅಬ್ರಹಾಂ ವರ್ಗೀಸ್ ಮತ್ತು ಫಾದರ್ ಜೈಸ್ ಕೆ ಜಾರ್ಜ್ ಮತ್ತು ಪ್ರಮುಖ ಆರೋಪಿ ಫಾದರ್ ಸೋನಿ ವರ್ಗೀಸ್ ಇನ್ನೂ ಬಂಧಿತರಾಗಬೇಕಿದೆ.

English summary
The christian Priest who took confession of woman, threatened, blackmailed and raped her has been arrested after anticipatory bail was rejected. This case has created huge stir in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X