ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅವಶೇಷ ಸಾಗಿಸಿದ 'ಚಿನೂಕ್': ವಿಡಿಯೋ

|
Google Oneindia Kannada News

ರುದ್ರಪ್ರಯಾಗ, ಅಕ್ಟೋಬರ್ 17: ಕೇದಾರನಾಥ ದೇವಸ್ಥಾನದ ಸಮೀಪ 2018ರಲ್ಲಿ ಅಪಘಾತಕ್ಕೀಡಾಗಿದ್ದ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಅವಶೇಷಗಳನ್ನು ಚಿನೂಕ್ ಹೆಲಿಕಾಪ್ಟರ್ ಶನಿವಾರ ತೆರವುಗೊಳಿಸಿತು.

ಎಂಐ-17 ಹೆಲಿಕಾಪ್ಟರ್ 2018ರಲ್ಲಿ ಕೇದಾರನಾಥ ದೇವಸ್ಥಾನದ ಸಮೀಪದ ಹೆಲಿಪ್ಯಾಡ್‌ನಲ್ಲಿ ಇಳಿಯುವ ವೇಳೆ ಕಬ್ಬಿಣದ ಕಟ್ಟಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಸುಟ್ಟುಹೋಗಿತ್ತು. ಹಾನಿಗೊಳಗಾದ ಹೆಲಿಕಾಪ್ಟರ್ಅನ್ನು ಐಎಎಫ್ ಅಲ್ಲಿಯೇ ಬಿಟ್ಟಿತ್ತು. ಆ ಹೆಲಿಕಾಪ್ಟರ್‌ನ ಪೈಲಟ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.

Chinook Helicopter Takes Off Debris Of IAF Chopper That Crashed In 2018 At Kedarnath

ಕೇದಾರನಾಥದಲ್ಲಿ ನಿರ್ಮಾಣ ಕಾರ್ಯಗಳನ್ನು ವೇಗವಾಗಿ ನಡೆಸಲು ಚಿನೂಕ್ ಹೆಲಿಕಾಪ್ಟರ್ಅನ್ನು ಬಳಸಿಕೊಳ್ಳಲಾಗುತ್ತಿದೆ. ಬಹಳ ತೂಕದ ಸೇನಾ ಹೆಲಿಕಾಪ್ಟರ್ ಚಿನೂಕ್ ಅನ್ನು ಮರು ನಿರ್ಮಾಣ ಕಾರ್ಯಗಳಿಗೆ ಬಳಸಲಾಗುವ ಭಾರಿ ತೂಕದ ಯಂತ್ರಗಳನ್ನು ಸಾಗಿಸಲು ಉಪಯೋಗಿಸಲಾಗುತ್ತದೆ.

ಇತ್ತೀಚೆಗೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಅವರು ಕೇದಾರನಾಥದಲ್ಲಿನ ಕಾಮಗಾರಿಗಳ ಪರಿಶೀಲನೆ ನಡೆಸುವಾಗ ಹತ್ತು ದಿನಗಳ ಒಳಗೆ ಹೆಲಿಪ್ಯಾಡ್ ಸಿದ್ಧಪಡಿಸುವಂತೆ ಡಿಡಿಎಂಎಗೆ ಸೂಚಿಸಿದ್ದರು. ಇದರ ಬಳಿಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಡಿಡಿಎಂಎ) ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಇಳಿಯಲು ಅನುಕೂಲವಾಗುವಂತೆ ಹೆಲಿಪ್ಯಾಡ್ ಅನ್ನು ಸಿದ್ಧಗೊಳಿಸಿತ್ತು.

English summary
A Chinook helicopter takes off the debris of IAF's MI-17 chopper that had crashed near Kedarnath temple in 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X