ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭಾರತದ ಗಡಿ ಪ್ರದೇಶವನ್ನು ಪ್ರವೇಶಿಸಿದ ಚೀನಾ ಸೈನಿಕರು ಕುರಿಗಾಹಿಗಳನ್ನು ಓಡಿಸಿದರು"

|
Google Oneindia Kannada News

ನವದೆಹಲಿ, ಫೆಬ್ರವರಿ 12: ಭಾರತದ ಪೂರ್ವ ಲಡಾಖ್ ಪ್ರದೇಶದಲ್ಲಿ ಪದೇ ಪದೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಸೈನಿಕರು ಗಡಿ ಪ್ರವೇಶಿಸುತ್ತಿರುವ ಘಟನೆಗಳು ವರದಿ ಆಗುತ್ತಿವೆ. ಕಳೆದ ಜನವರಿ 28ರಂದು ಗಡಿ ಪ್ರದೇಶವನ್ನು ಪ್ರವೇಶಿಸಿದ ಚೀನೀ ಸೈನಿಕರು ಈ ಸ್ಥಳದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳನ್ನು ತಡೆದಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
"ಜನವರಿ 28 ರಂದು ಒಂದು ಘಟನೆ ಸಂಭವಿಸಿದೆ, ಪೀಪಲ್ಸ್ ಲಿಬರೇಷನ್ ಆರ್ಮಿಯ ಪಡೆಗಳು ನಮ್ಮ ಪ್ರದೇಶಕ್ಕೆ ಬಂದಾಗ, ಅವರು ನಮ್ಮ ಪ್ರದೇಶದಿಂದ ಮೇಯಿಸಲು ತೆರಳಿದ್ದ ಕುರಿ ಹಿಂಡುಗಳನ್ನು ಓಡಿಸಿದರು. ಅವರು ಯಾರನ್ನೂ ಕರೆದೊಯ್ಯಲಿಲ್ಲ, ಆದರೆ ಅಲೆಮಾರಿಗಳು ಮತ್ತು ಹಿಂಡುಗಳನ್ನು ಓಡಿಸಿದ್ದಾರೆ," ಎಂದು ನ್ಯೋಮಾದ ಬ್ಲಾಕ್ ಡೆವಲಪ್‌ಮೆಂಟ್ ಚೇರ್‌ಪರ್ಸನ್ ಉರ್ಗೇನ್ ಚೋಡಾನ್ ತಿಳಿಸಿದ್ದಾರೆ.

ಚೀನಾ ನಿರ್ಮಿತ, 135 ಕೋಟಿ ವೆಚ್ಚದ ಸಮಾನತೆ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಚೀನಾ ನಿರ್ಮಿತ, 135 ಕೋಟಿ ವೆಚ್ಚದ ಸಮಾನತೆ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಡಾಗ್‌ಬುಕ್ ಎಂಬ ಮೇಯುವ ಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ 45 ಸೆಕೆಂಡುಗಳ ವೀಡಿಯೊವನ್ನು ಅವರು ಟ್ವೀಟ್ ಮಾಡಿದ್ದಾರೆ. ಆದರೆ ರಕ್ಷಣಾ ಮೂಲವೊಂದು ಹೇಳುವಂತೆ ಈ ವಿಡಿಯೋ ಹಳೆಯದಾಗಿದೆ. "ಬೇಸಿಗೆಯ ಋತುವಿನಲ್ಲಿ ಯಾವುದೇ ಹಿಮ ಕಂಡುಬರುವುದಿಲ್ಲ," ಎಂದು ಹೇಳಿದೆ.

Chinese troops drove away herders after entered Indian territory: local official

ವಿಡಿಯೋ ಜೊತೆಗೆ ಬರೆದ ಸಂದೇಶ:
ನ್ಯೋಮಾದ ಬ್ಲಾಕ್ ಡೆವಲಪ್‌ಮೆಂಟ್ ಚೇರ್‌ಪರ್ಸನ್ ಉರ್ಗೇನ್ ಚೋಡಾನ್ ಪೋಸ್ಟ್ ಮಾಡಿರುವ ವಿಡಿಯೋದ ಜೊತೆಗೆ ಒಂದು ಸಂದೇಶವನ್ನು ಬರೆದುಕೊಂಡಿದ್ದರು. "ಜನವರಿ 28ರಂದು ನಮ್ಮ ಪ್ರದೇಶವನ್ನು ಪ್ರವೇಶಿಸಿದ ಪಿಎಲ್ಎ ಸೇನೆಯು ನಮ್ಮದೇ ಪ್ರದೇಶದಲ್ಲಿ ಕುರಿ ಹಿಂಡುಗಳನ್ನು ಮೇಯಿಸುವುದಕ್ಕೆ ಅನುಮತಿ ನೀಡಲಿಲ್ಲ. ಇದಕ್ಕೆ ನಮ್ಮವರು ಯಾವುದೇ ರೀತಿ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ನಮ್ಮ ದೇಶದ ಕುರುಬನೊಬ್ಬ ತನ್ನ ಜೀವನೋಪಾಯಕ್ಕಾಗಿ ಆಕಸ್ಮಾತ್ ಯಾಕ್ ಗಡಿಯನ್ನು ದಾಟಿದ್ದಕ್ಕಾಗಿ ಆತನ್ನು ಹಿಡಿದ ಪಿಎಲ್ಎ ಪಡೆಯು ಎರಡು ದಿನ ತನ್ನ ವಶದಲ್ಲಿ ಇಟ್ಟುಕೊಂಡಿತ್ತು," ಎಂದು ಬರೆದುಕೊಂಡಿದ್ದಾರೆ.

ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಾಣ; ಸರ್ಕಾರದ ಉತ್ತರ!ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಾಣ; ಸರ್ಕಾರದ ಉತ್ತರ!

ಎರಡನೇ ಘಟನೆ ಬಗ್ಗೆ ಉಲ್ಲೇಖಿಸಿದ ಚೋಡನ್:
ಚೋಡಾನ್ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಎರಡನೇ ಘಟನೆ ಜನವರಿ 26ರಂದು ಚಾಂಗ್ಲುಮ್ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಿದರು. "ಸ್ಥಳೀಯ ಅಲೆಮಾರಿಯೊಬ್ಬ ತನ್ನ 17 ಯಾಕ್‌ಗಳನ್ನು ಮರಳಿ ತರಲು ವಾಸ್ತವಿಕ ನಿಯಂತ್ರಣ ರೇಖೆಯನ್ನು ದಾಟಿದ್ದನು. ಹಿಂತಿರುಗುವ ಸಂದರ್ಭದಲ್ಲಿ ಭಾರತೀಯ ಸೇನೆಯು ಅವನನ್ನು ಬಂಧಿಸಿತು, ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿತು. ಈ ಅಲೆಮಾರಿಯನ್ನು ಕರೆತರುವುದಕ್ಕಾಗಿ ನಾನೇ ನ್ಯೋಮಾ ಪೊಲೀಸ್ ಠಾಣೆಗೆ ಹೋಗಿದ್ದೆ. ಇವನು ನಮ್ಮ ಅಲೆಮಾರಿ ಎಂದು ಐಬಿ ಜನರು ಹೇಳಿದರೂ, ಸೇನೆ ನಂಬದೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು ಎಂದು ಚೋಡನ್ ಆರೋಪಿಸಿದ್ದಾರೆ.

ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !

Recommended Video

ತಕ್ಷಣವೇ Ukraine ತೊರೆಯುವಂತೆ ಅಮೆರಿಕನ್ನರಿಗೆ ಎಚ್ಚರಿಕೆ ಕೊಟ್ಟ Joe Biden | Oneindia Kannada

ಸ್ಥಳೀಯ ಪೊಲೀಸರಿಗೆ ವ್ಯಕ್ತಿ ಹಸ್ತಾಂತರ:
"ನಾಗರಿಕನ ಹೇಳಿಕೆ ಮತ್ತು ಅವನ ನಡುವಳಿಕೆಗೂ ಹೊಂದಿಕೆಯಾಗದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ, ಅವರನ್ನು ಸೇನೆ ಮತ್ತು ಐಟಿಬಿಪಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ" ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿರುವ ಚೋಡನ್, ಶುಕ್ರವಾರದ ಎರಡನೇ ಟ್ವೀಟ್‌ನಲ್ಲಿ ಅವರು ಹೀಗೆ ಹೇಳಿದ್ದರು. "ನಮ್ಮ ಸರ್ಕಾರ ಯಾವಾಗಲೂ ಗಡಿ ಭದ್ರತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ (ದ) ಬಲವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವಿಷಯವನ್ನೂ ಸಹ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ವಿನಂತಿಸುತ್ತೇನೆ."

English summary
Chinese troops drove away herders after entered Indian territory: local official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X