ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಮಹಾಸಾಗರದಲ್ಲಿ ಸಂಶೋಧನೆ ನೆಪದಲ್ಲಿ ಚೀನಾ ಹಡಗುಗಳು: ತಜ್ಞರ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜನವರಿ 23: ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗುಗಳು ಸಂಶೋಧನೆ ಹೆಸರಿನಲ್ಲಿ ಭಾರತದ ಜಲ ಗಡಿ ಸಮೀಪ ಸಂಚರಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಈ ಹಡಗುಗಳ ಚಲನವಲನಗಳನ್ನು ಪರಿಶೀಲಿಸುತ್ತಿರುವ ಓಪನ್ ಸೋರ್ಸ್ ಇಂಟೆಲಿಜೆನ್ಸ್ (ಒಎಸ್‌ಐಎನ್‌ಟಿ) ಪರಿಣತರು, ಇದು ನೌಕಾಪಡೆಯ ಚಟುವಟಿಕೆಗಳಾಗಿರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ನಾಗರಿಕ ಉದ್ದೇಶದ ಸಂಶೋಧನೆ ಹೆಸರಿನಲ್ಲಿ ಚೀನಾ ನೌಕಾ ತಂಡ ನಡೆಸುತ್ತಿರುವ ಚಟುವಟಿಕೆಗಳು ಸೇನಾ ಬಳಕೆಗೂ ಮಹತ್ವದ್ದಾಗಿದೆ. ಚೀನಾದ ಅನೇಕ ಹಡಗುಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮೀಪವೂ ಕಂಡುಬಂದಿದ್ದವು ಎಂದು ನೌಕಾಪಡೆಯ ನೇವಲ್ ನ್ಯೂಸ್ ಮತ್ತು ಸುಟ್ಟಾನ್ ಮಾಹಿತಿ ನೀಡಿವೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

"ಚೀನಾದ ಗಡಿ ಅತಿಕ್ರಮಣದ ಹಿಂದೆ 40 ವರ್ಷದ ಇತಿಹಾಸ"

ಈ ಮೊದಲು ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಚೀನಾದ ಸಮೀಕ್ಷಾ ಹಡಗು ಕ್ಸಿಯಾಂಗ್ ಯಾಂಗ್ ಹೊಂಗ್ 3, ಈಗ ದಕ್ಷಿಣ ಚೀನಾ ಸಮುದ್ರದಲ್ಲಿದೆ. ಸೀಬೆಡ್‌ನ ನಕಾಶೆಗಳ ಸಂಗ್ರಹದ ಜತೆಗೆ ಅನೇಕ ಚಟುವಟಿಕೆಗಳನ್ನು ಈ ಹಡಗು ನಡೆಸಿದೆ.

Chinese Survey Ships At Indian Ocean Region Could Be Using For Military Planning

ಇಂಡೋನೇಷ್ಯಾದ ಜಲ ಪ್ರದೇಶದಲ್ಲಿ ತನ್ನ ಸ್ಥಿತಿಯನ್ನು ಬಹಿರಂಗಪಡಿಸದೆ ಅನುಮಾನಾಸ್ಪದ ಚಟುವಟಿಕೆಗಳನ್ನು ಈ ಹಡಗು ನಡೆಸುತ್ತಿತ್ತು ಎನ್ನುವುದು ವಿವಾದ ಸೃಷ್ಟಿಸಿತ್ತು. ಚೀನಾದ ಈ ಸಂಶೋಧನೆ ಮತ್ತು ಸಮೀಕ್ಷೆ ಹಡಗು ಸ್ವಯಂಚಾಲಿತ ಗುರುತಿನ ವ್ಯವಸ್ಥೆ (ಐಎಎಸ್) ಇಲ್ಲದೆ ತನ್ನ ನೆಲೆಯಲ್ಲಿ ಚಲಿಸುತ್ತಿರುವುದಕ್ಕೆ ಇಂಡೋನೇಷ್ಯಾದ ಸಾಗರ ಭದ್ರತಾ ಸಂಸ್ಥೆ ಬಕ್ಲಾಮಾ ಅಡ್ಡಿಪಡಿಸಿತ್ತು. ಬಳಿಕ ಕಡಲು ಕಾವಲು ಪಡೆಗಳು ಕ್ಷಿಯಾಂಗ್ ಯಾಂಗ್ ಹೊಂಗ್ ಹಡಗನ್ನು ತನ್ನ ಆರ್ಥಿಕ ವಲಯದಿಂದ ಹೊರಗೆ ಕಳುಹಿಸಿತ್ತು.

 ನಾಳೆ ಭಾರತ-ಚೀನಾ ನಡುವೆ 9ನೇ ಸುತ್ತಿನ ಮಿಲಿಟರಿ ಮಾತುಕತೆ ನಾಳೆ ಭಾರತ-ಚೀನಾ ನಡುವೆ 9ನೇ ಸುತ್ತಿನ ಮಿಲಿಟರಿ ಮಾತುಕತೆ

ಈ ಚಟುವಟಿಕೆಗಳನ್ನು ಗಮನಿಸಿದಾಗ ಹಿಂದೂ ಮಹಾಸಾಗರದಲ್ಲಿ ಚೀನಾ ಅತ್ಯಂತ ವ್ಯವಸ್ಥಿತವಾಗಿ ಜಲಪ್ರದೇಶಗಳನ್ನು ಪರಿಶೀಲಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇದು ನಾಗರಿಕ ಸಂಶೋಧನೆಯಲ್ಲ. ಆದರೆ ಸೇನಾ ಕಾರ್ಯಯೋಜನೆಯಾಗಿದೆ. ಇದರ ಹಿಂದೆ ಬೇರೆ ಯಾವುದೋ ಮಹತ್ವದ ಮತ್ತು ಭಾರತಕ್ಕೆ ಅಪಾಯಕಾರಿಯಾಗಬಲ್ಲ ಯೋಜನೆ ಇರುವಂತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

English summary
Chinese vessels conducting survey in the name of research in Indian Ocean could be used for military purpose, says experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X