ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್ ಗಡಿಯಲ್ಲಿ ಹೆಚ್ಚಿದ ಚೀನಾ ಸೇನಾ ಪಡೆಗಳು!

|
Google Oneindia Kannada News

ನವದೆಹಲಿ, ಅಕ್ಟೋಬರ್ 2: ಭಾರತ ಮತ್ತು ಚೀನಾ ನಡುವಿನ ಪೂರ್ವ ಮತ್ತು ಉತ್ತರ ಲಡಾಖ್ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಚೀನಾ ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಹೇಳಿದ್ದಾರೆ.

ಭಾರತದ ಈಸ್ಟರ್ನ್ ಕಮಾಂಡ್ ತನಕ ಪೀಪಲ್ಸ್ ಲಿಬರೇಷನ್ ಆರ್ಮಿ ತನ್ನ ಸೇನಾ ನಿಯೋಜನೆ ಪ್ರಮಾಣವನ್ನು ಗಣನೀಯ ಮಟ್ಟದಲ್ಲಿ ಹೆಚ್ಚಿಸಿಕೊಂಡಿದೆ. ಪೂರ್ವ ಲಡಾಖ್ ಮತ್ತು ಉತ್ತರ ಲಡಾಖ್ ಭಾಗದಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಖಂಡಿತವಾಗಿಯೂ, ಮುಂದಿನ ಪ್ರದೇಶಗಳಲ್ಲಿ ಚೀನಾ ಸೇನೆಯ ನಿಯೋಜನೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ನಾವು ಕಾಳಜಿ ವಹಿಸಬೇಕಾದ ವಿಷಯವಾಗಿದೆ "ಎಂದು ಅವರು ಲಡಾಖ್‌ನಲ್ಲಿ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹಿಂದಿರುಗಿದ ಚೀನಾ ಸೇನೆಉತ್ತರಾಖಂಡದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹಿಂದಿರುಗಿದ ಚೀನಾ ಸೇನೆ

ಮಹಾತ್ಮಾ ಗಾಂಧಿಯವರ 152ನೇ ಜನ್ಮದಿನದ ಹಿನ್ನೆಲೆ ಅಕ್ಟೋಬರ್ 2ರಂದು ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಸ್ಥಾಪಿಸಿದ ಲೇಹ್ ಪಟ್ಟಣದಲ್ಲಿ ನಾರವಾನೆ ಭೇಟಿ ನೀಡಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ, ಸೇನಾ ಮುಖ್ಯಸ್ಥರು ಪರ್ಯಾಯ ಹೇಳಿಕೆಯನ್ನು ನೀಡಿದ್ದರು. ಮೇ ತಿಂಗಳಿನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆದ ಪೂರ್ವ ಲಡಾಖ್ ಪ್ರದೇಶದಲ್ಲಿಯೇ ಇಂದಿಗೂ ಚೀನಾ ಯೋಧರಿದ್ದಾರೆ ಎನ್ನುವುದು ಸರಿಯಲ್ಲ ಎಂದು ಹೇಳಿದ್ದರು.

ಎತ್ತರದ ಪರ್ವತ ಪ್ರದೇಶಗಳ ಬಗ್ಗೆ ಉಲ್ಲೇಖ

ಎತ್ತರದ ಪರ್ವತ ಪ್ರದೇಶಗಳ ಬಗ್ಗೆ ಉಲ್ಲೇಖ

ಭಾರತದ ಆರ್ಥಿಕ ಸಮಾವೇಶವೊಂದರಲ್ಲಿ ಪರ್ವತ ಪ್ರದೇಶದ ಪರಿಸ್ಥಿತಿ ಉಲ್ಲೇಖಿಸಿ ಸೇನಾ ಮುಖ್ಯಸ್ಥ ಎಂ ಎಂ ನಾರವಾನೆ ಮಾತನಾಡಿದ್ದಾರೆ. ಗಡಿ ಉದ್ವಿಗ್ನತೆಯನ್ನು ಹೊಂದಿರುವ ಎತ್ತರ ಪ್ರದೇಶದಲ್ಲಿ ಸೇನಾಬಲವು ಮೊದಲಿನಂತಿದೆ. ಭಾರತೀಯ ಭೂಪ್ರದೇಶಗಳ ಮೇಲೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ನಿಯಂತ್ರಣ ಸಾಧಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ನಾರವಾನೆ ದೃಢವಾಗಿ ಉತ್ತರಿಸಿದ್ದಾರೆ. ಭಾರತೀಯ ಗಡಿಯ ಮೇಲೆ ಚೀನಾ ಯಾವುದೇ ರೀತಿ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತನ್ನು ಅವರು ಉಲ್ಲೇಖಿಸುತ್ತಾರೆ.

ಲಡಾಖ್ ಗಡಿ ಪ್ರದೇಶದಲ್ಲಿ ಭಾರತದ ಮೊದಲ ಕೆ-9 ವಜ್ರ ನಿಯೋಜನೆ

ಚೀನಾದ ಸೇನಾಪಡೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆಯು ಅಲರ್ಟ್ ಆಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಮೊದಲ ಕೆ-9 ವಜ್ರ ಸ್ವಯಂ ಚಾಲಿತ ಹೊವಿಟ್ಜರ್ ರೆಜಿಮೆಂಟ್ ಅನ್ನು ಲಡಾಖ್ ವಲಯದಲ್ಲಿ ನಿಯೋಜಿಸಲಾಗಿದೆ. ಈ ಗನ್ 50 ಕಿಲೋ ಮೀಟರ್ ದೂರದ ಶತ್ರುಪಡೆಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಚೀನಾ ಹಾಗೂ ಪಾಕ್ ಸೇನಾಪಡೆಗಳ ಬಗ್ಗೆ ಗುಪ್ತಚರ ಮಾಹಿತಿ

ಚೀನಾ ಹಾಗೂ ಪಾಕ್ ಸೇನಾಪಡೆಗಳ ಬಗ್ಗೆ ಗುಪ್ತಚರ ಮಾಹಿತಿ

ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಪ್ರಧಾನ ಕಚೇರಿಯಲ್ಲಿ ಎರಡು ದೇಶಗಳ ನಡುವೆ ಗುಪ್ತಚರ ಹಂಚಿಕೆ ವ್ಯವಸ್ಥೆಯ ಉದ್ದೇಶವಾಗಿ ಪಾಕಿಸ್ತಾನದ ಸೇನಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಮೂಲಗಳ ಪ್ರಕಾರ, ಚೀನಾದ ಪಶ್ಚಿಮ ಥಿಯೇಟರ್ ಕಮಾಂಡ್ ಮತ್ತು ದಕ್ಷಿಣ ಥಿಯೇಟರ್ ಕಮಾಂಡ್ ಪ್ರಧಾನ ಕಛೇರಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ನಿರ್ಣಾಯಕ ಪಶ್ಚಿಮ ಥಿಯೇಟರ್ ಕಮಾಂಡ್ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗೆ ಭಾರತದ ಗಡಿಗಳನ್ನು ನೋಡಿಕೊಳ್ಳುತ್ತದೆ. ಕಳೆದ ತಿಂಗಳಷ್ಟೇ ಚೀನಾ ಸರ್ಕಾರವು ಪಶ್ಚಿಮ ಥಿಯೇಟರ್ ಕಮಾಂಡ್‌ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಿಯಾಂಗ್ ಅವರನ್ನು ನೇಮಿಸಿತ್ತು.

ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ಹೊರಡಿಸಲಾದ ಆದೇಶದಿಂದ ಚೀನಾದ ಹೆಚ್ಚಿನ ಯೋಧರು ಪೂರ್ವ ಲಡಾಖ್ ಪ್ರದೇಶದಲ್ಲಿ ನಿಯೋಜನೆಯಾಗುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳಿಂದ ತಿಳಿದು ಬಂದಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ಹಾಂಗ್ ಕಾಂಗ್, ಮಕಾವು ಇತರ ವಿಶೇಷ ಆಡಳಿತ ಪ್ರದೇಶಗಳನ್ನು ಪೀಪಲ್ಸ್ ಲಿಬರೇಷನ್ ಆರ್ಮಿಯ ದಕ್ಷಿಣ ಥಿಯೇಟರ್ ಕಮಾಂಡ್ ನೋಡಿಕೊಳ್ಳುತ್ತದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಕಚೇರಿಗೆ ಪಾಕ್ ಸೇನಾಧಿಕಾರಿ

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಕಚೇರಿಗೆ ಪಾಕ್ ಸೇನಾಧಿಕಾರಿ

ಪಾಕಿಸ್ತಾನದ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿಗಳನ್ನು ಕೇಂದ್ರ ಸೇನಾ ಆಯೋಗದ ಜಂಟಿ ಸಿಬ್ಬಂದಿ ವಿಭಾಗದಲ್ಲಿ ನೇಮಿಸಲಾಗಿದೆ. ಇದು ಚೀನಾದ ಸಶಸ್ತ್ರ ಪಡೆಗಳ ಯುದ್ಧ ಯೋಜನೆ, ತರಬೇತಿ ಮತ್ತು ಕಾರ್ಯತಂತ್ರದ ಜವಾಬ್ದಾರಿ ಮತ್ತು ರಾಜ್ಯ ಭದ್ರತಾ ಸಚಿವಾಲಯದಲ್ಲಿ ಎಂದು ಇತ್ತೀಚಿನ ಗುಪ್ತಚರ ಮಾಹಿತಿಗಳು ತಿಳಿಸಿವೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಹೇಳುವಂತೆ, ರಾಜ್ಯ ಕೌನ್ಸಿಲ್ ಆಫ್ ಚೀನಾ ಅಡಿಯಲ್ಲಿ ರಾಜ್ಯ ಭದ್ರತಾ ಸಚಿವಾಲಯವು ಪ್ರತಿ-ಬೇಹುಗಾರಿಕೆ ಮತ್ತು ರಾಜಕೀಯ ಭದ್ರತೆಯ ಜವಾಬ್ದಾರಿ ಹೊತ್ತಿರುತ್ತದೆ.

ಇದರ ಹೊರತಾಗಿಯೂ ರಕ್ಷಣಾ ನಿಯೋಜನೆಗಳ ಜೊತೆಗೆ ಖರೀದಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ಬೀಜಿಂಗ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಸುಮಾರು 10 ಹೆಚ್ಚುವರಿ ಪಾಕಿಸ್ತಾನಿ ಸೇನಾ ಅಧಿಕಾರಿಗಳು ನಿಯೋಜಿಸಲಾಗಿದೆ, ಎಂದು ಮೂಲಗಳು ತಿಳಿಸಿವೆ. ಭದ್ರತಾ ಮೂಲಗಳ ಪ್ರಕಾರ, ಪೀಪಲ್ಸ್ ಲಿಬರೇಷನ್ ಆರ್ಮಿಯೊಂದಿಗೆ ಪಾಕಿಸ್ತಾನದ ಸೇನಾ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಎರಡು ದೇಶಗಳ ನಡುವಿನ ನಿಕಟ ಸಂಬಂಧ ಮತ್ತು ಸಮನ್ವಯದ ಬಗ್ಗೆ ಸ್ಪಷ್ಟಪಡಿಸುತ್ತದೆ.

English summary
'Chinese PLA's Troops Increased in Eastern Ladakh': Chief Gen MM Naravane Sounds Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X