• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರುಣಾಚಲ ಪ್ರದೇಶದ ಯುವಕ ಭಾರತಕ್ಕೆ ಹಸ್ತಾಂತರ: ರಿಜಿಜು ಟ್ವೀಟ್

|
Google Oneindia Kannada News

ನವದೆಹಲಿ ಜನವರಿ 27: ಅರುಣಾಚಲ ಪ್ರದೇಶದ 19 ವರ್ಷದ ಯುವಕನನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಗುರುವಾರ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಸಚಿವ ರಿಜಿಜು ಟ್ವೀಟ್ ಮಾಡಿದ್ದು, "ಚೀನಾದ ಪಿಎಲ್‌ಎ ಅರುಣಾಚಲ ಪ್ರದೇಶದ ಮಿರಾಮ್ ಟ್ಯಾರೋನ್‌ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ" ಎಂದಿದ್ದಾರೆ. ಬಾಲಕನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದ 19 ವರ್ಷದ ಮಿರಾಮ್ ತರನ್ ಜನವರಿ 18 ರಂದು ಕಾಣೆಯಾಗಿದ್ದನು. ಹತ್ತು ದಿನಗಳ ಬಳಿಕ ಆತನನ್ನು ಹಸ್ತಾಂತರಿಸಲಾಗಿದೆ.

ಮಂಗಳವಾರ 'ಭಾರತೀಯ ಸೇನೆಯು ಗಣರಾಜ್ಯೋತ್ಸವ ದಿನದಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್ಎ) ಯೊಂದಿಗೆ ಹಾಟ್‌ಲೈನ್ ಮೂಲಕ ಭಾರತದ ಅಪ್ರಾಪ್ತ ಯುವಕನನ್ನು ಹಸ್ತಾಂತರಿಸುವುದಾಗಿ ಪ್ರತಿಕ್ರಿಯಿಸಿದೆ ಮತ್ತು ಬಿಡುಗಡೆಯ ಸ್ಥಳವನ್ನು ಸೂಚಿಸಿದೆ. ಅವರು ಶೀಘ್ರದಲ್ಲೇ ದಿನಾಂಕ ಮತ್ತು ಸಮಯವನ್ನು ತಿಳಿಸುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಳಂಬವಾಗಿದೆ ಎಂದು ಕಿರಣ್ ರಿಜಿಜು ವಿವರಿಸಿದ್ದರು.

ಅರುಣಾಚಲ ಪ್ರದೇಶದ 17 ವರ್ಷದ ನಿವಾಸಿ ಮಿರಾಮ್ ಟ್ಯಾರೋನ್ ಅವರು ಬುಧವಾರ (ಜನವರಿ 19) ನಾಪತ್ತೆಯಾಗಿದ್ದರು. ಈ ಅಪಹರಣ ಭಾರತದ ತ್ಸಾಂಗ್ಪೋ ನದಿಯ ಪ್ರವೇಶದ ಬಳಿ ನಡೆದಿತ್ತು ಎನ್ನಲಾಗಿದೆ. ಅರುಣಾಚಲ ಪ್ರದೇಶವನ್ನು ಪ್ರವೇಶಿಸಿದಾಗ ತ್ಸಾಂಗ್ಪೋ ಸಿಯಾಂಗ್ ಆಗುತ್ತದೆ ಮತ್ತು ಅಸ್ಸಾಂಗೆ ಪ್ರವೇಶಿಸಿದಾಗ ಇದು ಬ್ರಹ್ಮಪುತ್ರ ನದಿಯಾಗುತ್ತದೆ. ಘಟನೆ ನಡೆದಾಗ ಯುವಕರು ಎರಡೂ ದೇಶಗಳ ಗಡಿ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದರು, ಕಾಣೆಯಾದ ಯುವಕ ಬೇಟೆಗಾರರ ಗುಂಪಿನಲ್ಲಿದ್ದನು. ರಾಜ್ಯದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಅಪಹರಣ ನಡೆದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದರು. "ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಯುವಕನ ಶೀಘ್ರ ಬಿಡುಗಡೆಗೆ ಮುಂದಾಗುವಂತೆ" ಗಾವೊ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭಾರತೀಯ ಸೇನೆಯನ್ನು ಟ್ಯಾಗ್ ಮಾಡಿದ್ದರು. ಬಳಿಕ ಇದು ರಾಜಕೀಯ ಕದನಕ್ಕೆ ಕಾರಣವಾಯಿತು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘಟನೆಯ ಬಗ್ಗೆ ಹರಿಹಾಯ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕ ಅಪರಹಣದ ಬಗ್ಗೆ ಕೇರ್ ಮಾಡುತ್ತಿಲ್ಲ ಎಂದು ಆರೋಪಿಸಿದರು. ಪ್ರಧಾನಿ ಮೌನವೇ ಅವರ ಹೇಳಿಕೆ. ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಗಣರಾಜ್ಯೋತ್ಸವದ ಕೆಲವೇ ದಿನಗಳ ಮೊದಲು, ಭಾರತದ ಭವಿಷ್ಯದ ಯುವಕನನ್ನು ಚೀನಾ ಅಪಹರಿಸಿದೆ. ನಾವು ಮಿರಾಮ್ ಟ್ಯಾರೋನ್ ಅವರ ಕುಟುಂಬದೊಂದಿಗೆ ನಿಂತಿದ್ದೇವೆ. ಭರವಸೆಯನ್ನು ಬಿಡುವುದಿಲ್ಲ. ಸೋಲನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. "ಇದು ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಪ್ರತಿನಿಧಿಸುತ್ತದೆ ಮತ್ತು "ಚೀನೀಯರು ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವುದು ದುರದೃಷ್ಟಕರ" ಎಂದು ಹೇಳಿದ್ದಾರೆ. ತಕ್ಷಣ ಆತನನ್ನು ದೇಶಕ್ಕೆ ಕರೆತರುವಂತೆ ಒತ್ತಾಯಿಸಿದ್ದರು.

ಭಾರತ ಮತ್ತು ಚೀನಾ ನಡುವಿನ ಸಂಬಂಧವು ಇತಿಹಾಸದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ 14 ಸುತ್ತಿನ ಸಭೆಗಳ ನಂತರವೂ ಪೂರ್ವ ಲಡಾಖ್‌ನಲ್ಲಿ 21 ತಿಂಗಳ ಸುದೀರ್ಘ ಬಿಕ್ಕಟ್ಟನ್ನು ಉಭಯ ರಾಷ್ಟ್ರಗಳು ಇನ್ನೂ ಪರಿಹರಿಸಿಲ್ಲ. ಇದಲ್ಲದೆ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಕಳೆದ ತಿಂಗಳು ಪ್ರಮಾಣೀಕರಿಸಿದ ಚೈನೀಸ್ ಅಕ್ಷರಗಳನ್ನು ಮತ್ತು ಟಿಬೆಟಿಯನ್ ಮತ್ತು ರೋಮನ್ ವರ್ಣಮಾಲೆಯನ್ನು ಜಂಗ್ನಾನ್‌ನಲ್ಲಿರುವ 15 ಸ್ಥಳಗಳ ಹೆಸರುಗಳಿಗೆ ಘೋಷಿಸಿತು, ಇದು ದಕ್ಷಿಣ ಟಿಬೆಟ್ ಎಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶದ ಚೀನೀ ಹೆಸರಾಗಿದೆ.

English summary
Days after a 19-year-old youth was reportedly found missing in Arunachal Pradesh, Union Minister of Law and Justice Kiren Rijiju on Thursday tweeted that the young boy has been handed over to the Indian Army by People's Liberation Army (PLA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X