• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಯಾಂಗಾಂಗ್‌ನ ಉತ್ತರ ಭಾಗದಲ್ಲಿ ಚೀನಾ ಸೇನೆಯ ಹೊಸ ಚಟುವಟಿಕೆ

|

ಲೇಹ್, ಸೆಪ್ಟೆಂಬರ್ 9: ಲಡಾಖ್‌ನ ಪ್ಯಾಂಗೊಂಗ್ ತ್ಸೊ ಸರೋವರದ ದಕ್ಷಿಣ ತೀರದಲ್ಲಿ ಸೋಮವಾರ ಗುಂಡು ಹಾರಿಸಿದ್ದ ಚೀನಾ ಪಡೆಗಳು ಈಗ ಸರೋವರದ ಉತ್ತರ ಭಾಗದಲ್ಲಿ ಮಂಗಳವಾರ ರಾತ್ರಿಯಿಂದ ಪರ್ವತಶ್ರೇಣಿಯ ಫಿಂಗರ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿವೆ.

ಮಂಗಳವಾರ ಸಂಜೆಯಿಂದಲೇ ಈ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಚಟುವಟಿಕೆಗಳು ಹೆಚ್ಚಾಗಿದ್ದು, ಇಲ್ಲಿ ಸೇನೆಯ ಜಮಾವಣೆಯನ್ನು ಕೂಡ ಹೆಚ್ಚಿಸಲಾಗಿದೆ. ಪಡೆಗಳ ಚಲನವಲನ, ಹೆಚ್ಚಿರುವ ಸಂಖ್ಯೆಗಳು ಮತ್ತು ಹೊಸ ಸಮಕಾಲೀನ ರಕ್ಷಣಾ ವ್ಯವಸ್ಥೆಯನ್ನು ಈ ಭಾಗದಲ್ಲಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರ ಹೇಳಿಕೆಯನ್ನು ರಾಷ್ಟ್ರೀಯ ಮಾಧ್ಯಮಗಳು ಉಲ್ಲೇಖಿಸಿವೆ.

ಅನುಮಾನಕ್ಕೆ ದಾರಿಯಾಯ್ತು ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡು

ಭಾರತ ಹಾಗೂ ಚೀನಾ ಪಡೆಗಳ ನಡುವಿನ ಅಂತರ ಕಡಿಮೆ ಇದ್ದರೂ ಎರಡೂ ಪಡೆಗಳ ನಡುವೆ ಹಿಂಸಾಚಾರ ಅಥವಾ ಮುಖಾಮುಖಿಯ ಘಟನೆಗಳು ನಡೆದಿಲ್ಲ. ಚೀನಾ ಸೈನಿಕರು ಸ್ಪಷ್ಟವಾಗಿ ಕಾಣುವ ಪ್ರದೇಶದಲ್ಲಿದ್ದು, ಭಾರತೀಯ ಸೇನೆ ಅವರ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ಚೀನಾದ ನಡೆಗೆ ಪ್ರತಿಯಾಗಿ ಭಾರತೀಯ ಸೇನೆಯು ಸುಖೋಯ್, ಎಂಐಜಿಗಳು ಹಾಗೂ ಸಾರಿಗೆ ವಿಮಾನಗಳ ಹಾರಾಟವನ್ನು ಈ ಭಾಗದಲ್ಲಿ ನಡೆಸಿದೆ. ಮುಂದೆ ಓದಿ.

ಭಾರತದಿಂದ ಒತ್ತಡದ ಪ್ರಯತ್ನ

ಭಾರತದಿಂದ ಒತ್ತಡದ ಪ್ರಯತ್ನ

ಫಿಂಗರ್ 3 ಪರ್ವತಶ್ರೇಣಿಯ ತುದಿಯಲ್ಲಿ ನೆಲೆಯೂರುವುದನ್ನು ಚೀನಾ ಪಡೆಗಳು ಮುಂದುವರಿಸಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಇತರೆ ಪರ್ವತ ಪ್ರದೇಶಗಳಲ್ಲಿ ನೆಲೆಯೂರುವ ಮೂಲಕ ಪಿಎಲ್‌ಎ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ. ಸರೋವರದೆಡೆಗೆ ಚಾಚಿಕೊಂಡಿರುವ ಪರ್ವತಗಳಲ್ಲಿ 14,000 ಅಡಿಗಿಂತಲೂ ಎತ್ತರ ಇರುವ ಪ್ರದೇಶಗಳನ್ನು ಫಿಂಗರ್ ಎಂದು ಕರೆಯಲಾಗುತ್ತದೆ.

ಭಾರತ-ಚೀನಾ ನಡುವೆ 8 ಫಿಂಗರ್‌ಗಳು

ಭಾರತ-ಚೀನಾ ನಡುವೆ 8 ಫಿಂಗರ್‌ಗಳು

ಸರೋವರದ ಉತ್ತರ ತೀರವು ಭಾರತ ಹಾಗೂ ಚೀನಾ ನಡುವೆ 8 ಫಿಂಗರ್‌ಗಳಾಗಿ ವಿಭಜನೆಯಾಗಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯು (ಎಲ್‌ಎಸಿ) ಫಿಂಗರ್ 8ರಲ್ಲಿ ಇದೆ ಎಂದು ಭಾರತ ಪ್ರತಿಪಾದಿಸುತ್ತಿದೆ. ಫಿಂಗರ್ 4ರವರೆಗಿನ ಪ್ರದೇಶಗಳನ್ನು ಭಾರತ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ. ಆದರೆ ಯಥಾಸ್ಥಿತಿ ಉಲ್ಲಂಘಿಸಿರುವ ಚೀನಾ, ಫಿಂಗರ್ 4ರಲ್ಲಿ ನೆಲೆಯೂರುತ್ತಿದೆ. ಫಿಂಗರ್ 5ರಿಂದ ಫಿಂಗರ್ 8ರವರೆಗೆ ಕೋಟೆಗಳನ್ನು ನಿರ್ಮಿಸಿಕೊಂಡಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆ: ಇಲ್ಲಿ ಗುಂಡು ಹಾರಿದ್ದು 45 ವರ್ಷದಲ್ಲಿ ಇದೇ ಮೊದಲು

ಎತ್ತರ ಪ್ರದೇಶಗಳಲ್ಲಿ ಭಾರತದ ಪಾರಮ್ಯ

ಎತ್ತರ ಪ್ರದೇಶಗಳಲ್ಲಿ ಭಾರತದ ಪಾರಮ್ಯ

ಪ್ಯಾಂಗೊಂಗ್ ಸರೋವರದ ದಕ್ಷಿಣ ಭಾಗವು ಹೊಸ ಸಂಘರ್ಷದ ಸ್ಥಳವಾಗಿದ್ದು, ಇಲ್ಲಿ ಭಾರತಕ್ಕೆ ಹೆಚ್ಚು ಅನುಕೂಲಕರ ಪರಿಸ್ಥಿತಿ ಇದ್ದಂತೆ ಕಾಣಿಸುತ್ತದೆ. ಚೀನಾ ನಿಯಂತ್ರಣದಲ್ಲಿರುವ ಮೋಲ್ಡೊ ಗ್ಯಾರಿಸನ್ ಮತ್ತು ಸ್ಪಂಗುರ್ ಗ್ಯಾಪ್ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ನೀಡುವ ಎತ್ತರದ ಪ್ರದೇಶಗಳನ್ನು ಭಾರತ ಆಕ್ರಮಿಸಿದೆ. ಇವುಗಳಲ್ಲಿ ಕೆಲವು ಎತ್ತರ ಪ್ರದೇಶಗಳನ್ನು ಭಾರತ ಹಾಗೂ ಚೀನಾ ಎರಡೂ ತಮ್ಮವೆಂದು ಪ್ರತಿಪಾದಿಸುತ್ತಿವೆ.

ಚೀನಾದಿಂದ ಉಲ್ಲಂಘನೆ

ಚೀನಾದಿಂದ ಉಲ್ಲಂಘನೆ

ಸರೋವರದ ದಕ್ಷಿಣ ಭಾಗದ ಮೇಲೆ ಗಮನ ಬದಲಾಗಿದೆ. ಈ ಭಾಗ ಸದ್ಯಕ್ಕೆ ಶಾಂತವಾಗಿದೆ. ಇಲ್ಲಿ ಆಗಸ್ಟ್ 29-30ರಂದು ಚೀನಾದ ಪಿಎಲ್‌ಎ ಪಡೆಗಳು ಈ ಹಿಂದೆ ಸೇನೆ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದವು. ಯಥಾಸ್ಥಿತಿಯನ್ನು ಕದಡುವಸಲುವಾಗಿ ಪ್ರಚೋದನಾಕಾರಿ ಸೇನಾ ಚಟುವಟಿಕೆಗಳನ್ನು ನಡೆಸಿತ್ತು ಎಂದು ಭಾರತೀಯ ಸೇನೆ ತಿಳಿಸಿದೆ.

ಹಾಟ್‌ಲೈನ್‌ನಲ್ಲಿ ಭಾರತ-ಚೀನಾ ಮಾತಿನ ಚಕಮಕಿ

English summary
Chinese PLA troops has started a fresh buildup activities on the northern bank of Pangong Lake in Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X