• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್, ಚೀನಾ ರಾಯಭಾರಿ ಭೇಟಿ: ಬಹಿರಂಗವಾಯ್ತು 'ಕೈ' ಜಗನ್ನಾಟಕ!

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|

ನವದೆಹಲಿ, ಜುಲೈ 10: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಭಾರತದಲ್ಲಿರುವ ಚೀನಾದ ರಾಯಭಾರಿ ಲುವೊ ಝವೋಹುಯ್ ಅವರೊಂದಿಗೆ ಇತ್ತೀಚೆಗೆ ಭೇಟಿಯಾಗಿರುವ ವಿಚಾರವನ್ನು ಸುಳ್ಳೆಂದು ಸಾಬೀತುಪಡಿಸಲು ಹೋಗಿ ಪೇಚಿಗೆ ಸಿಲುಕಿದ ಕಾಂಗ್ರೆಸ್ , ಸತತ ಆರು ಗಂಟೆಗಳ ನಂತರ, ರಾಹುಲ್- ಲುವೊ ಭೇಟಿ ನಡೆದಿದ್ದನ್ನು ಒಪ್ಪಿಕೊಂಡಿದೆ.

ಆರಂಭದಲ್ಲಿ ಸತ್ಯವನ್ನು ಸುಳ್ಳೆಂದು ಸಾಬೀತುಪಡಿಸಲು ಹೋಗಿ ಆನಂತರ ಅದನ್ನು ಸತ್ಯವೆಂದು ಒಪ್ಪಿಕೊಳ್ಳುವ ಮೂಲಕ ತನ್ನ ಜಗನ್ನಾಟಕದ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದ ಅದು, ಮೊದಲು ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ರಾಹುಲ್- ಲುವೊ ಭೇಟಿ ಸುಳ್ಳೇ ಸುಳ್ಳು ಎಂದು ಸರಣಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕರು ತಲೆ ತಗ್ಗಿಸುವಂತೆ ಮಾಡಿದೆ.

ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾ

ಕಾಂಗ್ರೆಸ್ ಪಕ್ಷದ ಈ ನಡೆ, ಅದರ ವಿರೋಧಿಗಳಿಗೆ ಆಳಿಗೊಂದು ಕಲ್ಲೆಸೆಯುಂಥ ಅವಕಾಶವನ್ನು ಮಾಡಿಕೊಟ್ಟಿದೆ.

ಚೀನಾ ರಾಯಭಾರಿಯನ್ನು ರಾಹುಲ್ ಭೇಟಿ ಮಾಡಿದ್ದು ನಿಜ

ಏನಾಗಿತ್ತು?

ಕೆಲವು ಸುದ್ದಿ ವಾಹಿನಿಗಳ ಪ್ರಕಾರ, ರಾಹುಲ್ ಹಾಗೂ ಲುವೊ ನಡುವಿನ ಭೇಟಿ ಜುಲೈ 8ರಂದು ಬೆಳಗ್ಗೆ ನಡೆದಿದೆ. ಆದರೆ, ಈ ಭೇಟಿ ನಡೆದೇ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿದ್ದರೆ, ಬಿಜೆಪಿಯು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿತ್ತು.

ಸತ್ಯಕ್ಕೆ ದೂರವೆಂದ ಕಾಂಗ್ರೆಸ್

ಸತ್ಯಕ್ಕೆ ದೂರವೆಂದ ಕಾಂಗ್ರೆಸ್

ಜುಲೈ 8ರಂದು ಬೆಳಗ್ಗೆ ರಾಹುಲ್- ಲುವೊ ನಡುವೆ ಮಾತುಕತೆ ನಡೆದಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಇದೆಲ್ಲಾ ಸತ್ಯಕ್ಕೆ ದೂರವಾಗಿರುವುದು ಎಂದು ಕಾಂಗ್ರೆಸ್ ಹೇಳಿದೆ.

ರಾಹುಲ್ ಗಾಂಧಿ ಕಚೇರಿಯೂ ಸ್ಪಷ್ಟನೆ

ರಾಹುಲ್ ಗಾಂಧಿ ಕಚೇರಿಯೂ ಸ್ಪಷ್ಟನೆ

ಕಾಂಗ್ರೆಸ್ ನಾಯಕ ರಣದೀಪ್ ಎಸ್. ಸುರ್ಜೇವಾಲಾ ಅವರಂತೂ ಸರಣಿ ಟ್ವೀಟ್ ಮಾಡಿ, ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಶುದ್ಧ ಸುಳ್ಳು ಎಂದಿದ್ದಾರೆ. ರಾಹುಲ್ ಗಾಂಧಿಯವರ ಕಚೇರಿಯೂ ಈ ಬಗ್ಗೆ ಟ್ವೀಟ್ ಮಾಡಿ, ''ಚೀನಾ ವಿಚಾರದಲ್ಲಿ ನಮ್ಮ ಪ್ರಧಾನಿ ಏಕೆ ಮೌನವಾಗಿದ್ದಾರೆ'' ಎಂದು ಪ್ರಶ್ನಿಸಿದ್ದಾರೆ.

ಪ್ರಕಟವಾದ ಮಾಹಿತಿ ಡಿಲೀಟ್ ಆಗಿದ್ದೇಕೆ?

ಪ್ರಕಟವಾದ ಮಾಹಿತಿ ಡಿಲೀಟ್ ಆಗಿದ್ದೇಕೆ?

ಕಾಂಗ್ರೆಸ್ ಪಕ್ಷ ಹಾಗೆ ಹೇಳಿದ್ದರೂ, ಚೀನಾದ ವಿದೇಶಾಂಗ ಇಲಾಖೆಯ ವೆಬ್ ಸೈಟ್ ನಲ್ಲಿ ರಾಹುಲ್ ಅವರು ಲುವೊ ಅವರನ್ನು ಭೇಟಿಯಾಗಿದ್ದ ಬಗ್ಗೆ ಮಾಹಿತಿಯೊಂದು ಪ್ರಕಟವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಇತ್ತ ರಾಹುಲ್ ಭೇಟಿ ನಿರಾಕರಿಸುತ್ತಲೇ ಅತ್ತ, ವೆಬ್ ಸೈಟ್ ನಿಂದಲೂ ಆ ಮಾಹಿತಿ ಮಾಯವಾಗಿದೆ! ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ರಾಜಕೀಯ ಉದ್ದೇಶವಲ್ಲದೆ ಮತ್ತೇನು?

ರಾಜಕೀಯ ಉದ್ದೇಶವಲ್ಲದೆ ಮತ್ತೇನು?

ಭಾರತ ಹಾಗೂ ಚೀನಾ ದೇಶಗಳ ಗಡಿ ಭಾಗದಲ್ಲಿ ಯುದ್ಧದ ಭೀತಿ ಆವರಿಸಿರುವ ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರು ಲುವೊ ಜತೆಗೆ ಏನು ಮಾತನಾಡಿರಬಹುದೆಂಬ ಚರ್ಚೆ ಆರಂಭವಾಗುವ ಮುನ್ನವೇ ಕಾಂಗ್ರೆಸ್ ಅದನ್ನು ಮರೆ ಮಾಚುವ ಪ್ರಯತ್ನ ನಡೆಸುತ್ತಿರುವುದಾದರೂ ಏಕೆ ಎಂಬುದೇ ಈಗ ಒಗಟಾಗಿ ಪರಿಣಮಿಸಿದೆ. ಇದರ ಹಿಂದೆ ರಾಜಕೀಯ ಉದ್ದೇಶವಲ್ಲದೇ ಮತ್ತೇನೂ ಅಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಬಿಜೆಪಿಗೆ ಪ್ರಶ್ನೆ ಹಾಕಿದ ರಮ್ಯಾ

ಬಿಜೆಪಿಗೆ ಪ್ರಶ್ನೆ ಹಾಕಿದ ರಮ್ಯಾ

ಈ ಬಗ್ಗೆ ಕನ್ನಡ ನಟಿ ಹಾಗೂ ಕಾಂಗ್ರೆಸ್ ನ ಮಾಜಿ ಸಂಸದೆ ರಮ್ಯಾ ಸಹ ಟ್ವೀಟ್ ಮಾಡಿ, ''ರಾಹುಲ್ ಗಾಂಧಿಯವರು ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೆಂಬ ಸುದ್ದಿ ದೊಡ್ಡ ವಿವಾದವಾಗುತ್ತದೆ. ಆದರೆ, ಮೋದಿಯವರು ಚೀನಾ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ದರೆ ಅದು ಅಸಲಿಗೆ ಸುದ್ದಿಯೇ ಅಲ್ಲ ಅಲ್ಲವೇ?'' ಎಂದು ಬಿಜೆಪಿಗೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ.

ತಮ್ಮದೇ ಸ್ಟೈಲ್ ನಲ್ಲಿ ಟೀಕಿಸಿದ ಜಗ್ಗೇಶ್

ತಮ್ಮದೇ ಸ್ಟೈಲ್ ನಲ್ಲಿ ಟೀಕಿಸಿದ ಜಗ್ಗೇಶ್

ರಮ್ಯಾ ಅವರ ಟ್ವೀಟ್ ಗೆ ಉತ್ತರಿಸಿರುವ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್, ''ಮೋದಿಜೀ ಅವರು ಎವರೆಸ್ಟ್ ಪರ್ವತ ನೋಡಬಹುದು. ಏರಲು ತಾಕತ್ತು ಹಾಗೂ ತಾಲೀಮು ಬೇಕು. ರಾಹುಲ್ ಗಾಂಧಿಯಷ್ಟು ಸುಲಭವಲ್ಲ. ಮೋದಿ ಭಾರತದ ಸಿಂಹ. ಕೃತಕಗಳಿಗೆ ಹಗಲುಗನಸು'' ಎಂದು ಟೀಕಿಸಿದ್ದಾರೆ. ಅಲ್ಲದೆ, ತಮ್ಮ ಮತ್ತೊಂದು ಟ್ವೀಟ್ ನಲ್ಲಿ ''ಕಾಗುಣಿತ ಬರದ ಕಂದಮ್ಮಗಳು ಕೆಮ್ಮಿದಾಗ ನಗು ಬರುತ್ತದೆ'' ಎಂದೂ ಲೇವಡಿ ಮಾಡಿದ್ದಾರೆ.

English summary
Did Congress vice president Rahul Gandhi meet with Chinese envoy Luo Zhaohui on Saturday or did he not? The Congress denied it on Monday. And the Chinese embassy in Delhi first posted then removed a statement on its website saying that the two met.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more