ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್ ಒಳಗೆ ಹಳ್ಳಿ ನಿರ್ಮಿಸಿದ ಚೀನಾ?: ಅಧಿಕಾರಿಗಳ ನಿರಾಕರಣೆ

|
Google Oneindia Kannada News

ನವದೆಹಲಿ, ನವೆಂಬರ್ 20: ಭೂತಾನ್‌ನ ಗಡಿಯ 2 ಕಿ.ಮೀ. ಒಳಭಾಗದಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಿಸಿದೆ. ಇದು ಭಾರತದೊಂದಿಗೆ 2017ರಲ್ಲಿ ಸಂಘರ್ಷ ನಡೆದ ದೋಕ್ಲಂ ಭಾಗಕ್ಕೆ ತೀರಾ ಹತ್ತಿರದಲ್ಲಿದೆ. ಚೀನಾ ಸರ್ಕಾರಿ ಮಾಧ್ಯಮದ ಹಿರಿಯ ಪತ್ರಕರ್ತರೊಬ್ಬರು ಗುರುವಾರ ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಪೂರ್ವ ಲಡಾಖ್‌ನ ಗಡಿಯಲ್ಲಿ ಚೀನಾ ಪಡೆಗಳು ಭಾರತದೊಂದಿಗೆ ಸಂಘರ್ಷ ನಡೆಸುತ್ತಿರುವ ನಡುವೆಯೇ ಭೂತಾನ್ ಭಾಗದಿಂದಲೂ ಸಂಚಕಾರ ತರಲು ಮುಂದಾಗಿದೆ.

ಸಿಜಿಟಿಎನ್ ನ್ಯೂಸ್‌ನ ಹಿರಿಯ ನಿರ್ಮಾಪಕ ಶೆನ್ ಶಿವೀ ಗುರುವಾರ ಬೆಳಿಗ್ಗೆ ಈ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ದೋಕ್ಲಂ ಪ್ರದೇಶದಲ್ಲಿ ಹಳ್ಳಿಯನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದರು. ಬಳಿಕ ಆ ಟ್ವೀಟ್‌ಗಳನ್ನು ಅವರು ಅಳಿಸಿ ಹಾಕಿದ್ದರು.

ಜಪಾನ್-ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿದ ಚೀನಾಜಪಾನ್-ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿದ ಚೀನಾ

ಚೀನಾದ ಹಳ್ಳಿ ಪಂಡ್ಗಾ, ಭೂತಾನ್ ಭಾಗದ ಎರಡು ಕಿಮೀ ಒಳಗೆ ಸ್ಥಾಪನೆಯಾಗಿದೆ. ಈ ಬಗ್ಗೆಯೇ ಭಾರತ ಹಲವು ಸಮಯದಿಂದ ಆತಂಕ ವ್ಯಕ್ತಪಡಿಸುತ್ತಿತ್ತು. ಭಾರತ ಮತ್ತು ಭೂತಾನ್ ಪ್ರದೇಶಗಳ ನಡುವಿನ ಸಂಪರ್ಕವನ್ನು ಕಡಿತಗೊಳಿಸಲು ಚೀನಾ ಈ ಪ್ರಯತ್ನ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಮುಂದೆ ಓದಿ.

ಭಾರತಕ್ಕೆ ಅಪಾಯ ಹೆಚ್ಚು

ಭಾರತಕ್ಕೆ ಅಪಾಯ ಹೆಚ್ಚು

ಭೂತಾನ್‌ನ ಪ್ರಾದೇಶಿಕ ಸಾರ್ವಭೌಮತೆ ಕಾಪಾಡುವುದು ಭಾರತದ ಹೊಣೆಯೂ ಆಗಿದೆ. ಅತಿ ಕಡಿಮೆ ಸಶಸ್ತ್ರ ಸೇನಾ ಪಡೆಗಳನ್ನು ಒಳಗೊಂಡಿರುವ ಭೂತಾನ್, ಸೇನಾ ಚಟುವಟಿಕೆಗಳಿಗೆ ಭಾರತವನ್ನು ಅವಲಂಬಿಸಿದೆ. ಅಲ್ಲದೆ, ಭೂತಾನ್ ಭಾಗವು ಚೀನಾದ ಪಾಲಾದರೆ ಭಾರತಕ್ಕೆ ಮತ್ತಷ್ಟು ಅಪಾಯಗಳು ಎದುರಾಗಲಿದೆ.

ಕಾಯಂ ವಾಸ ಎಂದ ಶೆನ್

ಕಾಯಂ ವಾಸ ಎಂದ ಶೆನ್

ಶೆನ್ ಅವರು ಮಾಡಿರುವ ಟ್ವೀಟ್‌ನಲ್ಲಿ, 'ಹೊಸದಾಗಿ ನಿರ್ಮಿಸಲಾಗಿರುವ ಪಂಗ್ಡಾ ಗ್ರಾಮದಲ್ಲಿ ನಾವೀಗ ಕಾಯಂ ವಾಸವನ್ನು ಹೊಂದಿದ್ದೇವೆ. ಇದು ಯಾಡೊಂಗ್ ಕೌಂಟಿಯ 35 ಕಿಮೀ ದಕ್ಷಿಣ ಭಾಗದ ಕಣಿವೆಯಲ್ಲಿದೆ. ಸ್ಥಳವನ್ನು ತೋರಿಸುವ ಮ್ಯಾಪ್ ಇಲ್ಲಿದೆ' ಎಂದು ಹೇಳಿದ್ದರು. ಇದರಲ್ಲಿನ ನಕಾಶೆಯ ಪ್ರಕಾರ ಚೀನಾದ ಹೊಸ ಗ್ರಾಮವು ದೋಕ್ಲಂ ಬಿಕ್ಕಟ್ಟಿನ ಸ್ಥಳದಿಂದ 9 ಕಿಮೀ ದೂರವಷ್ಟೇ ಇದೆ.

Video: ಲಡಾಖ್ ಗಡಿಯಲ್ಲಿ ಭಾರತೀಯ ಯೋಧರಿಗಾಗಿ ವಿಶೇಷ ಟೆಂಟ್!Video: ಲಡಾಖ್ ಗಡಿಯಲ್ಲಿ ಭಾರತೀಯ ಯೋಧರಿಗಾಗಿ ವಿಶೇಷ ಟೆಂಟ್!

ಹಳ್ಳಿ ಇಲ್ಲ ಎಂದ ಭೂತಾನ್

ಹಳ್ಳಿ ಇಲ್ಲ ಎಂದ ಭೂತಾನ್

ಆದರೆ ಈ ವರದಿಗಳನ್ನು ಭೂತಾನ್ ನಿರಾಕರಿಸಿದೆ. ದೋಕ್ಲಂ ಬಿಕ್ಕಟ್ಟಿನ ಪ್ರದೇಶದಿಂದ 9 ಕಿ.ಮೀ ದೂರದಲ್ಲಿನ ಭೂತಾನ್ ಗಡಿಯೊಳಗೆ ಚೀನಾ ಹಳ್ಳಿಯನ್ನು ನಿರ್ಮಿಸಿದೆ ಎಂಬ ವರದಿ ಸತ್ಯವಲ್ಲ ಎಂದು ಭಾರತದಲ್ಲಿನ ಭೂತಾನ್ ರಾಯಭಾರಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

73 ದಿನಗಳ ದೋಕ್ಲಂ ಬಿಕ್ಕಟ್ಟು

73 ದಿನಗಳ ದೋಕ್ಲಂ ಬಿಕ್ಕಟ್ಟು

2017ರಲ್ಲಿ ಭಾರತ ಮತ್ತು ಚೀನಾ ನಡುವೆ ಸುಮಾರು 73 ದಿನ ದೋಕ್ಲಂನಲ್ಲಿ ಬಿಕ್ಕಟ್ಟು ತಲೆದೋರಿತ್ತು. ಭೂತಾನ್ ಮತ್ತು ಚೀನಾ ಎರಡೂ ಈ ಭಾಗ ತನ್ನದೆಂದು ಹೇಳಿಕೊಂಡಿವೆ. ಭಾರತದ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಬೆಸೆಯುವ ಚಿಕ್ಕ ಭಾಗ 'ಚಿಕನ್ ನೆಕ್'ನಲ್ಲಿನ ಚೀನಾದ ಚಟುವಟಿಕೆಗಳು ಬೆದರಿಕೆ ಮೂಡಿಸಿದ್ದರಿಂದ ಭೂತಾನ್ ಪರವಾಗಿ ಭಾರತ ಮಧ್ಯಪ್ರವೇಶ ಮಾಡಿತ್ತು. ಆಗಸ್ಟ್ 28ರಂದು ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿದ್ದವು.

English summary
China has established a village within Bhutan's territory just 9 KM away from Doklam stand off between India-China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X