ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ 50 ಡ್ರೋನ್‌ಗಳನ್ನು ಖರೀದಿಸಿದ ಪಾಕಿಸ್ತಾನ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ತನ್ನ ಮಿತ್ರದೇಶ ಪಾಕಿಸ್ತಾನಕ್ಕೆ ಚೀನಾ ಸುಮಾರು 50 ಸಶಸ್ತ್ರ ವಿಂಗ್ ಲೂಂಗ್ ಡ್ರೋನ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಭಾರತದ ಮತ್ತೊಂದು ಶತ್ರುದೇಶದೊಂದಿಗಿನ ತನ್ನ ಮಿಲಿಟರಿ ಚಟುವಟಿಕೆಯನ್ನು ವಿಸ್ತರಿಸಿದ್ದು, ಇದು ಅಧಿಕ ಎತ್ತರದ ಪ್ರದೇಶಗಳಲ್ಲಿ ಅತ್ಯಾಧುನಿಕ ಸೇನಾ ಶಸ್ತ್ರಗಳಿಗೆ ಪ್ರತಿಕ್ರಿಯೆ ನೀಡುವಷ್ಟು ಸಮರ್ಥ ಸಾಧನಗಳನ್ನು ಹೊಂದಿಲ್ಲದ ಕಾರಣದಿಂದ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಚೀನಾ ಮತ್ತು ಟರ್ಕಿಯ ಸಶಸ್ತ್ರ ಡ್ರೋನ್‌ಗಳು ಲಿಬಿಯಾ, ಸಿರಿಯಾ ಮತ್ತು ಅಜರ್ಬೈಜಾನ್‌ಗಳಲ್ಲಿನ ಸಂಘರ್ಷಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಶತ್ರುಗಳ ವಿರುದ್ಧದ ಹೋರಾಟ ಮತ್ತು ಸಾಂಪ್ರದಾಯಿಕ ಶಸ್ತ್ರಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ದೊಡ್ಡ ಸಂಖ್ಯೆಯಲ್ಲಿನ ಸಶಸ್ತ್ರ ಡ್ರೋನ್‌ಗಳ ದಾಳಿಯನ್ನು ಭಾರತದ ಭೂ ಸೇನಾ ರಚನೆಗೆ ಎದುರಿಸಲು ಸಾಧ್ಯವಾಗಲಾರದು ಎಂದು ಚೀನಾದ ಮಾಧ್ಯಮ ಹೇಳಿದೆ.

ಹಲವು ತಿಂಗಳಿನಿಂದ ಬಂದರಿನಲ್ಲಿ ಸಿಲುಕಿಕೊಂಡ ಭಾರತದ ನಾವಿಕರು: ಮನೆಗೆ ಮರಳಲು ಬಿಡದ ಚೀನಾಹಲವು ತಿಂಗಳಿನಿಂದ ಬಂದರಿನಲ್ಲಿ ಸಿಲುಕಿಕೊಂಡ ಭಾರತದ ನಾವಿಕರು: ಮನೆಗೆ ಮರಳಲು ಬಿಡದ ಚೀನಾ

ಆಫ್ರಿಕಾ ಮತ್ತು ಏಷ್ಯಾದ ಯುದ್ಧಭೂಮಿಗಳಲ್ಲಿ ವಿಂಗ್ ಲೂಂಗ್ ಡ್ರೋನ್‌ಗಳು ಬಹು ಯಶಸ್ವಿಯಾಗಿದ್ದವು. ಅಫ್ಘಾನಿಸ್ತಾನ ಮತ್ತು ಇರಾಕ್‌ಗಳಲ್ಲಿ ಅಮೆರಿಕವು ವಾಯು ಪ್ರದೇಶದಲ್ಲಿ ಉಗ್ರರು ಮತ್ತು ಬಂಡುಕೋರರ ವಿರುದ್ಧ ದಾಳಿಗಳನ್ನು ನಡೆಸಲು ಡ್ರೋನ್‌ಗಳನ್ನು ಬಳಸಿಕೊಂಡಿದ್ದವು. ಆದರೆ ಅದೇ ರೀತಿ ಭಾರತವು ಬಳಕೆ ಮಾಡದ ವಾಯು ಪ್ರದೇಶಗಳಲ್ಲಿ ಚೀನಾದ ಡ್ರೋನ್‌ಗಳು ಪ್ರಾಬಲ್ಯ ಮೆರೆಯುವ ಸಾಧ್ಯತೆ ಇಲ್ಲ ಎಂದು ಭಾರತ ಹೇಳಿದೆ.

China Sells 50 Wing Loong II Armed Drones To Pakistan

'ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಅಥವಾ ಲಡಾಖ್‌ನ ವಾಸ್ತವ ನಿಯಂತ್ರ ರೇಖೆಯಲ್ಲಿನ ವಾಯು ಪ್ರದೇಶಗಳನ್ನು ನಮ್ಮ ರೇಡಾರ್‌ಗಳು ಬಹಳ ತೀಕ್ಷ್ಣವಾಗಿ ಗಮನಿಸುತ್ತಿವೆ. ಯಾವುದೇ ಶಸ್ತ್ರಸಹಿತ ಡ್ರೋನ್ ಗಡಿ ದಾಟಿ ಬಂದರೂ ಅವುಗಳನ್ನು ಹೊಡೆದುರುಳಿಸಲಾಗುತ್ತದೆ' ಎಂದು ವಾಯುಪಡೆಯ ಮಾಜಿ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

ಭಾರತ-ಚೀನಾ ಗಡಿ ವಿವಾದದ ಮಧ್ಯೆ, LACಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆಭಾರತ-ಚೀನಾ ಗಡಿ ವಿವಾದದ ಮಧ್ಯೆ, LACಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ

ಆದರೆ ಪಾಕಿಸ್ತಾನವು ಚೀನಾದಿಂದ ಸಶಸ್ತ್ರ ಡ್ರೋನ್‌ಗಳನ್ನು ಖರೀದಿ ಮಾಡಿರುವುದು ಭಾರತವೂ ಶಸ್ತ್ರಸಹಿತ ಡ್ರೋನ್‌ಗಳನ್ನು ಹೊಂದುವುದು ಮತ್ತು ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಹೊಂದುವುದು ಮುಖ್ಯವಾಗಿದೆ. ಏಕೆಂದರೆ ಎಲ್‌ಒಸಿ ಅಥವಾ ಎಲ್‌ಎಸಿಯನ್ನು ದಾಟದೆಯೂ ಮಾನವರಹಿತ ವೈಮಾನಿಕ ವಾಹನಗಳು ಗಾಳಿಯಿಂದ ಭೂಮಿಗೆ ಶಸ್ತ್ರಗಳನ್ನು ಬಳಸುವ ಸಾಧ್ಯತೆ ಇದೆ.

English summary
China sold 50 Wing Loon II armed drones to Pakistan which may become threat to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X