ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಕೇಂದ್ರಾಡಳಿತ ಪ್ರದೇಶ ಭಾರತದ ಅಕ್ರಮ ರಚನೆ ಎಂದ ಚೀನಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಭಾರತ ಕೇಂದ್ರಾಡಳಿತ ಪ್ರದೇಶ ಲಡಾಖ್ ಅನ್ನು ತಾನು ಪರಿಗಣಿಸುವುದೇ ಇಲ್ಲ ಎಂದಿರುವ ಚೀನಾ, ಭಾರತವು ಇಲ್ಲಿ ನಿರ್ಮಿಸಿರುವ 44 ಪ್ರಮುಖ ಸೇತುವೆಗಳ ಉದ್ಘಾಟನೆಯನ್ನು ವಿರೋಧಿಸುವುದಾಗಿ ಹೇಳಿದೆ.

ಮಹತ್ವದ ಯುದ್ಧ ಪ್ರದೇಶಗಳಲ್ಲಿ 44 ಪ್ರಮುಖ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿರುವುದಕ್ಕೆ ಚೀನಾ ಈ ಪ್ರತಿಕ್ರಿಯೆ ನೀಡಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತದ ಅಕ್ರಮ ರಚನೆಯಾಗಿದೆ ಎಂದು ಅದು ಹೇಳಿದೆ.

ಪಾಕ್ ಬೆನ್ನಲ್ಲೇ ಗಡಿ ವಿವಾದ ಸೃಷ್ಟಿಸುತ್ತಿರುವ ಚೀನಾ: ರಾಜನಾಥ್ ಸಿಂಗ್ಪಾಕ್ ಬೆನ್ನಲ್ಲೇ ಗಡಿ ವಿವಾದ ಸೃಷ್ಟಿಸುತ್ತಿರುವ ಚೀನಾ: ರಾಜನಾಥ್ ಸಿಂಗ್

ಯಾವುದೇ ದೇಶ ಕ್ರಮ ತೆಗೆದುಕೊಳ್ಳಲು ಮುಂದಾದರೂ ಅದು ಸನ್ನಿವೇಶವನ್ನು ಸಂಕೀರ್ಣಗೊಳಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದಾರೆ. ಉಭಯ ದೇಶಗಳ ಏಳನೇ ಸುತ್ತಿನ ಸೇನಾ ಮಾತುಕತೆ ಬಳಿಕ ಅದು ಈ ಹೇಳಿಕೆ ನೀಡಿದೆ.

China Says It Did Not Recognise Union Territory Of Ladakh Illegally Set Up By India

'ಭಾರತವು ಅಕ್ರಮವಾಗಿ ರಚಿಸಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಅರುಣಾಚಲ ಪ್ರದೇಶ ಎಂಬುದನ್ನು ಚೀನಾ ಪರಿಗಣಿಸುವುದಿಲ್ಲ. ವಿವಾದಿತ ಗಡಿ ಭಾಗಗಳಲ್ಲಿ ಸೇನಾ ಸರ್ವೇಕ್ಷಣೆಯ ಉದ್ದೇಶದಿಂದ ಮೂಲಸೌಕರ್ಯ ನಿರ್ಮಾಣ ಕಾರ್ಯಗಳನ್ನು ನಡೆಸುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಎರಡೂ ದೇಶಗಳು ಇತ್ತೀಚೆಗೆ ತೆಗೆದುಕೊಂಡ ಪರಸ್ಪರ ಸಮ್ಮತದ ತೀರ್ಮಾನದ ಅನ್ವಯ ಚೀನಾವಾಗಲೀ ಭಾರತವಾಗಲೀ ಗಡಿ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು. ಇದರಿಂದ ವಿವಾದವು ಮತ್ತಷ್ಟು ಸಂಕೀರ್ಣಗೊಳ್ಳುತ್ತದೆ. ಅಲ್ಲದೆ, ಪರಿಸ್ಥಿತಿಯನ್ನು ಶಮನಗೊಳಿಸುವ ಉದ್ದೇಶದಿಂದ ಎರಡೂ ದೇಶಗಳು ನಡೆಸುತ್ತಿರುವ ಪ್ರಯತ್ನಗಳನ್ನು ಹಾಳುಮಾಡಬಾರದು ಎಂದು ತಿಳಿಸಿದ್ದಾರೆ.

ಭಾರತ-ಚೀನಾ ನಡುವೆ 7ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಭಾರತ-ಚೀನಾ ನಡುವೆ 7ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ಗಡಿಯಲ್ಲಿನ ಉದ್ವಿಗ್ನತೆಗೆ ಭಾರತವೇ ಮೂಲ ಕಾರಣ ಎಂದು ಝಾವೋ ಆರೋಪಿಸಿದ್ದಾರೆ. ಭಾರತವು ಮೂಲಸೌಕರ್ಯ ನಿರ್ಮಾಣ ವೃದ್ಧಿಸುವ ಕಾರ್ಯಗಳನ್ನು ಮುಂದುವರಿಸುತ್ತಿದೆ. ಜತೆಗೆ ಹಲವು ಸಮಯದಿಂದ ವಿವಾದಿತ ಪ್ರದೇಶಗಳಲ್ಲಿ ಪಡೆಗಳನ್ನು ನಿಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ.

English summary
China said it did not recognise the Union Territory of Ladakh and it is illegally set up by India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X