• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಡಾಖ್ ಗಡಿಯಿಂದ ಉಭಯ ಸೇನೆಗಳು ಹಿಂದೆ ಸರಿದಿವೆ ಎಂದ ಚೀನಾ

|

ಬೀಜಿಂಗ್, ಜುಲೈ 29: ಪೂರ್ವ ಲಡಾಖ್‌ನ ಗಡಿಯಿಂದ ಉಭಯ ಸೇನೆಗಳು ಸಂಪೂರ್ಣ ಹಿಂದೆ ಸರಿದಿವೆ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಗಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದ್ದಾರೆ.

   North Korea Kim Jong un ಯುದ್ಧದ ಬಗ್ಗೆ ಹೇಳಿದ್ದೇನೆ | Oneindia Kannada

   ಇತ್ತೀಚಿಗೆ ಭಾರತೀಯ ಸೇನೆ ಜೊತೆ ನಡೆದ ಮಾತುಕತೆಯಲ್ಲಿ ನಿರ್ಣಯಿಸಿದಂತೆ ಲಡಾಖ್ ಗಡಿಯಲ್ಲಿರುವ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯಲಾಗಿದೆ. ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಉಭಯ ಸೇನೆಗಳು ಪರಸ್ಪರ ಸಹಕರಿಸುತ್ತಿವೆ ಎಂದು ವಾಂಗ್ ಹೇಳಿದ್ದಾರೆ.

   ಗಾಲ್ವಾನ್, ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ ನಿಂದ ಸೇನೆ ಹಿಂಪಡೆಯಲಾಗಿದೆಯೇ? ಎಂಬ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಉಭಯ ದೇಶಗಳ ಮುಂಚೂಣಿ ಗಡಿ ಪಡೆಗಳು ಈಗಾಗಲೇ ಬಹುತೇಕ ಸೇನಾ ನೆಲೆಗಳಲ್ಲಿ ನಿಷ್ಕ್ರಿಯತೆಯನ್ನು ಪೂರ್ಣಗೊಳಿಸಿವೆ ಎಂದು ತಿಳಿಸಿದ್ದಾರೆ.

   ಶಾಂತಿ ಮಾತುಕತೆಗಳ ಮೂಲಕವೇ ಸಮಸ್ಯೆ ಪರಿಹಾರ ಕಾಣಬೇಕು ಎಂಬುದು ಎರಡೂ ರಾಷ್ಟ್ರಗಳ ಬಯಕೆಯಾಗಿದ್ದು, ಅದರಂತೆಯೇ ಎರಡೂ ಸೇನೆಗಳು ಮಾತುಕತೆಯಲ್ಲಿ ನಿರತವಾಗಿರುವುದು ಸಂತಸದ ವಿಷಯ ಎಂದು ವೆನ್‌ಬಿನ್ ತಿಳಿಸಿದ್ದಾರೆ.

   ಟಿಬೆಟ್ ಗಡಿಯಲ್ಲಿ ಸೇನಾ ನಿಯೋಜನೆ ಹೆಚ್ಚಿಸುತ್ತಿರುವ ಚೀನಾ

   ಈ ಹಿಂದೆ ಲಡಾಖ್ ಗಡಿಯಿಂದ ಸೇನೆಯನ್ನು ಹಿಂಪಡೆದಿದ್ದರೂ ಕೂಡ ಮತ್ತೆ ಗಡಿಯಲ್ಲಿ 40 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಚೀನಾ ನೇಮಿಸಿತ್ತು. ಈ ಕುರಿತು ಮತ್ತೆ ಕಮಾಂಡರ್ ಮಟ್ಟದ ಸಭೆ ಏರ್ಪಟ್ಟಿತ್ತು. ತಮ್ಮ ಸಂಪೂರ್ಣ ಸೇನೆಯನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರು.

   ಲಡಾಖ್ ಗಡಿಯಿಂದ ಬಹುತೇಕವಾಗಿ ಸೈನ್ಯ ತುಕಡಿಗಳನ್ನು ಹಿಂಪಡೆಯಲಾಗಿದೆ ಎಂಬ ಚೀನಾದ ಘೋಷಣೆಯನ್ನು ತಳ್ಳಿಹಾಕಿರುವ ಭಾರತ, ಈ ಹೇಳಿಕೆ ಸುಳ್ಳು, ಚೀನಾ ಇನ್ನು ತನ್ನ ಸೇನೆಯನ್ನು ಹಿಂಪಡೆದಿಲ್ಲ ಎಂದು ಹೇಳಿದೆ.

   English summary
   The frontline troops of China and India have "completed" disengagement at most locations of their border, a senior Chinese official said on Tuesday, adding the situation on the ground is easing.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X