ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಭಾರತೀಯ ಯೋಧರನ್ನು ಬಿಡುಗಡೆಗೊಳಿಸಿದ ಚೀನಾ ಆರ್ಮಿ

|
Google Oneindia Kannada News

ದೆಹಲಿ, ಜೂನ್ 19: ಚೀನಾ ಮತ್ತು ಭಾರತ ಸೈನಿಕರ ಘರ್ಷಣೆಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮೇಜರ್ ಜನರಲ್ ಮಾತುಕತೆ ಬಳಿಕ ಚೀನಾ ವಶದಲ್ಲಿದ್ದ ಭಾರತದ 10 ಯೋಧರನ್ನು ಬಿಡುಗಡೆಗೊಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Recommended Video

ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸಾದ ಶ್ರೀಶಾಂತ್ | Sreesanth | Oneindia Kannada

ಹತ್ತು ಯೋಧರ ಪೈಕಿ ಇಬ್ಬರು ಮೇಜರ್‌ ಅಧಿಕಾರಿಗಳು ಇದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ಮಾಡಿರುವ ವರದಿಯಲ್ಲಿ ಉಲ್ಲೇಖಸಿದೆ.

ಲಡಾಖ್ ಗಡಿ ಸಂಘರ್ಷ: ಮಾಧ್ಯಮಗಳ 6 ಪ್ರಶ್ನೆಗಳಿಗೆ ಚೀನಾದ ಒಂದೇ ಉತ್ತರಲಡಾಖ್ ಗಡಿ ಸಂಘರ್ಷ: ಮಾಧ್ಯಮಗಳ 6 ಪ್ರಶ್ನೆಗಳಿಗೆ ಚೀನಾದ ಒಂದೇ ಉತ್ತರ

ಸತತ ಮೂರು ದಿನಗಳಿಂದ ಚೀನಾ ಮತ್ತು ಭಾರತದ ನಡುವೆ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆದಿದೆ. ಈ ಚರ್ಚೆ ಬಳಿಕ ಗುರುವಾರ ಸಂಜೆ ಇಬ್ಬರು ಅಧಿಕಾರಿ ಸೇರಿ 10 ಯೋಧರನ್ನು ಭಾರತಕ್ಕೆ ಕಳುಹಿಸಿಕೊಡಲಾಗಿದೆ ಎಂದು ವರದಿ ಹೇಳಿದೆ. ಮುಂದೆ ಓದಿ...

ಅಧಿಕೃತ ಮಾಹಿತಿ ಇಲ್ಲ

ಅಧಿಕೃತ ಮಾಹಿತಿ ಇಲ್ಲ

ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆ ಬಳಿಕ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಉಭಯ ರಾಷ್ಟ್ರಗಳ ಮಿಲಿಟರಿ ಪಡೆ ಮಾತುಕತೆಗೆ ಮುಂದಾಗಿತ್ತು. ಈ ವೇಳೆ ನಡೆದ ಒಪ್ಪಂದದಲ್ಲಿ ಭಾರತೀಯ ಯೋಧರನ್ನು ಬಿಡುಗಡೆ ಮಾಡಿರುವುದಾಗಿ ತಿಳಿದಿದೆ. ಆದರೆ, ಹತ್ತು ಯೋಧರ ಕುರಿತು ಸೇನೆ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಯಾರೂ ಕಾಣೆಯಾಗಿರಲಿಲ್ಲ ಎಂದಿದ್ದ ಸೇನೆ

ಯಾರೂ ಕಾಣೆಯಾಗಿರಲಿಲ್ಲ ಎಂದಿದ್ದ ಸೇನೆ

ಚೀನಾ ಮತ್ತು ಭಾರತದ ನಡುವೆ ನಡೆದ ಘರ್ಷಣೆ ಬಳಿಕ ಭಾರತದ ಕೆಲವು ಯೋಧರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ, ಗುರುವಾರ ಸಂಜೆ ವೇಳೆ ಸೇನೆಯ ಮೂಲಗಳು ''ಈ ಘಟನೆಯಲ್ಲಿ ಯಾರೂ ಕಾಣೆಯಾಗಿಲ್ಲ. ಎಲ್ಲರ ಸಿಕ್ಕಿವೂ ಪಡೆಯಲಾಗಿದೆ'' ಎಂದು ಮಾಹಿತಿ ನೀಡಿತ್ತು. ಆದರೆ, ಚೀನಾ ವಶಕ್ಕೆ ಪಡೆದುಕೊಂಡಿದ್ದ ಸೈನಿಕರ ಬಗ್ಗೆ ಯಾವ ಸ್ಪಷ್ಟನೆಯೂ ಸಿಕ್ಕಿರಲಿಲ್ಲ.

ಲಡಾಖ್ ಘರ್ಷಣೆಯಲ್ಲಿ 76 ಸೈನಿಕರಿಗೆ ಗಾಯ, ಯಾರೂ ಕಾಣೆಯಾಗಿಲ್ಲಲಡಾಖ್ ಘರ್ಷಣೆಯಲ್ಲಿ 76 ಸೈನಿಕರಿಗೆ ಗಾಯ, ಯಾರೂ ಕಾಣೆಯಾಗಿಲ್ಲ

76 ಮಂದಿ ಯೋಧರಿಗೆ ಗಾಯ

76 ಮಂದಿ ಯೋಧರಿಗೆ ಗಾಯ

ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಭಾರತದ 76 ಮಂದಿ ಯೋಧರಿಗೆ ಗಾಯವಾಗಿತ್ತು ಎಂದು ಸೇನೆ ವಿವರಣೆ ನೀಡಿತ್ತು. ಇದರಲ್ಲಿ 18 ಸೈನಿಕರಿಗೆ ಗಂಭೀರ ಗಾಯಗಳಾಗಿದ್ದವು. ಉಳಿದವರಿಗೆ ಸಣ್ಣಪುಟ್ಟ ಪೆಟ್ಟಾಗಿತ್ತು. ಈಗ ಎಲ್ಲವೂ ಆರೋಗ್ಯವಾಗಿದ್ದಾರೆ ಎಂದು ಸೇನೆ ವಿವರಣೆಯಲ್ಲಿ ಹೇಳಿತ್ತು.

20 ಯೋಧರ ಹುತಾತ್ಮ

20 ಯೋಧರ ಹುತಾತ್ಮ

ಇನ್ನು ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾ ಸೇನೆಯಲ್ಲೂ ಪ್ರಾಣ ಹಾನಿ ಸಂಭವಿಸಿದೆ. ಆದರೆ, ಈ ಕುರಿತು ಚೀನಾ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ. ಅಮೆರಿಕ ಗುಪ್ತಚರ ವರದಿ ಮಾಡಿರುವ ಪ್ರಕಾರ, ಸುಮಾರು 35 ಚೈನೀಸ್ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 43 ಮಂದಿ ಚೀನಾ ಯೋಧರು ಅಸುನೀಗಿದ್ದಾರೆ.

English summary
China's People's Liberation Army release 10 Indian army soldiers after talks between Major General of three days says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X