ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ತರ ಕಾಣುವ ಅವಳಿ ಸಹೋದರಿಯರು ಚೀನಾದಲ್ಲಿ ಸೆರೆ !

|
Google Oneindia Kannada News

ಬೆಂಗಳೂರು, ಜೂ. 30: ಅವರಿಬ್ಬರು ಅವಳಿ ಜವಳಿ ಸಹೋದರಿಯರು. ಇಬ್ಬರದ್ದು ಒಂದೇ ತರ ರೂಪ. ಇದನ್ನೇ ಬಳಸಿಕೊಂಡು ಒಬ್ಬ ಸಹೋದರಿಯ ಪಾಸ್‌ ಪೋರ್ಟ್ ಬಳಸಿ ಮತ್ತೊಬ್ಬ ಸಹೋದರಿ ಹಲವಾರು ದೇಶ ಸುತ್ತಾಡಿ ಬಂದಿದ್ದಳು. ಹೀಗೆ ಹಲವಾರು ಸಮಯ ಯಾಮಾರಿಸಿದ್ದ ಅವಳಿ ಸಹೋದರಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಬ್ಬರ ಪಾಸ್‌ ಪೋರ್ಟ್ ಬಳಸಿ ಮತ್ತೊಬ್ಬರು ಹಲವು ದೇಶ ಸುತ್ತಿ ಅಪರಾಧ ಎಸಗಿದ ಹಿನ್ನೆಲೆಯಲ್ಲಿ ಚೀನಾದಲ್ಲಿ ಇಬ್ಬರು ಅವಳಿ- ಜವಳಿ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಮಹಿಳೆ ತನ್ನ ಸಹೋದರಿಯ ಪಾಸ್‌ ಪೋರ್ಟ್ ಬಳಿಸಿ ಚೀನಾ ಬಿಟ್ಟು ಜಪಾನ್, ರಷ್ಯಾ ಮತ್ತು ಥಾಯ್ಲೆಂಡ್‌ಗೆ ಹೋಗಿದ್ದಳು. ಇದೇ ಸಮಯದಲ್ಲಿ ಮತ್ತೊಬ್ಬ ಸಹೋದರಿ ಜಪಾನಿನಲ್ಲಿರುವ ಪತಿ ಬಳಿ ಹೋಗಲು ವೀಸಾ ಪಡೆಯುವಾಗ ಪಾಸ್‌ ಪೋರ್ಟ್ ಎಡವಟ್ಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಆಕೆ ಹೆಸರು ಜೌ ಮಾಂಗ್, ಜಪಾನ್ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಚೀನಾ ಬಿಟ್ಟು ಜಪಾನ್‌ನಲ್ಲಿರುವ ಗಂಡನ ಬಳಿ ಹೋಗಲು ವೀಸಾಗೆ ಅರ್ಜಿ ಸಲ್ಲಿಸಿದ್ದಾಳೆ. ಚೀನಾ ದಿಂದ ಜಪಾನ್‌ಗೆ ತೆರಳಲು ಜೌ ಮಾಂಗ್‌ಗೆ ಸ್ಥಳೀಯ ಇಮಿಗ್ರೇಷನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ವಿಪರ್ಯಾಸ ಏನೆಂದರೆ, ಈಕೆಯ ಸಹೋದರಿ ಜೌ ಮೌಯೀ ಅವರಿಗೆ ವೀಸಾ ಸಿಕ್ಕಿತ್ತು. ಹೀಗೆ ಒಬ್ಬರ ಪಾಸ್‌ ಪೋರ್ಟ್ ಇನ್ನೊಬ್ಬರು ಬಳಿಸಿ ಅವಳಿ ಸಹೋದರರು ಭಾರೀ ಎಡವಟ್ಟು ಮಾಡಿಕೊಂಡಿಕೊಂಡಿದ್ದಾರೆ. ಇಬ್ಬರೂ ಒಂದೇ ಥರ ಕಾಣುತ್ತಿದ್ದ ಪರಿಣಾಮ ಇವರು ಮಾಡಿದ್ದ ಎಡವಟ್ಟು ಯಾರಿಗೂ ಗೊತ್ತಾಗಿರಲಿಲ್ಲ. ಉತ್ತರ ಚೀನಾದ ಹರ್ಬಿನ್ ಪ್ರಾಂತ್ಯದ ಈ ಸಹೋದರಿಯರು ಒಂದೇ ಥರ ಕಾಣುತ್ತಾರೆ. ಅದರಲ್ಲಿ ಜೌ ಮಾಂಗ್ ತನ್ನ ಸಹೋದರಿಯ ದಾಖಲೆ ಬಳಿಸಿ ಜಪಾನ್, ರಷ್ಯಾ, ಥಾಯ್ಲೆಂಡ್ ಸುತ್ತಾಡಿದ್ದಳು.

China Police Arrest Twin Sisters Who Used Each Others Passport

ಜೌ ಮಾಂಗ್ ಮೂವತ್ತು ಬಾರಿ ಚೀನಾ ಬಿಟ್ಟು ಹೊರ ದೇಶಗಳಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅಧಿಕಾರಿಗಳು ಈಕೆಯನ್ನು ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಆಕೆಯ ಸಹೋದರಿ ಜೌ ಮೌಯೀ ಇದನ್ನೇ ದುರ್ಬಳಕೆ ಮಾಡಿಕೊಂಡು, ಥಾಯ್ಲೆಂಡ್ ಸೇರಿದಂತೆ ಹಲವು ದೇಶ ಸುತ್ತಾಡಿ ಬಂದಿದ್ದಳು. ಒಬ್ಬರ ಪಾಸ್‌ ಪೋರ್ಟ್ ಇನ್ನೊಬ್ಬರು ಬಳಸಿ ಹೀಗೆ ಅಕ್ರಮ ಎಸಗಿದ್ದರು.

China Police Arrest Twin Sisters Who Used Each Others Passport

ಚೀನಾ ಸ್ಥಳೀಯ ಪೊಲೀಸ್ ಅಧಿಕಾರಿ ವಾಂಗ್ ಕ್ಸಿಯಾಂಗ್ ಪ್ರಕಾರ, ಒಬ್ಬರ ದಾಖಲೆ ಇನ್ನೊಬ್ಬರು ಬಳಸುವುದು ಅಪರಾಧ. ಆದರೆ ಈ ಇಬ್ಬರು ಸಹೋದರಿಯರು ಈ ಅಕ್ರಮ ಎಸಗಿದ್ದಾರೆ. ಹಲವರು ದೇಶಗಳಿಗೆ ಅಕ್ರಮವಾಗಿ ಭೇಟಿ ನೀಡಿರುವುದು ಗೊತ್ತಾಗಿದೆ. ಒಬ್ಬರ ಪಾಸ್ ಪೋರ್ಟ್ ಬಳಿಸಿ ಇನ್ನೊಬ್ಬರು ವಿದೇಶಕ್ಕೆ ಹೋಗುವುದು ಅಪರಾಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Recommended Video

ಉದಯಪುರ್ ಟೈಲರ್ ಹತ್ಯೆ ನಂತರ ಕರ್ನಾಟಕದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ | Oneindia Kannada

English summary
police in china arrest twin sisters who used each other's passports more then 30 times to travel world know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X