ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ಮಾದರಿಯಲ್ಲಿ ಭಾರತದಲ್ಲಿ ಚೀನಾದಿಂದ ಆಸ್ಪತ್ರೆ ನಿರ್ಮಾಣ

|
Google Oneindia Kannada News

ನವದೆಹಲಿ, ಮಾರ್ಚ್ 29 : ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾ ಭಾರತದಲ್ಲಿ ಸ್ಥಳಾಂತರ ಮಾಡಬಹುದಾದ ಆಸ್ಪತ್ರೆ ನಿರ್ಮಿಸಿ ಕೊಡುವುದಾಗಿ ಹೇಳಿದೆ.

ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡ ವುಹಾನ್‌ನಲ್ಲಿ ಚೀನಾ ಚಿಕಿತ್ಸೆ ನೀಡಲು ಸ್ಥಳಾಂತರ ಮಾಡಬಹುದಾದ ಆಸ್ಪತ್ರೆ ನಿರ್ಮಾಣ ಮಾಡಿತ್ತು. ಚೀನಾದ ಈ ಕಾರ್ಯಕ್ಕೆ ವಿಶ್ವದ ವಿವಿಧ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.

ಕೊರೊನಾ ತವರು ವುಹಾನ್ ಮತ್ತೆ ಮೊದಲಿನಂತಾಗಲು ಅದೆಷ್ಟು ವರ್ಷ ಬೇಕು?ಕೊರೊನಾ ತವರು ವುಹಾನ್ ಮತ್ತೆ ಮೊದಲಿನಂತಾಗಲು ಅದೆಷ್ಟು ವರ್ಷ ಬೇಕು?

ಬೀಚಿಂಗ್ ನವದೆಹಲಿ ಜೊತೆ ಸಂಪರ್ಕದಲ್ಲಿದ್ದು ಕೊರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡುತ್ತಿದೆ. ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನದಲ್ಲಿ ಚೀನಾ ಭಾರತಕ್ಕೆ ಆಸ್ಪತ್ರೆ ನಿರ್ಮಾಣ ಮಾಡಿಕೊಡಲಿದೆ ಎಂದು ಹೇಳಿದೆ.

ಎರಡು ತಿಂಗಳ ಬಳಿಕ ವುಹಾನ್ ನಲ್ಲಿ ಬಸ್ ಸಂಚಾರ ಪುನರಾರಂಭಎರಡು ತಿಂಗಳ ಬಳಿಕ ವುಹಾನ್ ನಲ್ಲಿ ಬಸ್ ಸಂಚಾರ ಪುನರಾರಂಭ

 China Offered To Build Makeshift Hospitals In India

ದಕ್ಷಿಣ ಏ‍ಷ್ಯಾದ ದೇಶಗಳಿಗೆ ಈಗಾಗಲೇ ಚೀನಾದ ಕಂಪನಿಗಳು ಭೇಟಿ ನೀಡಿದ್ದು, ಸ್ಥಳಾಂತರ ಮಾಡಬಹುದಾದ ಆಸ್ಪತ್ರೆಗಳ ನಿರ್ಮಾಣ ಕಾರ್ಯದಲ್ಲಿ ಸ್ಥಳೀಯರಿಗೆ ನೆರವಾಗಲಿವೆ. ಚೀನಾದ ಹಲವು ಉದ್ಯಮಿಗಳು ಭಾರತಕ್ಕೆ ದೇಣಿಗೆಯನ್ನು ನೀಡುತ್ತಿವೆ.

ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!

ಜಿ ರಾಂಗ್ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ವಕ್ತಾರೆ ಈ ಕುರಿತು ಮಾಹಿತಿ ನೀಡಿದ್ದಾರೆ. "ನಮ್ಮ ಶಕ್ತಿಗೆ ಅನುಗುಣವಾಗಿ ನಾವು ನೆರವು, ಸಹಾಯ ನೀಡಲು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.

ಚೀನಾದ ಹಲವಾರು ಕಂಪನಿಗಳು ಭಾರತದ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಇವುಗಳನ್ನು ಬಳಸಿಕೊಂಡು ವುಹಾನ್ ಮಾದರಿಯಲ್ಲಿ ಸ್ಥಳಾಂತರ ಮಾಡಬಹುದಾದ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಚೀನಾ ಹೇಳಿದೆ.

ಕೊರೊನಾ ನಿಯಂತ್ರಣಕ್ಕೆ ತರಲು ಅಗತ್ಯ ಸಲಹೆ, ಸಹಕಾರವನ್ನು ನಾವು ಭಾರತಕ್ಕೆ ನೀಡಲಿದ್ದೇವೆ. ವೈರಸ್ ಪತ್ತೆ, ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದೇವೆ ಎಂದು ಚೀನಾ ಹೇಳಿದೆ.

English summary
China has offered to build makeshift hospitals in India. The make-shift hospitals would be like the ones that were built at Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X