ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಗಡಿಭಾಗದಲ್ಲಿ 25 ಯುದ್ಧವಿಮಾನ ಅಣಿಗೊಳಿಸಿ ಕಾದಿದೆ ಚೀನಾ

|
Google Oneindia Kannada News

ನವದೆಹಲಿ, ಜೂನ್ 10: ಭಾರತದ ಗಡಿಭಾಗದಲ್ಲಿ ಚೀನಾದ ಮಿಲಿಟರಿ ಸೌಕರ್ಯ ವ್ಯವಸ್ಥೆ ಆತಂಕಕಾರಿ ಎನಿಸುವಷ್ಟು ಹೆಚ್ಚಿದೆ ಎಂದು ಇತ್ತೀಚೆಗೆ ಅಮೆರಿಕದ ಸೇನಾಧಿಕಾರಿಯೊಬ್ಬರು ಎಚ್ಚರಿಸಿದ್ದರು. ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಎನಿಸುವಂತೆ ಇದೀಗ ಲಡಾಖ್ ಗಡಿಭಾಗದಲ್ಲಿ ಚೀನಾ 25 ಯುದ್ಧವಿಮಾನಗಳನ್ನು ಅಣಿಗೊಳಿಸಿ ನಿಲ್ಲಿಸಿರುವ ಮಾಹಿತಿ ಕೇಳಿಬಂದಿದೆ.

ಲಡಾಖ್ ಸೆಕ್ಟರ್‌ನ ಪೂರ್ವಭಾಗದ ಬಳಿ ಇರುವ ಚೀನಾದ ಹೋಟನ್ ವಾಯುನೆಲೆಯಲ್ಲಿ ಸುಮಾರು 25 ಜೆ-11 ಮತ್ತು ಜೆ-20 ಫ್ರಂಟ್‌ಲೈನ್ ಫೈಟರ್ ವಿಮಾನಗಳು ಇವೆ ಎಂದು ಸರಕಾರದ ಮೂಲಗಳು ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್!ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್!

ಹೋಟನ್ ವಾಯುನೆಲೆ ಹೊಸದಾಗಿ ನಿರ್ಮಿಸಿದ್ದಲ್ಲ. ಹಿಂದಿನಿಂದಲೂ ಚೀನಾ ಇದನ್ನು ಬಳಸುತ್ತಾ ಬಂದಿರುವುದು ಹೌದು. ಆದರೆ, ಈ ಹಿಂದೆ ಮಿಗ್ ಶ್ರೇಣಿಯ ಯುದ್ಧವಿಮಾನಗಳ ಬಿಡಿಭಾಗಗಳ ದುರಸ್ತಿಗೆ ಈ ವಾಯುನೆಲೆಯನ್ನು ಬಳಸುತ್ತಿತ್ತು. ಈಗ ಅತ್ಯಾಧುನಿಕ ಮತ್ತು ಹೆಚ್ಚು ಶಕ್ತಿಶಾಲಿ ಫೈಟರ್ ವಿಮಾನಗಳನ್ನು ಇಲ್ಲಿಗೆ ತಂದಿರಸಲಾಗಿದೆ. ವಿಮಾನಗಳ ಸಂಖ್ಯೆಯೂ ಇಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.

China Keeps J-11, J-20 Fighters at its Airfield Near Ladakh Border

ಅಷ್ಟೇ ಅಲ್ಲ, ಭಾರತದ ಗಡಿಭಾಗಕ್ಕೆ ಸಮೀಪದಲ್ಲಿ ಹೊಸ ವಾಯುಕ್ಷೇತ್ರಗಳನ್ನು ನಿರ್ಮಿಸುತ್ತಿದೆ. ಇದರಿಂದ ಕಡಿಮೆ ಮೇಲ್ಮಟ್ಟದಿಂದ ವೈಮಾನಿಕ ಕಾರ್ಯಾಚರಣೆಗಳನ್ನು ನಡೆಸುವುದು ಸುಲಭವಾಗುತ್ತದೆ. ಇಲ್ಲಿ ಏರ್ ಬೇಸ್ ಮತ್ತು ಏರ್ ಫೀಲ್ಡ್ ಮಧ್ಯೆ ವ್ಯತ್ಯಾಸ ಎಂದರೆ ಏರ್ ಬೇಸ್ ಎನ್ನುವುದು ಮಿಲಿಟರಿ ಏರ್‌ಪೋರ್ಟ್ ಇದ್ದಂತೆ. ಏರ್‌ಫೀಲ್ಡ್ ಎಂದರೆ ಯುದ್ಧ ವಿಮಾನಗಳು ಕಟ್ಟುಪಾಡುಗಳಿಲ್ಲದೇ ಸ್ವತಂತ್ರವಾಗಿ ಇಲ್ಲಿ ಬಂದಿಳಿದು ಹಾರಾಟ ನಡೆಸಬಹುದು.

ಎಲ್ಎಸಿಯಲ್ಲಿ ಚೀನಾ ಚಟುವಟಿಕೆ, ಕೇಂದ್ರಕ್ಕೆ ನಾಚಿಕೆಯಾಗಬೇಕು: ಓವೈಸಿಎಲ್ಎಸಿಯಲ್ಲಿ ಚೀನಾ ಚಟುವಟಿಕೆ, ಕೇಂದ್ರಕ್ಕೆ ನಾಚಿಕೆಯಾಗಬೇಕು: ಓವೈಸಿ

ಭಾರತ ಮತ್ತು ಚೀನಾ ಮಧ್ಯೆ 2 ಸಾವಿರ ಕಿಮೀಗೂ ಹೆಚ್ಚು ಉದ್ದದ ಗಡಿ ಇದೆ. ಎಲ್ಲೆಲ್ಲಿ ಚೀನಾ ಒಳಗೊಳಗೆ ಅತಿಕ್ರಮಣ ನಡೆಸುತ್ತಿದೆ ಎಂದು ಕಂಡುಕೊಳ್ಳುವುದೇ ಪ್ರಯಾಸದ ಕೆಲಸ. ಆದರೂ ಭಾರತ ಕೆಲ ಪ್ರದೇಶಗಳಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿದೆ. ಕ್ಸಿನ್‍ಜಿಯಾಂಗ್ ಮತ್ತು ಟಿಬೆಟ್ ಪ್ರದೇಶಗಳಲ್ಲಿರುವ ಚೀನಾದ ವಾಯುನೆಲೆಗಳಾದ ಗ್ಯಾರ್ ಗುನ್ಸಾ, ಕಶಘರ್, ಹಾಪಿಂಗ್, ಕೋಂಕಾ ಜೋಂಗ್, ಲಿಂಝಿ ಮತ್ತು ಪಂಗಟ್‌ನಲ್ಲಿ ಸೌಕರ್ಯ ವೃದ್ಧಿ ಕೆಲಸಕಾರ್ಯಗಳು ನಡೆಯುತ್ತಲೇ ಇವೆ. ಆಶ್ರಯ ಕಟ್ಟಡಗಳು, ವಿಮಾನಗಳು ಬಂದಿಳಿಯಲು ಇರುವ ರನ್‌ವೇಯ ಗಾತ್ರ ಹೆಚ್ಚಿಸುವುದು, ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸುವುದು ಇತ್ಯಾದಿ ಕೆಲಸಗಳು ಈ ವಾಯುನೆಲೆಗಳಲ್ಲಿ ಇತ್ತೀಚೆಗೆ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಇಲ್ಲೆಲ್ಲಾ ಕಡೆ ಭಾರತೀಯ ಸೇನೆಯ ಚಿತ್ತ ಸದಾ ನೆಟ್ಟಿದೆ.

China Keeps J-11, J-20 Fighters at its Airfield Near Ladakh Border

ವೆಸ್ಟರ್ನ್ ಥಿಯೇಟರ್ ಕಮಾಂಡ್‌ನಲ್ಲಿ ನಿರ್ಮಿಸಲಾಗುತ್ತಿರುವ ಕೆಲ ಸೌಕರ್ಯಗಳು ಆತಂಕಕಾರಿ ಎನಿಸುತ್ತಿವೆ. ಚೀನೀಯರ ಚಟುವಟಿಕೆಯ ಮಟ್ಟ ಕಣ್ಕುಕ್ಕುವಂತಿದೆ ಎಂದು ಅಮೆರಿಕದ ಸೇನಾಧಿಕಾರಿ ಜನರಲ್ ಚಾರ್ಲ್ಸ್ ಎ ಫ್ಲಿನ್ ಇತ್ತೀಚೆಗೆ ಹೇಳಿದ್ದರು.

Recommended Video

Nupur Sharma ಅವರ ವಿರುದ್ಧ ನಡೆದ ಪ್ರತಿಭಟನೆಯ ತುಣುಕುಗಳು | Oneindia Kannada

ಎರಡು ವರ್ಷಗಳ ಹಿಂದೆ ಲಡಾಖ್ ಗಡಿಭಾಗದಲ್ಲಿ ಚೀನಾ ಸೇನೆ ಅತಿಕ್ರಮಣಕ್ಕೆ ಮುಂದಾದಾಗ ಭಾರತೀಯ ಸೈನಿಕರು ತಕ್ಕ ಪ್ರತಿರೋಧ ತೋರಿದ್ದರು. ಆಗಿನಿಂದಲೂ ಭಾರತ ಹೆಚ್ಚು ಜಾಗರೂಕವಾಗಿರುವುದು ಮೇಲ್ನೋಟಕ್ಕೆ ತೋರುತ್ತದೆ. ಚೀನಾದ ಗಡಿಭಾಗದ ಬಳಿ ಇರುವ ತನ್ನ ವಾಯು ನೆಲೆಗಳಲ್ಲಿ ಭಾರತ ಸುಖೋಯ್, ಮಿಗ್ ಮತ್ತು ಮಿರೇಜ್ ಯುದ್ಧವಿಮಾನಗಳನ್ನು ನಿಯೋಜಿಸಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಿಸಿದೆ.

(ಒನ್ಇಂಡಿಯಾ ಸುದ್ದಿ)

English summary
China is said to ramped up its infrastructure at its Airbases and Airfields in border with India. At Eastern Ladakh China is said to have deployed 25 fighter planes in its hotan airbase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X