ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಒಳನುಗ್ಗುವಿಕೆ: ಬಿಜೆಪಿ ಸಂಸದನ ಹೇಳಿಕೆ ತಿರಸ್ಕರಿಸಿದ ಭಾರತೀಯ ಸೇನೆ

|
Google Oneindia Kannada News

ಅರುಣಾಚಲಪ್ರದೇಶ, ಸೆಪ್ಟೆಂಬರ್ 5: ಚೀನಾ ಪಡೆಗಳು ಭಾರತದ ಒಳನುಗ್ಗಿವೆ ಎಂಬ ಬಿಜೆಪಿ ಸಂಸದನ ಹೇಳಿಕೆಯನ್ನು ಭಾರತೀಯ ಸೇನೆ ತಿರಸ್ಕರಿಸಿದೆ.

ಅರುಣಾಚಲ ಪ್ರದೇಶದಲ್ಲಿರುವ ಎಲ್‌ಎಸಿ ಬಳಿ ಚೀನಾ ಪಡೆ ನುಸುಳಿದೆ ಎನ್ನುವ ಬಿಜೆಪಿ ಸಂಸದನ ತಾಪಿರ್ ಹೇಳಿಕೆಯನ್ನು ಭಾರತೀಯ ಸೇನೆ ತಿರಸ್ಕರಿಸಿದೆ.

ಚೀನಾದ ಉಗ್ರರು ಅಂಜಾವ್‌ನಲ್ಲಿ ಭಾರತೀಯ ಗಡಿ ಪ್ರದೇಶದಿಂದ ಕೇವಲ 60 ಕಿ.ಮೀ ದೂರದಲ್ಲಿ ಮರದ ಬ್ರಿಡ್ಜ್ ನಿರ್ಮಿಸಿದ್ದಾರೆ. ಅದರಿಂದ ಅರಣುಚಲ ಪ್ರದೇಶಕ್ಕೆ ಉಗ್ರರು ನುಸುಳಿದ್ದಾರೆ ಸಂಸದ ತಾಪಿರ್ ಗಾವ್ ಫೇಸ್‌ಬುಕ್ ಪೋಸ್ಟ್‌ ಹಾಕಿಕೊಂಡಿದ್ದರು.

China Intruders Indian Army Ignores BJP MP Statement

ಭಾರತ ಹಾಗೂ ಚೀನಾ ಗಡಿಯು ಚಗ್ಲಾಗಾಮ್‌ನಿಂದ 100 ಕಿ.ಮೀ ದೂರದಲ್ಲಿದೆ. ಚೀನಾವು ಇದೀಗ ಚಗ್ಲಾಗಾಮ್‌ನಿಂದ 20 ಕಿ.ಮೀ ದೂರದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಿದೆ. ಚೀನಾ ಇದೀಗ ಭಾರತದ ಗಡಿಯಿಂದ 60-70 ಕಿ.ಮೀ ದೂರದಲ್ಲಿದೆ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಭಾರತದ ಮೇಲೆ ಕಿಡಿ ಕಾರುತ್ತಿದೆ. ಚೀನಾವು ಕೂಡ ಪಾಕಿಸ್ತಾನದ ಎಲ್ಲಾ ಹೇಳಿಕೆಗಳಿಗೂ ತಲೆಯಾಡಿಸುತ್ತಿದೆ.

'ಚೀನಾದಲ್ಲಿನ ಮುಸ್ಲಿಮರ ಸ್ಥಿತಿ ಬಗ್ಗೆ ಇಮ್ರಾನ್ ಏಕೆ ತುಟಿ ಬಿಚ್ಚುವುದಿಲ್ಲ?''ಚೀನಾದಲ್ಲಿನ ಮುಸ್ಲಿಮರ ಸ್ಥಿತಿ ಬಗ್ಗೆ ಇಮ್ರಾನ್ ಏಕೆ ತುಟಿ ಬಿಚ್ಚುವುದಿಲ್ಲ?'

ಆ ಪ್ರದೇಶದಲ್ಲಿ ಯಾರೂ ಒಳಗೆ ಬಂದಿಲ್ಲ, ವಿಭಿನ್ನ ಹಕ್ಕುಗಳ ಪ್ರದೇಶವಾಗಿರುವುದರಿಂದ, ಸೈನ್ಯವು ವಾಡಿಕೆಯಂತೆ ಎರಡೂ ಕಡೆಯಿಂದ ಗಸ್ತು ತಿರುಗುತ್ತದೆ.

ಇದಲ್ಲದೆ, ನಾಗರಿಕ ಬೇಟೆಗಾರರು ಮತ್ತು ಗಿಡಮೂಲಿಕೆ ಸಂಗ್ರಾಹಕರು ಸಹ ಬೇಸಿಗೆಯ ತಿಂಗಳುಗಳಲ್ಲಿ ಇಲ್ಲಿ ಆಗಾಗ್ಗೆ ಹೋಗುತ್ತಾರೆ. ಈ ಪ್ರದೇಶದಲ್ಲಿ ಚೀನಾದ ಸೈನಿಕರು ಅಥವಾ ನಾಗರಿಕರ ಶಾಶ್ವತ ಉಪಸ್ಥಿತಿಯಿಲ್ಲ ಮತ್ತು ನಮ್ಮ ಸೈನ್ಯವು ಕಣ್ಗಾವಲಿರಿಸಿದೆ ಎಂದರು.

English summary
The Indian Army has rejected the BJP MP Tapir that China's forces have infiltrated India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X