ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆ 300 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಸಲು ಕಾರಣವೇನು?

|
Google Oneindia Kannada News

ನವದೆಹಲಿ, ಜುಲೈ.16: ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ಕಣಿವೆ ಸಂಘರ್ಷದಿಂದ ಭಾರತ ಎಚ್ಚೆತ್ತುಕೊಂಡಿದೆ. ಡ್ರ್ಯಾಗನ್ ರಾಷ್ಟ್ರವನ್ನು ಎದುರಿಸಲು ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಪೂರೈಕೆಗೆ ಕೇಂದ್ರ ರಕ್ಷಣಾ ಇಲಾಖೆ ಮುಂದಾಗಿದೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಭಾರತೀಯ ಸೇನೆಗಾಗಿ 300 ಕೋಟಿ ರೂಪಾಯಿ ಮೌಲ್ಯದ ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕೆ ವಿಶೇಷ ಅಧಿಕಾರವನ್ನು ನೀಡಲು ರಕ್ಷಣಾ ಸಚಿವಾಲಯವು ಸಮ್ಮತಿಸಿದೆ. ಮುಂದಿನ ಆರು ತಿಂಗಳಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳಿಗೆ ಆರ್ಡರ್ ನೀಡಿ ಒಂದು ವರ್ಷದೊಳಗೆ ಆಮದು ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ.

ಚೀನಾಗೆ ತಿರುಗೇಟು ನೀಡಲು ಭಾರತದ ಕೈಗೆ ಅಮೆರಿಕಾದ 'ಅಸ್ತ್ರ'!ಚೀನಾಗೆ ತಿರುಗೇಟು ನೀಡಲು ಭಾರತದ ಕೈಗೆ ಅಮೆರಿಕಾದ 'ಅಸ್ತ್ರ'!

ಭಾರತೀಯ ಗಡಿಯಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಪರಿಷತ್ ಸಭೆಯಲ್ಲಿ ಶಸ್ತ್ರಾಸ್ತ್ರಗಳ ಖರೀದಿಗೆ ಅನುಮತಿ ನೀಡಲಾಗಿದೆ.

ಗಡಿಯಲ್ಲಿ ಸೃಷ್ಟಿಯಾಗಿರುವ ಯುದ್ಧದ ಕರಿಛಾಯೆ

ಗಡಿಯಲ್ಲಿ ಸೃಷ್ಟಿಯಾಗಿರುವ ಯುದ್ಧದ ಕರಿಛಾಯೆ

ಭಾರತದ ಉತ್ತರದ ಗಡಿಯುದ್ಧಕ್ಕೂ ಯುದ್ಧೋನ್ಮಾದದ ಕರಿಛಾಯೆ ಮೂಡಿದೆ. ಇಂಥ ಪರಿಸ್ಥಿತಿಯಲ್ಲಿ ಭಾರತೀಯ ಸೇನಾ ಯೋಧರಿಗೆ ಶಕ್ತಿ ತುಂಬುವಂತಾ ಶಸ್ತ್ರಾಸ್ತ್ರಗಳನ್ನು ಒದಗಿಸುವ ಅಗತ್ಯತೆ ಸೃಷ್ಟಿಯಾಗಿದೆ. ಗಡಿಯಲ್ಲಿ ಉದ್ವಿಗ್ನತೆಯನ್ನು ಗಮನದಲ್ಲಿ ಇಟ್ಟುಕೊಂಡು ಶಸ್ತ್ರಾಸ್ತ್ರಗಳ ಖರೀದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಭೆಯಲ್ಲಿ ಸಮ್ಮತಿಸಲಾಯಿತು.

ಸೇನೆ ಬಲಪಡಿಸಲು 3 ಸೇವೆಗಳ ಬಗ್ಗೆ ಹೆಚ್ಚಿನ ಆಸಕ್ತಿ

ಸೇನೆ ಬಲಪಡಿಸಲು 3 ಸೇವೆಗಳ ಬಗ್ಗೆ ಹೆಚ್ಚಿನ ಆಸಕ್ತಿ

ಭಾರತೀಯ ಸೇನೆಯನ್ನು ಬಲಪಡಿಸುವ ಉದ್ದೇಶದಿಂದ ಮೂರು ಸೇವೆಗಳನ್ನು ಹೆಚ್ಚಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯೋಧರಿಗೆ ಅಗತ್ಯವಿರುವ ಸೇನಾ ವೇದಿಕೆ, ಸೇನಾ ಉಪಕರಣ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಅಮೆರಿಕಾದಿಂದ 72,000 ರೈಫಲ್ ಗಳ ಖರೀದಿ

ಅಮೆರಿಕಾದಿಂದ 72,000 ರೈಫಲ್ ಗಳ ಖರೀದಿ

ಸಶಸ್ತ್ರ ಪಡೆಯ ಆರ್ಥಿಕ ನಿಧಿಯ ಅಡಿಯಲ್ಲಿ ಅಮೆರಿಕಾದಿಂದ 72,000 ಎಸ್ಐಜಿ-716 ಅಸಾಲ್ಟ್ ರೈಫಲ್ ಗಳ ಖರೀದಿಗೆ ಆರ್ಡರ್ ಕೊಡಲಾಗಿದೆ. ಮೊದಲ ಹಂತದಲ್ಲಿ 72000 ರೈಫಲ್ ಗಳನ್ನು ಈಗಾಗಲೇ ಆಮದು ಮಾಡಿಕೊಳ್ಳಲಾಗಿದ್ದು, ಎರಡನೇ ಬಾರಿ 72,000 ರೈಫಲ್ ಗಳನ್ನು ನೀಡುವಂತೆ ಕೋರಲಾಗಿದೆ.

ಮಷಿನ್ ಗನ್ ಹಾಗೂ ಎಕೆ-203 ರೈಫಲ್ ಖರೀದಿ

ಮಷಿನ್ ಗನ್ ಹಾಗೂ ಎಕೆ-203 ರೈಫಲ್ ಖರೀದಿ

ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲ್ಪಟ್ಟ ಗಡಿ ರಕ್ಷಣಾ ಸಿಬ್ಬಂದಿಗೆ ಸುಧಾರಿತ ಎಕೆ-203 ರೈಫಲ್ ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಅಮೇಥಿಯಲ್ಲೇ ಭಾರತ ಮತ್ತು ರಷ್ಯಾ ಜಂಟಿಯಾಗಿ ಈ ರೈಫಲ್ ಉತ್ಪಾದಿಸಲಿವೆ. ಉಭಯ ರಾಷ್ಟ್ರಗಳ ನಡುವೆ ಕೆಲವು ಭಿನ್ನಾಭಿಪ್ರಾಯವಿದ್ದು, ಎಲ್ಲ ಸಮಸ್ಯೆ ಇತ್ಯರ್ಥಗೊಂಡ ಬಳಿಕ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಇದರ ನಡುವೆ ಭಾರತದಲ್ಲಿ ಲೈಟ್ ಮಷಿನ್ ಗನ್ ಗಳ ಸಂಗ್ರಹಣೆ ಪ್ರಮಾಣವು ತೀರಾ ಕಡಿಮೆಯಾಗಿತ್ತು. ಈ ಹಿನ್ನೆಲೆ ಇತ್ತೀಚಿಗಷ್ಟೇ 16,000 ಲೈಟ್ ಮಷಿನ್ ಗನ್ ರಫ್ತು ಮಾಡುವಂತೆ ಇಸ್ರೇಲ್ ಗೆ ಭಾರತೀಯ ರಕ್ಷಣಾ ಸಚಿವಾಲಯವು ಕೋರಿದೆ.

English summary
China-India Conflict: Indian Armed Forces Get Special Financial Powers To Buy Equipment Worth Rs 300 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X