• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾ

|

ನವದೆಹಲಿ, ಡಿಸೆಂಬರ್ 2: ಕಳೆದ ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಚೀನಾವು ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಆರಂಭಿಸಿದೆ. ಅಕ್ಕಿ ಪೂರೈಕೆ ನಿಯಮಗಳು ಕಠಿಣವಾದ ಹಿನ್ನೆಲೆಯಲ್ಲಿ ಭಾರತದ ಅಕ್ಕಿಗೆ ಬೇಡಿಕೆ ಬಂದಿದ್ದು, ಭಾರತ ಕೊಂಚ ರಿಯಾಯಿತಿ ದರದಲ್ಲಿ ಅಕ್ಕಿ ಪೂರೈಕೆಯ ಆಫರ್ ನೀಡಿದೆ ಎಂದು ಭಾರತೀಯ ಕೈಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಜಗತ್ತಿನ ಅತಿದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದ್ದು, ಚೀನಾ ಅತಿ ದೊಡ್ಡ ಆಮದುದಾರ ದೇಶವಾಗಿದೆ. ಚೀನಾ ವಾರ್ಷಿಕ ಸುಮಾರು 4 ಮಿಲಿಯನ್ ಟನ್‌ನಷ್ಟು ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಭಾರತದಿಂದ ಅದು ಖರೀದಿ ಮಾಡುತ್ತಿರಲಿಲ್ಲ. ಭಾರತದ ಅಕ್ಕಿ ಗುಣಮಟ್ಟ ಚೆನ್ನಾಗಿಲ್ಲ ಎಂದು ಚೀನಾ ಕಾರಣ ನೀಡುತ್ತಿತ್ತು.

ಪಾಕ್ ಸೇನಾ ಮುಖ್ಯಸ್ಥರನ್ನು ಭೇಟಿ ಮಾಡಿದ ಚೀನಾ ರಕ್ಷಣಾ ಸಚಿವ

'ಇದೇ ಮೊದಲ ಬಾರಿಗೆ ಭಾರತದಿಂದ ಚೀನಾ ಅಕ್ಕಿ ಖರೀದಿಸಿದೆ. ಭಾರತದ ಅಕ್ಕಿ ಉತ್ಪನ್ನದ ಗುಣಮಟ್ಟ ಕಂಡ ಬಳಿಕ ಮುಂದಿನ ವರ್ಷದಿಂದ ಅದು ಖರೀದಿಯನ್ನು ಹೆಚ್ಚಿಸಬಹುದು' ಎಂದು ಅಕ್ಕಿ ರಫ್ತುದಾರರ ಸಂಸ್ಥೆಯ ಅಧ್ಯಕ್ಷ ಬಿ.ವಿ. ಕೃಷ್ಣ ರಾವ್ ತಿಳಿಸಿದರು.

ಭಾರತದ ವ್ಯಾಪಾರಿಗಳು ಡಿಸೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಪ್ರತಿ ಟನ್‌ಗೆ 300 ಡಾಲರ್ ವೆಚ್ಚದಲ್ಲಿ 1,00,000 ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಸಾಂಪ್ರದಾಯಿಕ ಅಕ್ಕಿ ರಫ್ತುದಾರರಾದ ಥೈಲ್ಯಾಂಡ್, ವಿಯೆಟ್ನಾಂ, ಮಯನ್ಮಾರ್ ಮತ್ತು ಪಾಕಿಸ್ತಾನಗಳು ತಮ್ಮ ಅಧಿಕ ರಫ್ತಿನ ಪ್ರಮಾಣವನ್ನು ತಗ್ಗಿಸಿವೆ. ಅಲ್ಲದೆ ಭಾರತದ ದರಕ್ಕೆ ಹೋಲಿಸಿದರೆ ಪ್ರತಿ ಟನ್‌ಗೆ ಕನಿಷ್ಠ 30 ಡಾಲರ್‌ನಷ್ಟು ಅಧಿಕ ದರ ವಿಧಿಸುತ್ತಿವೆ. ಹೀಗಾಗಿ ಚೀನಾ, ಭಾರತದತ್ತ ಅಕ್ಕಿ ಖರೀದಿಗೆ ಹೊರಳಿಸಿದೆ.

ಚೀನಾದಿಂದ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ: ಭಾರತಕ್ಕೆ ಆತಂಕ

ಹಿಮಾಲಯದ ಶ್ರೇಣಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಗಡಿ ವಿವಾದ ಮುಂದುವರಿದಿದೆ. ಇತ್ತ ಭಾರತವು ಚೀನಾ ವಿರುದ್ಧ ತಾಂತ್ರಿಕ ಸಮರಗಳನ್ನು ನಡೆಸುತ್ತಿದೆ. ಇದರ ಮಧ್ಯೆ ವ್ಯಾಪಾರ ವಹಿವಾಟಿನ ಹೊಸ ಪ್ರಯತ್ನ ನಡೆದಿದೆ.

English summary
China has started imporing rice from India for the first time in three decades with discounted prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X