ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಅಣೆಕಟ್ಟಿನಿಂದ ಭಾರತದಲ್ಲಿ ಪ್ರವಾಹ ಭೀತಿ?

By Mahesh
|
Google Oneindia Kannada News

ಬೀಜಿಂಗ್, ನ.24: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಚೀನಾ ದೇಶ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಿದೆ. ಈ ಮೂಲಕ ಭಾರತಕ್ಕೆ ಮತ್ತೊಮ್ಮೆ ತಲೆನೋವು ತಂದಿದೆ. ಈ ಅಣೆಕಟ್ಟಿನ ನಿರ್ಮಾಣದಿಂದ ಭಾರತ, ಬಾಂಗ್ಲಾದೇಶದ ಗಡಿಭಾಗದಲ್ಲಿ ಪ್ರವಾಹ, ಭೂಕುಸಿತದ ಭೀತಿ ಎದುರಾಗಿದೆ.

ಟಿಬೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಜಲವಿದ್ಯುತ್ ಅಣೆಕಟ್ಟು ಪೂರ್ಣಗೊಂಡಿದ್ದು, ಅಣೆಕಟ್ಟಿಗೆ 'ಯಾರ್ಲಾಂಗ್ ಜಂಗ್ಬೋ' (Yarlung Zangbo)
ಎಂದು ಹೆಸರಿಡಲಾಗಿದೆ. ಸಣ್ಣ ಮಟ್ಟದ ಅಣೆಕಟ್ಟು ನಿರ್ಮಾಣ ಮಾಡುತ್ತಿರುವ ಬಗ್ಗೆ ಚೀನಾ ಈ ಮುಂಚೆ ಭಾರತಕ್ಕೆ ತಿಳಿಸಿತ್ತು. ಅದರೆ, ಚೀನಾ ನಿರ್ಮಿಸಿರುವ ಈ ಅಣೆಕಟ್ಟಿನಿಂದಾಗಿ ಭಾರತ ಮತ್ತು ಬಾಂಗ್ಲಾದೇಶಗಳು ಆತಂಕಕ್ಕೀಡಾಗಿವೆ. ಅನೇಕ ಪ್ರಾಣ ಹಾನಿಗೆ ಕಾರಣವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

China completes works of huge hydropower dam on Brahmaputra which might cause flash floods in India

ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಅಣೆಕಟ್ಟು ನಿರ್ಮಿಸಬೇಡಿ ಎಂದು ಭಾರತ ಮನವಿ ಮಾಡಿದ್ದರೂ ಲೆಕ್ಕಿಸದೆ ಚೀನಾ, ಅಣೆಕಟ್ಟು ನಿರ್ಮಾಣವನ್ನು ಪೂರ್ಣಗೊಳಿಸಿದೆ. ಅಣೆಕಟ್ಟುಗಳ ನಿರ್ಮಾಣದಿಂದ ಭಾರತಕ್ಕೆ ನೀರಿನ ಹರಿವು ಕಡಿಮೆ ಆಗಲಿದೆ. ಭಾನುವಾರದಿಂದಲೇ ಜಲವಿದ್ಯುತ್ ಕೇಂದ್ರ ಚಾಲನೆ ಪಡೆದುಕೊಂಡಿದೆ ಎಂದು ಚೀನಾ ಹೇಳಿದೆ.

ಬ್ರಹ್ಮಪುತ್ರ ನದಿಯಲ್ಲಿ ಅಣೆಕಟ್ಟು ಕಟ್ಟುತ್ತಿರುವ ಚೀನಾದ ಕ್ರಮಕ್ಕೆ ಭಾರತದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಬ್ರಹ್ಮ ಪುತ್ರ ನದಿಯ ಹರಿವನ್ನು ತಿರುವುಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಭಾರತ ಈ ಹಿಂದೆ ಆಕ್ಷೇಪಿಸಿತ್ತು. ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳಿಗೆ ಮಾರಕವಾಗಬಲ್ಲ ಈ ಯೋಜನೆ ಬಗ್ಗೆ ಪರಿಸರವಾದಿಗಳು ಕೂಗೆತ್ತಿದ್ದರು.

ಅದರೆ, ಚೀನಾ ತನ್ನ ಈ ಯೋಜನೆಯಿಂದ ನದಿ ಹರಿವಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ ಎಂದು ಪ್ರತಿಪಾದಿಸಿತ್ತು. ಸುಮಾರು 2,000ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವ ಚೀನಾ ಜಂಗ್ಬೋ ಯೋಜನೆ ನಂತರ ಇದೇ ಮಾದರಿ ಐದು ಯೋಜನೆಗಳನ್ನು ರೂಪಿಸಿಕೊಂಡಿದೆ. ಯಾವುದೇ ಕೈಗಾರಿಕೆಗಳಿಲ್ಲದ ಟಿಬೇಟ್ ಪ್ರಾಂತ್ಯಕ್ಕೆ ಎಷ್ಟು ಪ್ರಮಾಣದ ವಿದ್ಯುತ್ ಏಕೆ ಬೇಕು ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ. ಸುಮಾರು 1.5 ಬಿಲಿಯನ್ ಡಾಲರ್ ಮೌಲ್ಯದ ಜಲವಿದ್ಯುತ್ ಕೇಂದ್ರ ಚಾಲನೆಗೊಂಡಿದ್ದು ಸಮುದ್ರಮಟ್ಟದಿಂದ 3,300ಮೀಟರ್ ಎತ್ತರದಲ್ಲಿ ಪ್ರಪಂಚದ ಮೇಲ್ಛಾವಣಿ ಎನಿಸಿಕೊಂಡಿರುವ ಟಿಬೇಟ್ ನಲ್ಲಿದೆ.

English summary
India has a new reason to worry. China has built a new hydropower dam on the Brahmaputra which might cause flash floods and landslides in the downstream area which lies in India and Bangladesh, said a TOI report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X