• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಲಸಿಕೆಗಳ ಮೇಲೆ ಸೈಬರ್ ದಾಳಿಗೆ ಚೀನಾ ಸಂಚು ಬಹಿರಂಗ

|

ನವದೆಹಲಿ, ಮಾರ್ಚ್ 1: ಭಾರತದಲ್ಲಿನ ವಿದ್ಯುತ್ ಸಂಪರ್ಕ ಜಾಲವನ್ನು ಹಾಳುಗೆಡವಲು ಚೀನಾ ಕುತಂತ್ರ ನಡೆಸಿದ ಸಂಗತಿ ಬಹಿರಂಗವಾದ ಬೆನ್ನಲ್ಲೇ, ಭಾರತದ ಲಸಿಕೆಗಳನ್ನೂ ಧ್ವಂಸಪಡಿಸಲು ಚೀನಾ ಸೈಬರ್ ಯುದ್ಧಕ್ಕೆ ಮುಂದಾಗಿರುವುದು ಗೊತ್ತಾಗಿದೆ.

ದೇಶಾದ್ಯಂತ ಬಳಕೆಯಾಗುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕೋವಿಡ್ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಹಾಗೂ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಐಟಿ ವ್ಯವಸ್ಥೆಯನ್ನು ಗುರಿಯಾಗಿರಿಸಿ ಚೀನಾ ಸರ್ಕಾರದ ಬೆಂಬಲಿತ ಗುಂಪುಗಳು ಇತ್ತೀಚೆಗೆ ಸೈಬರ್ ದಾಳಿಯ ಪ್ರಯತ್ನ ನಡೆಸಿದ್ದವು ಎಂದು ಸೈಬರ್ ಗುಪ್ತಚರ ಸಂಸ್ಥೆ ಸಿಫರ್ಮಾ ತಿಳಿಸಿದೆ.

ಭಾರತದ ಮೇಲೆ ಚೀನಾ 'ವಿದ್ಯುತ್ ಯುದ್ಧ'!: ಆಘಾತಕಾರಿ ಸಂಗತಿ ಬಹಿರಂಗ

ಕೋವಿಡ್ ಲಸಿಕೆಗಳನ್ನು ಪೂರೈಕೆ ಮಾಡುವ ದೇಶಗಳ ಪೈಕಿ ಭಾರತ ಮತ್ತು ಚೀನಾ ನಡುವೆ ತೀವ್ರ ಪೈಪೋಟಿ ಇದೆ. ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಎಲ್ಲ ಲಸಿಕೆಗಳ ಪೈಕಿ ಭಾರತ ಶೇ 60ಕ್ಕಿಂತಲೂ ಅಧಿಕ ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ.

ಚೀನಾದ ಹ್ಯಾಕಿಂಗ್ ಗುಂಪು ಎಪಿಟಿ 10 ಅಥವಾ ಸ್ಟೋನ್ ಪಾಂಡಾ, ಭಾರತ್ ಬಯೋಟೆಕ್ ಮತ್ತು ಸೆರಮ್ ಸಂಸ್ಥೆಯ ಐಟಿ ಮೂಲಸೌಕರ್ಯ ಹಾಗೂ ಪೂರೈಕೆ ವ್ಯವಸ್ಥೆ ಸಾಫ್ಟ್‌ವೇರ್‌ನಲ್ಲಿನ ಅಂತರಗಳು ಹಾಗೂ ಲೋಪದೋಷಗಳನ್ನು ಪತ್ತೆಹಚ್ಚಿತ್ತು ಎಂದು ಸಿಂಗಪುರ ಮತ್ತು ಟೋಕಿಯೋ ಮೂಲದ ಸಿಫರ್ಮಾ ಮಾಹಿತಿ ನೀಡಿದೆ.

ಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆ

ಭಾರತದ ಔಷಧ ಕಂಪೆನಿಗಳ ಬೌದ್ಧಿಕ ಸಂಪತನ್ನು ಕಸಿಯುವುದು ಮತ್ತು ಸ್ಪರ್ಧೆಯಲ್ಲಿ ಮುಂಚೂಣಿಗೆ ಬರುವುದು ಈ ಕೃತ್ಯದ ಹಿಂದಿನ ನಿಜವಾದ ಉದ್ದೇಶ, ಎಪಿಟಿ10 ಗುಂಪು ನಿರಂತರವಾಗಿ ಸೆರಮ್ ಸಂಸ್ಥೆಯನ್ನು ಗುರಿಯನ್ನಾಗಿರಿಸುತ್ತಿದೆ. ಸೆರಮ್ ಸಂಸ್ಥೆಯ ಪಬ್ಲಿಕ್ ಸರ್ವರ್‌ಗಳು ದುರ್ಬಲವಾಗಿವೆ ಎಂಬುದನ್ನು ಈ ಗುಂಪು ಕಂಡುಕೊಂಡಿತ್ತು. ಅವರು ದುರ್ಬಲ ಅಪ್ಲಿಕೇಷನ್ ಬಗ್ಗೆಯೂ ಚರ್ಚಿಸಿದ್ದರು. ಕಂಟೆಂಟ್ ನಿರ್ವಹಣಾ ವ್ಯವಸ್ಥೆ ಕುರಿತು ಸಹ ಚರ್ಚಿಸುತ್ತಿದ್ದಾರೆ. ಇದು ಎಚ್ಚರಿಕೆಯ ಗಂಟೆ ಎಂದು ಸಿಫರ್ಮಾ ತಿಳಿಸಿದೆ.

English summary
A report revealed that China backed hacking group has targetted IT systems of two Indian vaccine makers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X