ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಯಲ್ಲಿನ ನೇಪಾಳಿ ಗೂರ್ಖಾ ರೆಜಿಮೆಂಟ್ ಮೇಲೆ ಚೀನಾ ಕಣ್ಣು

|
Google Oneindia Kannada News

ನವದೆಹಲಿ, ಆಗಸ್ಟ್ 17: ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ನಲ್ಲಿ ನೇಪಾಳಿಗರನ್ನು ನೇಮಕಾತಿ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ನೇಪಾಳದ ಎನ್‌ಜಿಒ ಒಂದಕ್ಕೆ ಚೀನಾ 12.7 ಲಕ್ಷ ನೇಪಾಳಿ ರೂಪಾಯಿ ಮೊತ್ತದ ಅನುದಾನದವನ್ನು ನೀಡಿದೆ.

ಕಠ್ಮಂಡು ಮೂಲದ ಸರ್ಕಾರೇತರ ಸಂಸ್ಥೆಯೊಂದಕ್ಕೆ ಚೀನಾ ಆರ್ಥಿಕ ನೆರವನ್ನು ನೀಡಿದ್ದು, ಭಾರತೀಯ ಸೇನೆ ಸೇರಲು ಗೋರ್ಖಾ ಸಮುದಾಯದ ಹಿಂದಿನ ಪ್ರೇರಣೆಗಳನ್ನು ತಿಳಿಯಲು ಅಧ್ಯಯನ ನಡೆಸುವಂತೆ ಸೂಚಿಸಿದೆ.

ಗೌತಮ ಬುದ್ಧ ಜನಿಸಿದ್ದು ನೇಪಾಳದಲ್ಲೇ ಈ ಬಗ್ಗೆ ಸಂಶಯ ಬೇಡಗೌತಮ ಬುದ್ಧ ಜನಿಸಿದ್ದು ನೇಪಾಳದಲ್ಲೇ ಈ ಬಗ್ಗೆ ಸಂಶಯ ಬೇಡ

ನೇಪಾಳದಲ್ಲಿರುವ ಚೀನಾದ ರಾಯಭಾರಿ ಹೌ ಯಾಂಕಿ, ನೇಪಾಳದ ಎನ್‌ಜಿಒಗೆ ಜೂನ್ ತಿಂಗಳ ಮೊದಲ ವಾರದಲ್ಲಿ ಈ ಅನುದಾನ ನೀಡಿದ್ದು, ಗೋರ್ಖಾ ಸಮುದಾಯದ ಜನರು ಭಾರತೀಯ ಸೇನೆಯನ್ನು ಸೇರುವ ಹಿಂದಿರುವ ಉದ್ದೇಶ ಮತ್ತು ಕಾರಣಗಳನ್ನು ತಿಳಿಯಲು ಅಧ್ಯಯನ ನಡೆಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

China Funds To A NGO To Study On Nepalise Gorkha Regiment Of The Indian Army

ಭಾರತೀಯ ಸೇನೆಯಲ್ಲಿ ಒಟ್ಟು ಏಳು ಗೂರ್ಖಾ ರೆಜಿಮೆಂಟ್‌ಗಳಿದ್ದು, ಅವುಗಳಲ್ಲಿ ಸುಮಾರು 28,000 ನೇಪಾಳಿ ಪ್ರಜೆಗಳಿದ್ದಾರೆ. ಈ ರೆಜಿಮೆಂಟ್‌ಗಳಲ್ಲಿ ಒಟ್ಟು 39 ಬೆಟಾಲಿಯನ್‌ಗಳಿವೆ. ಒಟ್ಟು 11 ಗೂರ್ಖಾ ರೆಜಿಮೆಂಟ್‌ಗಳಿದ್ದು, ಅವುಗಲ್ಲಿ ಸ್ವಾತಂತ್ರ್ಯದ ಬಳಿಕ ನಾಲ್ಕು ರೆಜಿಮೆಂಟ್‌ಗಳು ಬ್ರಿಟಿಷ್ ಸೇನೆಯ ಪಾಲಾಗಿದ್ದವು.

ಚೀನಾಗೆ ಸಂದೇಶ: ಪ್ಯಾಂಗಾಂಗ್ ಸರೋವರದ ಬಳಿ ಹಾರಾಡಿದ ತ್ರಿವರ್ಣ ಧ್ವಜಚೀನಾಗೆ ಸಂದೇಶ: ಪ್ಯಾಂಗಾಂಗ್ ಸರೋವರದ ಬಳಿ ಹಾರಾಡಿದ ತ್ರಿವರ್ಣ ಧ್ವಜ

ಭಾರತವು 1ನೇ, ಮೂರನೇ, ನಾಲ್ಕು, ಐದು, ಎಂಟು, ಒಂಬತ್ತು ಮತ್ತು ಹನ್ನೊಂದನೇ ರೆಜಿಮೆಂಟ್‌ಗಳನ್ನು ಹೊಂದಿದ್ದರೆ, ಬ್ರಿಟಿಷ್ ಆರ್ಮಿಯಲ್ಲಿ ಎರಡು, ಆರು, ಏಳು ಮತ್ತು ಹತ್ತನೇ ರೆಜಿಮೆಂಟ್‌ಗಳಿವೆ.

English summary
China has funded a NGO in Nepal to study the motivation behind the Nealise community to join Gorkha regiment of the Indian army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X