ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಂಗಾಂಗ್ ಸರೋವರದ ಬಳಿ ಪ್ರಚೋದನಕಾರಿ ಕ್ರಮ ಮುಂದುವರೆಸಿದ ಚೀನಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಚೀನಾವು ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಬಳಿ ಸೋಮವಾರವೂ ಪ್ರಚೋದನಕಾರಿ ಕ್ರಮ ಮುಂದುವರೆಸಿತ್ತು ಎಂದು ಭಾರತ ಆರೋಪ ಮಾಡಿದೆ.

ಪಾಂಗಾಂಗ್ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನದಲ್ಲಿ ಚೀನಾ ಸೇನೆ ಈ ಹಿಂದೆ ನೀಡಿದ್ದ ಮಾತನ್ನು ಮುರಿದಿದೆ.

ಆಗಸ್ಟ್ 29 ರ ತಡರಾತ್ರಿ ಮತ್ತು ಆಗಸ್ಟ್ 30 ರಂದು ಪ್ರಚೋದನಕಾರಿ ಮಿಲಿಟರಿ ತಂತ್ರಗಳಲ್ಲಿ ತೊಡಗಿದ್ದರು ಎಂದು ಅನುರಾಗ್ ಶ್ರೀವಾಸ್ತವ ಹೇಳಿದರು.

Army

ಪೂರ್ವ ಲಡಾಕ್‌ನ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಪ್ರಯತ್ನಿಸುತ್ತಿದೆ. ಚೀನಾ ಮತ್ತು ಭಾರತ ಎರಡು ಮಿಲಿಟರಿ ಮಾತುಕತೆ ನಡೆಸುತ್ತಿದ್ದರೂ ಚೀನಾ ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ರಾತ್ರೋರಾತ್ರಿ ಚೀನಾ ಸೇನಾಪಡೆ ಭಾರತೀಯ ಗಡಿ ಪ್ರವೇಶಿಸಿದ್ದು ಹೇಗೆ?ರಾತ್ರೋರಾತ್ರಿ ಚೀನಾ ಸೇನಾಪಡೆ ಭಾರತೀಯ ಗಡಿ ಪ್ರವೇಶಿಸಿದ್ದು ಹೇಗೆ?

ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಎರಡೂ ಕಡೆಯ ಕಮಾಂಡರ್ಗಳು ಚರ್ಚೆಯಲ್ಲಿದ್ದಾಗಲೂ, ಚೀನಾದ ಪಡೆಗಳು ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದ್ದವು ಎಂದು ಅನುರಾಗ್ ತಿಳಿಸಿದ್ದಾರೆ.

ಸಮಯೋಚಿತ ರಕ್ಷಣಾತ್ಮಕ ಕ್ರಮದಿಂದ ಯಥಾಸ್ಥಿತಿಯನ್ನು ಬದಲಿಸುವ ಚೀನಾದ ಏಕಪಕ್ಷೀಯ ಪ್ರಯತ್ನಗಳನ್ನು ಭಾರತ ತಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಇದೇ ವೇಳೆ ಇಂತಹ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳದಂತೆ ಚೀನಾವನ್ನು ಕೇಳಿಕೊಂಡಿದ್ದೇವೆ ಎಂದರು.

English summary
India on Tuesday said China again engaged in provocative action even as their military talks were underway two days after the PLA made a bid to change the status quo in the South Bank area of Pangong lake in eastern Ladakh, calling the attempts a reflection of "complete disregard" to bilateral understandings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X