ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದೆ ಚೀನಾ!

|
Google Oneindia Kannada News

ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು ಅಂತ ಭಾರತದಲ್ಲಷ್ಟೇ ಕುತೂಹಲವಿಲ್ಲ. ಚೀನಾ ಕೂಡ ಫಲಿತಾಂಶದ ಬಗ್ಗೆ ಕುತೂಹಲದ ಕಣ್ಣು ನೆಟ್ಟು ಕೂತಿದೆ. ಗುಜರಾತ್ ನಲ್ಲಿನ ಬೆಳವಣಿಗೆಗಳನ್ನು ತುಂಬ ಆಸಕ್ತಿಯಿಂದ ನೋಡುತ್ತಿರುವ ಚೀನಾಗೆ ಚುನಾವಣೆ ಫಲಿತಾಂಶ ಅದರ ಹಿತಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದೆ.

ಚುನಾವಣೋತ್ತರ ಸಮೀಕ್ಷೆ: ಒಂದಷ್ಟು ಟೀಕೆ, ಮತ್ತಷ್ಟು ಹಾಸ್ಯ!ಚುನಾವಣೋತ್ತರ ಸಮೀಕ್ಷೆ: ಒಂದಷ್ಟು ಟೀಕೆ, ಮತ್ತಷ್ಟು ಹಾಸ್ಯ!

ಗುಜರಾತ್ ನಲ್ಲಿ ಬಿಜೆಪಿ ದೊಡ್ಡ ಮಟ್ಟದ ಜಯ ದಾಖಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಡ ಕ್ರಾಂತಿಕಾರಿ ಆರ್ಥಿಕ ಸುಧಾರಣೆಗಳಿಗೆ ಜನ ಬೆಂಬಲ ದೊರೆತಿದೆ ಎಂದು ಸುಳಿವು ಸಿಕ್ಕಂತಾಗುತ್ತದೆ. ಒಂದು ವೇಳೆ ಬಿಜೆಪಿ ಸೋತರೆ ಅಥವಾ ಸರಳ ಬಹುಮತವಷ್ಟೇ ಪಡೆದರೆ ಸುಧಾರಣಾ ಕ್ರಮಗಳ ಬಗ್ಗೆ ಜನರಿಗೆ ಸಮಾಧಾನ ಇಲ್ಲ ಎಂಬ ಸಂದೇಶ ಸಿಗುತ್ತದೆ. ಸರಕಾರಕ್ಕೂ ಒಂದು ಎಚ್ಚರಿಕೆಯಾಗುತ್ತದೆ.

ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!

ಭಾರತದ ಆರ್ಥಿಕ ಸುಧಾರಣೆ ಬಗ್ಗೆ ಚೀನಿಯರಿಗೇಕೆ ಅಷ್ಟು ಆಸಕ್ತಿ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಭಾರತದಲ್ಲಿ ಚೀನಿ ಕಂಪೆನಿಗಳ ಬಂಡವಾಳ ಹೂಡುಕೆ ಪ್ರಮಾಣ ಹೆಚ್ಚಾಗುತ್ತಲೇ ಇದೆ. "ನರೇಂದ್ರ ಮೋದಿ ಅವರ ಆರ್ಥಿಕ ಸುಧಾರಣೆಗಳ ಬಗ್ಗೆ ವಿಪಕ್ಷಗಳ ನಾಯಕರು ಹಾಗೂ ಆರ್ಥಿಕ ತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಮೌಲ್ಯಮಾಪನ ಮಾಡುವುದಕ್ಕೆ ಸೂಕ್ತ ಕಾಲ" ಎಂದು ಚೀನಾದ ಸರಕಾರಿ ಮಾಧ್ಯಮ ಅಭಿಪ್ರಾಯ ಪಟ್ಟಿದೆ.

2016ರಲ್ಲಿ ಚೀನಿ ಕಂಪೆನಿಗಳ ಭಾರೀ ಹೂಡಿಕೆ

2016ರಲ್ಲಿ ಚೀನಿ ಕಂಪೆನಿಗಳ ಭಾರೀ ಹೂಡಿಕೆ

ಕಳೆದ ಕೆಲವು ವರ್ಷಗಳಲ್ಲಿ ಚೀನಾದಿಂದ ಭಾರತದಲ್ಲಾದ ಬಂಡವಾಳ ಹೂಡಿಕೆಯದು ಒಂದು ಲೆಕ್ಕಾಚಾರವಾದರೆ, 2016ರಲ್ಲಿ ಅದೆಷ್ಟೋ ಹೆಚ್ಚು ಪಟ್ಟು ಹೂಡಿಕೆ ಮಾಡಲಾಗಿದೆ. ಚೀನಾದ ಶಿಯೋಮಿ, ಒಪ್ಪೊದಂಥ ಹಲವು ಕಂಪೆನಿಗಳು ಭಾರತದಲ್ಲಿ ಒಳ್ಳೆ ವ್ಯವಹಾರ ನಡೆಸುತ್ತಿವೆ. ಒಂದು ವೇಳೆ ಗುಜರಾತ್ ನಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದರೆ ಮತ್ತಷ್ಟು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಬಹುದು" ಎಂದು ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಸೋತರೆ ಆರ್ಥಿಕ ಸುಧಾರಣೆಗೆ ತಡೆ

ಸೋತರೆ ಆರ್ಥಿಕ ಸುಧಾರಣೆಗೆ ತಡೆ

ಒಂದು ವೇಳೆ ಬಿಜೆಪಿ ಸೋತ ಪಕ್ಷದಲ್ಲಿ ಆರ್ಥಿಕ ಸುಧಾರಣೆಗೆ ಮೋದಿ ನಡೆಸುತ್ತಿರುವ ಪ್ರಯತ್ನದ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರುತ್ತದೆ. ಇನ್ನು ಭಾರತದ ಇತರ ರಾಜ್ಯಗಳ ಮೇಲೂ ಫಲಿತಾಂಶದ ಪ್ರಭಾವ ಆಗಿ, ಪ್ರಧಾನಿ ಮೋದಿಯ ಆರ್ಥಿಕ ಸುಧಾರಣಾ ಕ್ರಮಗಳಿಗೆ ತಡೆಯೊಡ್ಡಿದಂತಾಗುತ್ತದೆ ಎಂದು ಹೇಳಲಾಗಿದೆ.

ಜನರ ವಿಶ್ವಾಸ ಗಳಿಸಲು ಯತ್ನಿಸಬೇಕು

ಜನರ ವಿಶ್ವಾಸ ಗಳಿಸಲು ಯತ್ನಿಸಬೇಕು

ಜನರಿಗೆ ಈಗಲೂ ಅನುಮಾನವಿದೆ. ಈ ಆರ್ಥಿಕ ಸುಧಾರಣೆಗಳಿಂದ ದೇಶದ ಸಣ್ಣ ವ್ಯವಹಾರಸ್ಥರು, ಜನ ಸಾಮಾನ್ಯರ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮ ಬೀರಿಲ್ಲ ಎಂಬ ಅಭಿಪ್ರಾಯ ಇದೆ. ಆದ್ದರಿಂದ ಆರ್ಥಿಕ ಸುಧಾರಣೆಗಳಿಗೆ ಜನರ ಬೆಂಬಲ ಪಡೆಯಲು ಸರಕಾರ ಪ್ರಯತ್ನಗಳನ್ನು ಮಾಡಬೇಕು ಎಂದು ಚೀನಿ ಮಾಧ್ಯಮ ಬರೆದಿದೆ.

ಮುಂದಿನ ವಾರ ಬದಲಾವಣೆ ಕಾದಿದೆ

ಮುಂದಿನ ವಾರ ಬದಲಾವಣೆ ಕಾದಿದೆ

ಭಾರತದಲ್ಲಿ ವ್ಯವಹಾರ ನಡೆಸುತ್ತಿರುವ ಚೀನಿ ಕಂಪೆನಿಗಳು ಆರ್ಥಿಕ ನೀತಿಗಳಲ್ಲಿ ಬದಲಾವಣೆ ಮಾಡಿದರೆ ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಮುಂದಿನ ವಾರ ಗುಜರಾತ್ ಫಲಿತಾಂಶದ ನಂತರ ಹಣಕಾಸು ಮಾರುಕಟ್ಟೆಯಲ್ಲಿ ಆಗಬಹುದಾದ ಬದಲಾವಣೆಗೆ ತಯಾರಿರುವಂತೆ ಸಹ ಬರೆದಿದೆ.

English summary
How the people react to PM Narendra Modi led BJP government economic measures? Gujarat assembly elections 2017 result will be indicator. This is what believe by China. Here is analysis of China expectation from Gujarat election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X