ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಿಯದೆ ತಪ್ಪೊಪ್ಪಿಕೊಂಡ ಭಾರತ: ವಿಕೆ ಸಿಂಗ್ ಹೇಳಿಕೆಗೆ ಚೀನಾ ಎದಿರೇಟು

|
Google Oneindia Kannada News

ನವದೆಹಲಿ, ಫೆಬ್ರವರಿ 8: ಭಾರತದ ಎಲ್‌ಎಸಿ ಅತಿಕ್ರಮಣದ ಕುರಿತಾದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರ ಹೇಳಿಕೆಯು 'ಅರಿಯದೆ ಮಾಡಿದ ತಪ್ಪೊಪ್ಪಿಗೆ' ಎಂದು ಚೀನಾ ಹೇಳಿದೆ.

'ಚೀನಾವು ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಹತ್ತು ಬಾರಿ ಉಲ್ಲಂಘನೆ ಮಾಡಿ ದಾಟಿದ್ದರೆ, ಭಾರತವು ಕನಿಷ್ಠ 50 ಬಾರಿಯಾದರೂ ಹಾಗೆ ಮಾಡಿರುತ್ತದೆ' ಎಂದು ಮದುರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಮಾಜಿ ಸೇನಾ ಮುಖ್ಯಸ್ಥರೂ ಆಗಿರುವ ವಿಕೆ ಸಿಂಗ್ ಹೇಳಿಕೆ ನೀಡಿದ್ದರು.

ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆ: ಅಮೆರಿಕ ಆರೋಪ ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆ: ಅಮೆರಿಕ ಆರೋಪ

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಭಾರತದ ಅತಿಕ್ರಮಣಗಳೇ ಚೀನಾ-ಭಾರತ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಗೆ ಮೂಲ ಕಾರಣ ಎಂದು ಆರೋಪಿಸಿದ್ದಾರೆ.

China Calls VK Singhs Statement India Crossed LAC 50 Times As Unwitting Confession

'ಇದು ಭಾರತದ ಕಡೆಯಿಂದ ಅರಿವಿಲ್ಲದೆ ಮಾಡಿರುವ ತಪ್ಪೊಪ್ಪಿಗೆ. ಬಹಳ ಕಾಲದಿಂದ ಭಾರತವು ಚೀನಾದ ಭಾಗಗಳನ್ನು ಅತಿಕ್ರಮಿಸುವ ಪ್ರಯತ್ನವಾಗಿ ಗಡಿಯನ್ನು ದಾಟಿ ಬರುವ ಕೃತ್ಯಗಳನ್ನು ಮಾಡಿದೆ. ಈ ಮೂಲಕ ನಿರಂತರವಾಗಿ ವಿವಾದ ಹಾಗೂ ಘರ್ಷಣೆಗಳನ್ನು ಸೃಷ್ಟಿಸುತ್ತಲೇ ಇದೆ. ಇ ಒಪ್ಪಂದ ಆಘಾತದ ಬಳಿಕ ಭಾರತದ ಸಾಲ ವಾಪಸ್ ಕೊಟ್ಟ ಶ್ರೀಲಂಕಾ: ಚೀನಾ ಕೈವಾಡ ಶಂಕೆದು ಚೀನಾ-ಭಾರತ ಗಡಿ ವಿವಾದಕ್ಕೆ ಮೂಲ ಕಾರಣ' ಎಂದು ವಾಂಗ್ ಹೇಳಿದ್ದಾರೆ.

ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿ ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿ

'ಚೀನಾದೊಂದಿಗೆ ಮಾಡಿಕೊಂಡಿರುವ ಒಮ್ಮತ, ಒಪ್ಪಂದಗಳು ಹಾಗೂ ಕರಾರುಗಳನ್ನು ಭಾರತ ಅನುಸರಿಸಬೇಕು ಮತ್ತು ಪ್ರಬಲ ಕ್ರಿಯೆಯ ಮೂಲಕ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಎತ್ತಿಹಿಡಿಯಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಒಪ್ಪಂದ ಆಘಾತದ ಬಳಿಕ ಭಾರತದ ಸಾಲ ವಾಪಸ್ ಕೊಟ್ಟ ಶ್ರೀಲಂಕಾ: ಚೀನಾ ಕೈವಾಡ ಶಂಕೆಒಪ್ಪಂದ ಆಘಾತದ ಬಳಿಕ ಭಾರತದ ಸಾಲ ವಾಪಸ್ ಕೊಟ್ಟ ಶ್ರೀಲಂಕಾ: ಚೀನಾ ಕೈವಾಡ ಶಂಕೆ

'ಚೀನಾ ಎಲ್‌ಎಸಿ ಕುರಿತಾದ ತನ್ನದೇ ಗ್ರಹಿಕೆಯೊಂದಿಗೆ ಅನೇಕ ಬಾರಿ ಅತಿಕ್ರಮಣ ಮಾಡಿದೆ. ಅದೇ ರೀತಿ ನಮ್ಮ ಗ್ರಹಿಕೆಗೆ ಅನುಗುಣವಾಗಿ ನಾವು ಕೂಡ ಅನೇಕ ಬಾರಿ ಮಾಡಿದ್ದೇವೆಯೋ ನಿಮಗೆ ತಿಳಿದಿಲ್ಲ. ಚೀನಾದ ಮಾಧ್ಯಮಗಳು ಇದನ್ನು ವರದಿ ಮಾಡುವುದಿಲ್ಲ. ನಿಮಗೆ ಭರವಸೆ ನೀಡುತ್ತೇನೆ, ಚೀನಾ ಹತ್ತು ಬಾರಿ ಗಡಿ ದಾಟಿ ಬಂದಿದ್ದರೆ, ನಾವು ಕನಿಷ್ಠ 50 ಬಾರಿ ಅದನ್ನು ಮಾಡಿರುತ್ತೇವೆ' ಎಂದು ವಿಕೆ ಸಿಂಗ್ ತಿಳಿಸಿದ್ದರು.

English summary
China has termed Union Minister VK Singh's statement of India must have transgressed LAC at least 50 times as Unwitting Confession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X