ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ: ಚೀನಾದ ಬೆಂಬಲ

|
Google Oneindia Kannada News

ನವದೆಹಲಿ,ಫೆಬ್ರವರಿ 22: ಬ್ರೆಜಿಲ್, ರಷ್ಯಾ, ಭಾರತ , ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ ಶೃಂಗಸಭೆಯ ಈ ಬಾರಿಯ ಅಧ್ಯಕ್ಷತೆಯನ್ನು ಭಾರತವೇ ವಹಿಸಲಿದೆ.

ಈ ಬಾರಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದಕ್ಕೆ ಚೀನಾ ಸೋಮವಾರ ಬೆಂಬಲ ವ್ಯಕ್ತಪಡಿಸಿದೆ. ಐದು ಸದಸ್ಯ ರಾಷ್ಟ್ರಗಳು ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತದೊಂದಿಗೆ ಪ್ರಬಲ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಚೀನಾ ಹೇಳಿದೆ.

ಆದಾಗ್ಯೂ, ಚೀನಾ ಅಧ್ಯಕ್ಷ ಕ್ಸಿ-ಜಿನ್ ಪಿಂಗ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎಂಬುದನ್ನು ವಾಂಗ್ ಸ್ಪಷ್ಪಪಡಿಸಲಿಲ್ಲ. ಈ ಹಿಂದಿನ ಎಲ್ಲಾ ಶೃಂಗಸಭೆಯಲ್ಲಿ ಕ್ಸಿ-ಜಿನ್ ಪಿಂಗ್ ಪಾಲ್ಗೊಂಡಿದ್ದರು.

india-china

ಫೆ.19 ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಬ್ರಿಕ್ಸ್ ಸಚಿವಾಲಯ ಬ್ರಿಕ್ಸ್ 2021 ವೆಬ್ ಸೈಟ್ ಅನಾವರಣಗೊಳಿಸಿದ್ದರು.

ಭಾರತ ಈ ಬಾರಿ ಅಧ್ಯಕ್ಷತೆ ವಹಿಸುತ್ತಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ವಾಂಗ್ ವೆನ್ ಬಿನ್ , ಭಾರತ ಶೃಂಗಸಭೆ ಆಯೋಜಿಸುವುದನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಅತ್ಯುನ್ನತ ಸೌಹಾರ್ದಯತೆ ಮತ್ತು ಆಳವಾದ ಪ್ರಾಯೋಗಿಕ ಸಹಕಾರ, ಪ್ರಭಾವ ಇರುವುದನ್ನು ನೋಡಬಹುದಾಗಿದೆ. ಅದರೊಂದಿಗೆ ಬಲವಾದ ಕಾರ್ಯತಂತ್ರ ಪಾಲುದಾರಿಕೆ, ಸೌಹಾರ್ದತೆ ಹಾಗೂ ಸಹಕಾರಕ್ಕೆ ನಾವು ಬದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.

English summary
China on Monday expressed its support for India in hosting this year's BRICS summit and said it will work with New Delhi to strengthen the cooperation among the five-member grouping of emerging economies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X