ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಎತ್ತರದ ಪ್ರದೇಶದಲ್ಲಿ ಭಾರತದ ಹಿಡಿತ: ಚೀನಾ ಎದೆಯಲ್ಲಿ ನಡುಕ!

|
Google Oneindia Kannada News

ನವದೆಹಲಿ, ಸಪ್ಟೆಂಬರ್.25: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳಿಂದ ಚೀನಾ ಸೇನೆಯು ಹಿಂದೆ ಸರಿದಂತೆ ಕಾಣುತ್ತಿಲ್ಲ.

ಗಡಿಯಲ್ಲಿ ಸ್ವಾಧೀನಪಡಿಸಿಕೊಂಡ ಪ್ರದೇಶಗಳಿಂದ ಹಿಂದೆ ಸರಿಯದ ಚೀನಾ ಸೇನೆಯು ಭಾರತದ ವಿರುದ್ಧ ಬೊಟ್ಟು ಮಾಡುತ್ತಿದೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಎತ್ತರದ ಪ್ರದೇಶಗಳನ್ನು ಖಾಲಿ ಮಾಡುವಂತೆ ಚೀನಾವು ಭಾರತಕ್ಕೆ ಹೇಳುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಏಕಪಕ್ಷೀಯ ಬದಲಾವಣೆ ಮಾಡಿದ್ದಲ್ಲಿ ಹುಷಾರ್: ಚೀನಾಗೆ ಎಚ್ಚರಿಕೆ ಸಂದೇಶಏಕಪಕ್ಷೀಯ ಬದಲಾವಣೆ ಮಾಡಿದ್ದಲ್ಲಿ ಹುಷಾರ್: ಚೀನಾಗೆ ಎಚ್ಚರಿಕೆ ಸಂದೇಶ

ಕಳೆದ ಏಪ್ರಿಲ್ ತಿಂಗಳಿನಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಭಾರತೀಯ ಸೇನೆ ನಡುವೆ ಸಂಘರ್ಷ ನಡೆಯುತ್ತಿದೆ. ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.

6ನೇ ಕಾರ್ಪ್ ಕಮಾಂಡರ್ ಸಭೆಯಲ್ಲಿ ಚರ್ಚೆ

6ನೇ ಕಾರ್ಪ್ ಕಮಾಂಡರ್ ಸಭೆಯಲ್ಲಿ ಚರ್ಚೆ

ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ಹಂತದ 6ನೇ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಏಕಪಕ್ಷೀಯ ಬದಲಾವಣೆಗಳು ಆಗುತ್ತಿದ್ದರೆ ಶಾಂತಿ ಮಾತುಕತೆ ನಡೆಸುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂದು ಭಾರತ ಪ್ರಶ್ನಿಸಿದೆ. ಆಗಸ್ಟ್.31ರಂದು ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ. ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಿಲಿಟರಿ ಹಂತದ ಸಭೆಗಳನ್ನು ನಡೆಸಲಾಗುತ್ತಿದೆ.

ಭಾರತೀಯ ಸೇನೆಯ ಪ್ರಾಬಲ್ಯದಿಂದ ಚೀನಾ ಆತಂಕ

ಭಾರತೀಯ ಸೇನೆಯ ಪ್ರಾಬಲ್ಯದಿಂದ ಚೀನಾ ಆತಂಕ

ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದಲ್ಲಿರುವ ಆಯಕಟ್ಟಿನ ಕಡೆಗಳಲ್ಲಿ ಭಾರತೀಯ ಸೇನೆಯು ಹಿಡಿತ ಸಾಧಿಸಿದೆ. ಇದರಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಆತಂಕ ಎದುರಾಗಿದ್ದು, ಪೂರ್ವ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆ ಹಿಡಿತ ಹೊಂದಿರುವ ಪ್ರದೇಶಳಿಂದ ಹಿಂದೆ ಹೋಗುವಂತೆ ಚೀನಾ ಒತ್ತಾಯಿಸಿದೆ. ಇದಕ್ಕೂ ಮೊದಲು ಗಡಿ ನಿಯಂತ್ರಣ ರೇಖೆಯಲ್ಲಿ ವಿಸ್ತರಣೆ ಮಾರ್ಗಸೂಚಿಯನ್ನು ಮೊದಲು ಬಿಡುಗಡೆ ಮಾಡುವಂತೆ ಚೀನಾ ಒತ್ತಾಯಿಸುತ್ತಿದೆ.

ಚೀನಾದ ವಾದವನ್ನು ಪ್ರಶ್ನಿಸಿದ ಭಾರತೀಯ ಸೇನೆ

ಚೀನಾದ ವಾದವನ್ನು ಪ್ರಶ್ನಿಸಿದ ಭಾರತೀಯ ಸೇನೆ

ಭಾರತ ಮತ್ತು ಚೀನಾದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಂಥ ಸಂದರ್ಭದಲ್ಲಿ ಕೇವಲ ಒಂದು ಅಥವಾ ಎರಡು ಪ್ರದೇಶಗಳಿಗೆ ಚರ್ಚೆಯನ್ನು ಸೀಮಿತಗೊಳಿಸುವುದು ಏಕೆ ಎಂದು ಚೀನಾವನ್ನು ಪ್ರಶ್ನಿಸಿರುವ ಬಗ್ಗೆ ಐಎಎನ್ಎಸ್ ಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ದಿಪ್ಸಾಂಗ್ ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಎಲ್ಲ ಪ್ರದೇಶಗಳಲ್ಲಿ ಸೇನೆ ನಿಷ್ಕ್ಪಿಯಗೊಳಿಸುವ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

6 ಎತ್ತರದ ಪ್ರದೇಶಗಳ ಮೇಲೆ ಭಾರತೀಯ ಸೇನೆ ಹಿಡಿತ

6 ಎತ್ತರದ ಪ್ರದೇಶಗಳ ಮೇಲೆ ಭಾರತೀಯ ಸೇನೆ ಹಿಡಿತ

ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ಸಂಘರ್ಷಕ್ಕೆ ಪೂರ್ವ ಲಡಾಖ್ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತಲಿನ ಪ್ರದೇಶವೂ ಮುಖ್ಯ ಕಾರಣವಾಗಿದೆ. ದಕ್ಷಿಣ ಪ್ಯಾಂಗಾಂಗ್ ತ್ಸೋ ಸರೋವರ ಮತ್ತು ಉತ್ತರ ಪ್ಯಾಂಗಾಂಗ್ ತ್ಸೋ ಸರೋವರದ ಪ್ರದೇಶಕ್ಕಾಗಿ ಎರಡು ಸೇನೆಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಕಳೆದ 20 ದಿನಗಳಲ್ಲೇ ಭಾರತೀಯ ಸೇನೆಯು ಗಡಿಯಲ್ಲಿರುವ 6 ಪರ್ವತಗಳ ಮೇಲೆ ಹಿಡಿತ ಸಾಧಿಸಿದೆ. ಮಗರ್ ಹಿಲ್, ಗುರುಂಗ್ ಹಿಲ್, ರೆಜಾಂಗ್ ಲಾ, ರಚನ್ ಲಾ, ಮೊಕ್ಪರಿ ಮತ್ತು ಫಿಂಗರ್ 4ನ ರಿಡ್ಜ್ ಲೈನ್ ಪರ್ವತದ ಮೇಲೆ ಭಾರತೀಯ ಯೋಧರು ಹಿಡಿತ ಸಾಧಿಸಿದ್ದಾರೆ. ಎರಡು ಸೇನೆಗಳು ಮುಖಾಮುಖಿ ಆಗುವುದಕ್ಕೂ ಮೊದಲು ಈ ಪ್ರದೇಶಗಳು ಮಾನವರಹಿತವಾಗಿದ್ದವು ಎನ್ನಲಾಗಿದೆ.

English summary
China Asks India To Vacate Key Heights In Eastern Ladakh, Before De-Escalation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X