ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಡಿಗೆ ಹೊಸ ಕಮಾಂಡರ್ ನೇಮಿಸಿದ ಚೀನಾ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಭಾರತದ ಗಡಿಯೊಂದಿಗಿನ ಚಟುವಟಿಕೆಗಳನ್ನು ನೋಡಿಕೊಳ್ಳುವ ವೆಸ್ಟರ್ನ್ ಥಿಯೇಟರ್ ಕಮಾಂಡ್‌ (ಡಬ್ಲ್ಯೂಟಿಸಿ) ವಿಭಾಗಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಹೊಸ ಕಮಾಂಡರ್‌ನನ್ನು ನೇಮಿಸಿದ್ದಾರೆ. ಲಡಾಖ್‌ನಲ್ಲಿ ಭಾರತ-ಚೀನಾ ಗಡಿ ಉದ್ವಿಗ್ನತೆ ಮುಂದುವರಿದಿರುವ ವೇಳೆಯಲ್ಲಿಯೇ ಈ ಹೊಸ ನೇಮಕಾತಿ ನಡೆದಿದೆ.

ಡಬ್ಲ್ಯೂಟಿಸಿಯಲ್ಲಿ ಪ್ರಬಲ ಕಮಾಂಡರ್ ಎನಿಸಿದ್ದ ಜನರಲ್ ಝಾವೊ ಜೊಂಗ್‌ಕಿ ನಿವೃತ್ತರಾಗುತ್ತಿದ್ದು, ಅವರ ಸ್ಥಾನಕ್ಕೆ ಜನರಲ್ ಝಾಂಗ್ ಕ್ಸುಡೊಂಗ್ ಅವರನ್ನು ನೇಮಿಸಲಾಗಿದೆ. ಝಾಂಗ್ ಅವರು ಚೀನಾ ರಾಜಧಾನಿ ಬೀಜಿಂಗ್‌ನ ಭದ್ರತಾ ಜವಾಬ್ದಾರಿ ನೋಡಿಕೊಳ್ಳುವ ಸೆಂಟ್ರಲ್ ಥಿಯೇಟರ್ ಕಮಾಂಡ್ ವಿಭಾಗದ ಎರಡನೆಯ ಹಂತದ ಕಮಾಂಡ್ ಆಗಿದ್ದರು.

ಹಬ್ಬದ ಸೀಸನ್‌ಗಳಲ್ಲಿ ಭಾರತದ ಲಕ್ಷಾಂತರ ಜನರನ್ನು ಟಾರ್ಗೆಟ್ ಮಾಡಿದ್ದ ಚೀನಾದ ಹ್ಯಾಕರ್ಸ್ಹಬ್ಬದ ಸೀಸನ್‌ಗಳಲ್ಲಿ ಭಾರತದ ಲಕ್ಷಾಂತರ ಜನರನ್ನು ಟಾರ್ಗೆಟ್ ಮಾಡಿದ್ದ ಚೀನಾದ ಹ್ಯಾಕರ್ಸ್

ಡಬ್ಲ್ಯೂಟಿಸಿಯ ಕಮಾಂಡರ್ ಆಗಿ ಝಾಂಗ್, ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಭೂದಳ (ಸೇನೆ), ವಾಯುಪಡೆ ಮತ್ತು ರಾಕೆಟ್ ದಳದ ಚಟುವಟಿಕೆಗಳ ನೇತೃತ್ವ ವಹಿಸಲಿದ್ದಾರೆ. ಇದರ ಜತೆಗೆ ಅವರು ಟಿಬೆಟ್ ಹಾಗೂ ಕ್ಸಿಂಜಿಯಾಂಗ್ ಪ್ರದೇಶಗಳಲ್ಲಿನ ಸೇನಾ ಚಟುವಟಿಕೆಗಳನ್ನೂ ನಿಭಾಯಿಸಲಿದ್ದಾರೆ.

China Appoints Gen Zhang Xudong As New Military Commander For India Border

ಕ್ಸಿ ಜಿನ್‌ಪಿಂಗ್ ಅವರು ಝಾಂಗ್ ಅವರನ್ನು ನೂತನ ಡಬ್ಲ್ಯೂಟಿಸಿ ಕಮಾಂಡರ್ ಆಗಿ ನೇಮಿಸಿರುವುದು ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಇದು ಮಾಮೂಲಿ ನೇಮಕಾತಿ. ಈ ಚಳಿಗಾಲದ ಅವಧಿಯಲ್ಲಿ ಗಡಿಯಲ್ಲಿ ಉಭಯ ಪಡೆಗಳು ಹೆಚ್ಚು ಕ್ರಿಯಾಶೀಲವಾಗಿಲ್ಲ. ಹೀಗಾಗಿ ಅವರಿಗೆ ಗಡಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯ ಸಿಕ್ಕಂತಾಗಿದೆ.

English summary
China president Xi Jinping has appointed Gen Zhang Xudong as new commander for Western Theatre Command (WTC) to replace retiring Gen. Zhao Zongqi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X