ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 16 ನಾವಿಕರಿಗೆ ಬಿಡುಗಡೆ ನೀಡಲು ಕೊನೆಗೂ ಚೀನಾ ಒಪ್ಪಿಗೆ

|
Google Oneindia Kannada News

ಬೀಜಿಂಗ್, ಫೆಬ್ರವರಿ 5: ಚೀನಾದ ಕಾವೊಫೀಡಿಯನ್ ಬಂದರಿನಲ್ಲಿ ಸೆಪ್ಟೆಂಬರ್ ತಿಂಗಳಿನಿಂದಲೂ ಸಿಲುಕಿಕೊಂಡಿರುವ ಭಾರತದ ಸರಕು ಸಾಗಣೆ ಹಡಗಿನಲ್ಲಿರುವ 16 ನಾವಿಕರನ್ನು ಬದಲಿಸಲು ಕೊನೆಗೂ ಚೀನಾ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಆದಷ್ಟು ಬೇಗನೆ ಸಿಬ್ಬಂದಿ ಬದಲಾವಣೆ ಸಾಧ್ಯವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಭರವಸೆ ವ್ಯಕ್ತಪಡಿಸಿದ್ದಾರೆ.

'ಬೀಜಿಂಗ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯ ನಿರಂತರ ಪ್ರಯತ್ನದ ಬಳಿಕ, ಎಂವಿ ಅನಸ್ತೇಷಿಯಾ ಹಡಗಿನಲ್ಲಿರುವ ಸಿಬ್ಬಂದಿಯನ್ನು ವರ್ಗಾಯಿಸಲು ಟಂಗ್ಷನ್‌ನಲ್ಲಿನ ಸ್ಥಳೀಯ ವಿದೇಶಾಂಗ ಕಚೇರಿ ಮತ್ತು ಬಂದರು ಅಧಿಕಾರಿಗಳಿಗೆ ಚೀನಾದ ಕೇಂದ್ರ ಅಧಿಕಾರಿಗಳು ತಮ್ಮ ಅನುಮತಿಯನ್ನು ರವಾನಿಸಿದ್ದಾರೆ' ಎಂದು ಅನುರಾಗ್ ಹೇಳಿದ್ದಾರೆ.

ಚೀನಾ ಬಂದರಿನಿಂದ ನಾವಿಕರನ್ನು ಕರೆತರಲು ವಿವಿಧ ಆಯ್ಕೆಗಳ ಪರಿಶೀಲನೆಚೀನಾ ಬಂದರಿನಿಂದ ನಾವಿಕರನ್ನು ಕರೆತರಲು ವಿವಿಧ ಆಯ್ಕೆಗಳ ಪರಿಶೀಲನೆ

ಕಳೆದ ವರ್ಷದ ಸೆಪ್ಟೆಂಬರ್ 20ರಿಂದಲೂ ಎಂವಿ ಅನಸ್ತೇಷಿಯಾ ಹಡಗು ಚೀನಾದ ಕಾವೊಫೀಡಿಯನ್ ಬಂದರಿನಲ್ಲಿ ಸಿಲುಕಿಕೊಂಡಿದೆ. ಕೋವಿಡ್ ನಿಯಮಗಳ ಕಾರಣವೊಡ್ಡಿ ಚೀನಾ ಅಲ್ಲಿಂದ ಹಡಗನ್ನು ಕಳುಹಿಸಲು ಅಥವಾ ನಾವಿಕರನ್ನು ಬದಲಿಸಲು ಕೂಡ ಅವಕಾಶ ನೀಡುತ್ತಿಲ್ಲ.

China Allows Crew Change For 16 Indian Sailors Stranded On Cargo Vessel At Caofeidian Port

ಭಾರತದ ಮತ್ತೊಂದು ಹಡಗು ಎಂವಿ ಜಾಗ್ ಆನಂದ್ ಜೂನ್ 13ರಿಂದಲೂ ಹೆಬೀ ಪ್ರಾಂತ್ಯದ ಜಿಂಗ್‌ಟಾಂಗ್ ಬಂದರಿನಲ್ಲಿ ಸಿಲುಕಿಕೊಂಡಿದೆ. ಇದರಲ್ಲಿಯೂ ಭಾರತದ 23 ನಾವಿಕರು ಇದ್ದರು. ಈ ಹಡಗಿನ ನಾವಿಕರನ್ನು ಬದಲಿಸಲು ಚೀನಾ ಕಳೆದ ತಿಂಗಳು ಒಪ್ಪಿಗೆ ಸೂಚಿಸಿತ್ತು.

English summary
China have given clearance for crew change for 16 Indian sailors on the cargo vessel MV Anastasia since September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X