ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ..ಬಂದ...ಸಂತಸ ಹಂಚುವ ಕ್ರಿಸ್ ಮಸ್ ಸಂತ

By Vanitha
|
Google Oneindia Kannada News

ಬೆಂಗಳೂರು, ಡಿಸೆಂಬರ್, 21: ಅಡಿಯಿಂದ ಮುಡಿಯವರೆಗೆ ಕೆಂಪನೇ, ಬೆಳ್ಳನೆ ವಸ್ತ್ರ, ಬಿಳಿ ಉದ್ದನೆಯ ಗಡ್ಡ, ಡುಮ್ಮ ಹೊಟ್ಟೆ, ಕೈಯಲ್ಲೊಂದು ಬ್ಯಾಗ್, ಬ್ಯಾಗಿನಲ್ಲಿ ಚಾಕಲೇಟ್, ಹಲವಾರು ಗಿಫ್ಟ್ಸ್, ಮಕ್ಕಳನ್ನು ನಗಿಸುವ ನಗೆ ಚಟಾಕಿ ಮಾತುಗಳು...ನಾನು ವರ್ಣಿಸುತ್ತಿರೋದು ಯಾರು ಅಂತಾ ನಿಮಗೆ ಈಗಾಗಲೇ ಗೊತ್ತಾಗಿರ್ಬೇಕಲ್ವ?

ಹೌದು ನಾನು ಇಷ್ಟೆಲ್ಲಾ ವಿವರವಾಗಿ ಮಾತನಾಡಿದ್ದು ನಾವು, ನೀವು ಇಷ್ಟಪಡುವ ಕ್ರಿಸ್ಮಸ್ ತಾತನ ಬಗ್ಗೆ, ಒಳ್ಳೆತನ, ಸಂತೋಷವನ್ನು ನಮಗೆಲ್ಲಾ ಹಂಚಿ ಕಷ್ಟ, ನೋವಿನ ಪರಿಗಳನ್ನು ಹೊತ್ತೊಯ್ಯುವ ಕ್ರಿಸ್ಮಸ್ ಸಂತನ ಬಗ್ಗೆ. ಕ್ರಿಸ್ಮಸ್ ಹಬ್ಬಕ್ಕೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಭರ್ಜರಿಯಾಗಿಯೇ ತಯಾರಿ ನಡೆಸುತ್ತಿದ್ದಾರೆ.

ಗಿಫ್ಟ್, ಡ್ರೆಸ್, ಸ್ಟಾರ್ಸ್, ಕೇಕ್ ಹೀಗೆ ಒಟ್ಟಿನಲ್ಲಿ ಎಲ್ಲಾ ಭೇದಭಾವ ಮರೆತು ಕೊಡುಕೊಳ್ಳುವಿಕೆ ಮೂಲಕ ಬಾಂಧವ್ಯ ಬೆಳೆಸುವ ಹಬ್ಬ ಶಾಂತಿಯ ಸಂಕೇತವಾಗಿಯೂ ಎಲ್ಲರ ಮನದಲ್ಲಿ ಹಚ್ಚಹಸಿರಾಗಿದೆ. ಮಕ್ಕಳು ಹಾಡು ನೃತ್ಯದ ಮೂಲಕ ಶಾಂತಿ ಸಂದೇಶ ಕೋರುತ್ತಿದ್ದರೆ, ಹಿರಿಯರು ಏಸು ಕ್ರಿಸ್ತನ ಪ್ರಾರ್ಥನೆ ಮೂಲಕ ಪ್ರಪಂಚದಲ್ಲಿ ಶಾಂತಿ ನೆಲೆಸಲೆಂದು ಆಶಿಸುತ್ತಿದ್ದಾರೆ.[ಕ್ರಿಸ್ ಮಸ್ ರಜೆ, ಕೆಎಸ್ಆರ್ ಟಿಸಿಯಿಂದ ವಿಶೇಷ ಬಸ್ಸುಗಳು]

ಒಟ್ಟಿನಲ್ಲಿ ಇಡೀ ಪ್ರಪಂಚದ ಜನತೆ ಶಾಂತಿ, ಸಂತೋಷ, ಬೆಳಕನ್ನು ಹಂಚುವ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಸುದ್ದಿಯೊಂದಿಗೆ ಇನ್ನಿತರ ಸುದ್ದಿಗಳಿವೆ. ಅವೆಂದರೆ ಮಂಗಳೂರಲ್ಲಿ ಕಂಬಳದ ಓಟ, ಎಡವಟ್ಟಿಗೆ ಸಿಲುಕಿದ ಭುವನಸುಂದರಿ ಕಿರೀಟ, ನಿರ್ಭಯಾ ಬಾಲಾಪರಾಧಿ ಬಿಡುಗಡೆ ಖಂಡಿಸಿ ದನಿ ಎತ್ತಿರುವ ನಿರ್ಭಯಾ ತಾಯಿಯ ರೋಧನ, ಸಂಘರ್ಷದ ಸೇನಾನಿ ಪುಸ್ತಕ ಬಿಡುಗಡೆಯಲ್ಲಿ ಮುಖಾಮುಖಿಯಾದ ಗಣ್ಯರು ಹೀಗೆ ಇನ್ನಿತರ ಎಲ್ಲಾ ಸುದ್ದಿಗಳ ಪಕ್ಷಿನೋಟ ಇಲ್ಲಿದೆ.

ಕ್ರಿಸ್ ಮಸ್ ತಾತರಾದ ಪುಟಾಣಿಗಳು

ಕ್ರಿಸ್ ಮಸ್ ತಾತರಾದ ಪುಟಾಣಿಗಳು

ಕ್ರಿಸ್ ಮಸ್ ಹಬ್ಬದ ಆಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಕ್ರಿಸ್ ಮಸ್ ತಾತನ ವೇಷ ಧರಿಸಿ ಶಾಂತಿ (Peace) ಎಂಬ ಸಂದೇಶ ಸಾರಿದರು.[ಕ್ರಿಸ್ ಮಸ್ ಹಬ್ಬಕ್ಕೆ ಟಾಪ್ 10 ಆನ್ ಲೈನ್ ಆಫರ್ಸ್]

ಮಂಗಳೂರಲ್ಲಿ ಕಂಬಳ

ಮಂಗಳೂರಲ್ಲಿ ಕಂಬಳ

ನೂರುವರ್ಷಕ್ಕೂ ಇತಿಹಾಸವಿರುವ ಕಂಬಳ ಕರಾವಳಿ ಕರ್ನಾಟಕದ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ ಇದು. ಇದನ್ನು ರೈತರು ಭತ್ತದ ಕೊಯ್ಲಿನ ನಂತರ ಮನೋರಂಜನೆಗಾಗಿ ಆಚರಿಸಲಾಗುತ್ತದೆ. ವೇಗದ ಬೆನ್ನು ಹತ್ತುವ ಎಮ್ಮೆಯ ಓಟ ನೋಡುವುದೇ ಒಂದು ಸೊಬಗು.[ಇತಿಹಾಸದ ಪುಟ ಸೇರಲಿದೆಯೆ ಮಂಗಳೂರು ಕಂಬಳ?]

ಭುವನಸುಂದರಿ ಎಡವಟ್ಟು

ಭುವನಸುಂದರಿ ಎಡವಟ್ಟು

ಫಿಲಿಫೈನ್ಸ್ ಸುಂದರಿ ಪಿಯಾ ಅಲೋಂಜೋ ಅವರಿಗೆ ತೊಡಿಸಬೆಕಿದ್ದ ಭುವನ ಸುಂದರಿ ಕಿರೀಟವನ್ನು ಮಿಸ್ ಕೊಲಂಬಿಯಾ ಗ್ಯುಟಿರ್ರೆಯಾಗೆ ತೊಡಿಸಿದರು. ಬಳಿಕ ಮಿಸ್ ಕೊಲಂಬಿಯಾ ಭುವನಸುಂದರಿ ಅಲ್ಲ ಎಂದು ಘೋಷಿಸಿ ಅವಳು ದುಃಖದ ಕಟ್ಟೆ ಒಡೆಯುವಂತೆ ಮಾಡಿದರು ಕಾಮಿಡಿಯನ್ ಸ್ಟೀವ್ ಹಾರ್ವೆ.[ಭುವನ ಸುಂದರಿ ಸ್ಪರ್ಧೆಯಲ್ಲಿ 'ಹಾರ್ವೆ' ಮಾಡಿದ ಎಡವಟ್ಟು!]

ಕೊನೆಗೂ ನ್ಯಾಯ ಸಿಗಲಿಲ್ಲ ನಿರ್ಭಯಾ ಪ್ರಕರಣದಲ್ಲಿ

ಕೊನೆಗೂ ನ್ಯಾಯ ಸಿಗಲಿಲ್ಲ ನಿರ್ಭಯಾ ಪ್ರಕರಣದಲ್ಲಿ

2012 ಡಿಸೆಂಬರ್ 16 ರಂದು ನಡೆದ ದೇಶವನ್ನೇ ಬೆಚ್ಚಿಬೀಳಿಸುವ ಅತ್ಯಾಚಾರದಲ್ಲಿ ಐವರು ಕಾಮುಕರಿಗೆ ಬಲಿಯಾದ ಜ್ಯೋತಿಸಿಂಗ್ ಅವರ ಪ್ರಕರಣದಲ್ಲಿ ಆರೋಪಿಯಾದ ಬಾಲಾಪರಾಧಿಯನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಖಂಡಿಸಿ ಜ್ಯೋತಿಸಿಂಗ್ ತಾಯಿ ಮಾಧ್ಯಮದವರ ಮುಂದೆ ಕೋರ್ಟಿನ ತೀರ್ಪನ್ನು ಅಲ್ಲಗಳೆದು ನಮಗೆ ನ್ಯಾಯ ಬೇಕು ಎಂದರು.

ಮನಮೋಹನ್ ಸಿಂಗ್ ವಿನಯಪೂರ್ವಕ ನಮನ

ಮನಮೋಹನ್ ಸಿಂಗ್ ವಿನಯಪೂರ್ವಕ ನಮನ

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಇಬ್ಬರೂ ನವದೆಹಲಿಯಲ್ಲಿ ನಡೆದ 'ಸಂಘರ್ಷ್ ಕಾ ಸೇನಾನಿ' ಎಂಬ ಪುಸ್ತಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದ ಮನ್ ಮೋಹನ್ ಜೀ ಅವರು ವಿನಯಪೂರ್ವಕವಾಗಿ ನಮನಗೈದರು.

 ಅಮೃತ ಸೌಧದ ಮುಂದೆ ಬಿಳಿಗರ ಪೋಸ್.

ಅಮೃತ ಸೌಧದ ಮುಂದೆ ಬಿಳಿಗರ ಪೋಸ್.

ನವದೆಹಲಿಯ ಆಗ್ರಾದಲ್ಲಿರುವ ಪ್ರೇಮಸೌಧ ತಾಜ್ ಮಹಲ್ ನೋಡಲು ಹಾಲಿವುಡ್ ನಟ ಓರ್ಲಾಂಡೋ ಬ್ಲೂಮ್ ಮತ್ತು ಅಮರ್ ಸಿಂಗ್ ಆಗಮಿಸಿದ್ದು, ಅಮೃತ ಸೌಧದ ಮುಂದೆ ಬಿಳಿಗರ ಪೋಸ್.

ಭೋಪಾಲ್ ನಲ್ಲಿ ಕ್ರಿಸ್ ಮಸ್ ಸಂತರು

ಭೋಪಾಲ್ ನಲ್ಲಿ ಕ್ರಿಸ್ ಮಸ್ ಸಂತರು

ಭೋಪಾಲ್ ನಲ್ಲಿ ನೂರಾರು ಮಕ್ಕಳು ಕ್ರಿಸ್ ಮಸ್ ಸಂತರಾಗಿದ್ದರು. ಹರ್ಷಚಿತ್ತರಾಗಿದ್ದರು. ಮುದ್ದು ಮುದ್ದು ಕ್ರಿಸ್ ಮಸ್ ಸಂತರನ್ನು ನೋಡಿ ಮನ ತುಂಬಿಕೊಳ್ಳಿ

English summary
Children dressed up Santa Claus sit in a formation that reads "peace" during Christmas celebrations at a school in Moradabd, Nirbhaya's mother gestures as she talks with newsmen at Jantar Mantar, Hollywood actor Orlando Bloom with Amar Singh during a visit to Taj Mahal in Agra New delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X