ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ವರ್ಷದವರೆಗಿನ ಮಕ್ಕಳಿಗೆ ಸೋಂಕಿನ ತೊಂದರೆಯಿಲ್ಲ; ಆರೋಗ್ಯ ಸಚಿವ

|
Google Oneindia Kannada News

ನವದೆಹಲಿ, ಮಾರ್ಚ್ 19: ಕೇಂದ್ರ ತಜ್ಞರ ತಂಡ ಕೊರೊನಾ ಸೋಂಕಿನ ಕುರಿತು ಇದುವರೆಗೂ ನಡೆಸಿರುವ ವಿಶ್ಲೇಷಣೆ ಪ್ರಕಾರ 0 ರಿಂದ 14 ವಯಸ್ಸಿನ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗುವ ಪ್ರಮಾಣ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ತಿಳಿಸಿದ್ದಾರೆ.

ಈ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಸೋಂಕಿನ ಗಂಭೀರ ಪರಿಣಾಮ ಪತ್ತೆಯಾಗಿಲ್ಲ. ಹೆಚ್ಚಿನ ಮಕ್ಕಳಿಗೆ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿದ ಮಾಡೆರ್ನಾಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿದ ಮಾಡೆರ್ನಾ

ಹೀಗಾಗಿ ಈ ವಯಸ್ಸಿನ ಮಕ್ಕಳ ಮೇಲೆ ಸೋಂಕಿನ ದುಷ್ಪರಿಣಾಮ ತಗ್ಗಿಸುವ ಸಂಬಂಧ ಪ್ರಸ್ತುತ ನಿರ್ದಿಷ್ಟ ಕ್ರಿಯಾಯೋಜನೆಯನ್ನು ರೂಪಿಸಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಕೊರೊನಾ ನಿಯಮಗಳನ್ನು ಪಾಲಿಸುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Children Between 0 14 Years Less Affected By Corona Said Centre

ಈಚೆಗಷ್ಟೆ ಅಮೆರಿಕ ಮೂಲದ ಮಾಡೆರ್ನಾ, ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿರುವುದಾಗಿ ತಿಳಿಸಿತ್ತು. 6 ತಿಂಗಳಿಂದ 12 ವರ್ಷದ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆಯುತ್ತಿದೆ ಎಂದು ಸಿಇಒ ಸ್ಟೀಫನ್ ತಿಳಿಸಿದ್ದರು. ಭಾರತದಲ್ಲಿ ಸದ್ಯಕ್ಕೆ ಮಕ್ಕಳಿಗೆ ನೀಡಲಾಗುವ ಲಸಿಕೆ ಕುರಿತು ಯಾವುದೇ ಪ್ರಯೋಗ ನಡೆಯುತ್ತಿಲ್ಲ.

English summary
Children between 0-14 years less affected by Covid-19…no specific action plan formulated for them yet said Centre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X