• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳ ಸೂಚ್ಯಂಕ: ಕೇರಳ ಪ್ರಥಮ, ಬಿಹಾರಕ್ಕೆ ಕೊನೆಯ ಸ್ಥಾನ

|

ನವದೆಹಲಿ, ಸೆಪ್ಟೆಂಬರ್ 05: ಮಕ್ಕಳ ಸೂಚ್ಯಂಕವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಕೇರಳ ಮೊದಲ ಸ್ಥಾನ ಪಡೆದಿದೆ.

ಮಕ್ಕಳ ಶೈಕ್ಷಣಿಕ ವರ್ಷಗಳ ಆರಂಭದಲ್ಲಿಯೇ ಅವರ ಆರೋಗ್ಯ, ಪೌಷ್ಠಿಕಾಂಶ ಕೊರತೆಯನ್ನು ನೀಗುಸುವಲ್ಲಿ ಕೇರಳ ಯಶಸ್ವಿಯಾಗಿದೆ.

0-6 ವರ್ಷಗಳ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ. 2005-06, 2015-16ರ ಅಂಕಿ ಅಂಶಗಳನ್ನು ಹೋಲಿಕೆ ಮಾಡಲಾಗಿದೆ.

ಈ ರಾಜ್ಯಗಳು, ಮಕ್ಕಳು ಬದುಕುಳಿಯುವ ಪ್ರಮಾಣ ಹೆಚ್ಚಿಸುವಲ್ಲಿ, ಪೌಷ್ಟಿಕಾಂಶಗಳ ಪೂರೈಕೆಯಲ್ಲಿ, ಅತ್ಯುತ್ತಮ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ವ್ಯವಸ್ಥೆಗಳನ್ನು ಕಲ್ಪಿಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ. ಜತೆಗೆ, ಬಾಲಾಪರಾಧ ಪ್ರಮಾಣವನ್ನೂ ಗಣ ನೀಯವಾಗಿ ಇಳಿಕೆ ಮಾಡಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಡಾಟಾವನ್ನು ಬಿಡುಗಡೆ ಮಾಡಿದ್ದಾರೆ. ಕೇರಳವು 2015-16ರಲ್ಲಿ 0.858 ಸ್ಕೋರ್ ಮಾಡಿತ್ತು. ಗೋವಾವು 2015-16ರಲ್ಲಿ ಎರಡನೇ ಸ್ಥಾನ ಪಡೆದುಕೊಂಡು 0.817 ಸ್ಕೋರ್ ಮಾಡಿದೆ.ಅಸ್ಸಾಂ 0.583, ಮೇಘಾಲಯ 0.562, ರಾಜಸ್ಥಾನ 0.556, ಚತ್ತೀಸ್‌ಗಢ 0.555, ಮಧ್ಯಪ್ರದೇಶ 0.526, ಜಾರ್ಖಂಡ್ 0.500, ಬಿಹಾರ ಕೊನೆಯದಾಗಿ 0.452 ಸ್ಕೋರ್ ಪಡೆದಿದೆ.

ತ್ರಿಪುರ 2005-06ರಲ್ಲಿ 0.582 ಸ್ಕೋರ್ ಪಡೆದಿತ್ತು. 2015-16ರಲ್ಲಿ 0.761 ಸ್ಕೋರ್ ಮಾಡಿದೆ.2005-06 ಹಾಗೂ 2015-16ರ ಸಾರ್ವಜನಿಕ ದತ್ತಾಂಶಗಳ ತುಲನಾತ್ಮಕ ವಿಶ್ಲೇಷಣೆಯ ಆಧಾರದ ಮೇಲೆ 0-6 ವರ್ಷ ವಯಸ್ಸಿನ ಮಕ್ಕಳ, ಆರೋಗ್ಯ, ಪೋಷಕಾಂಶ ಮತ್ತು ಬುದ್ಧಿಮತ್ತೆಯ ಕುರಿತು ಬಂದಿರುವ ಫಲಿತಾಂಶದಲ್ಲಿ ಬಿಹಾರ ಕೊನೆಯ ಸ್ಥಾನ ಪಡೆದಿದೆ.

English summary
Kerala emerged on top while Bihar fared the worst in outcomes linked to health, nutrition and cognitive growth of children in 0-6 years age group, based on a comparative analysis of public data for 2005-06 and 2015-16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X