• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಮಗಳೂರಿನ ಬೆಡಗಿ ಮೇಘನಾ ಯುದ್ಧ ವಿಮಾನದ ಪೈಲಟ್

By Nayana
|

ಬೆಂಗಳೂರು, ಜೂನ್ 16: ಫ್ಲೈಯಿಂಗ್ ಆಫೀಸರ್ ಎಂ.ಆರ್.ಮೇಘನಾ ಶಾನಬೋಗ್ ಭಾರತೀಯ ವಾಯು ದಳದ ಸೂಜಿಗಲ್ಲಿನ ಹುಡುಗಿಯಾಗಿ ಹೊರ ಹೊಮ್ಮಿದ್ದು, ದೇಶದ ಆರನೇ ಮಹಿಳಾ ಯುದ್ಧ ವಿಮಾನದ ಪೈಲಟ್ ಆಗಿ ನೇಮಕಗೊಂಡಿದ್ದಾಳೆ. ಅಂದ ಹಾಗೆ ಮೇಘನಾ ದಕ್ಷಿಣ ಭಾರತದ ಪ್ರಥಮ ಯುದ್ಧ ವಿಮಾನ ಪೈಲೆಟ್ ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ.

ದುಂಡಿಗಲ್‌ನ ವಾಯುದಳ ಅಕಾಡೆಮಿ (ಎಎಫ್ಎ)ಯಲ್ಲಿ ಶನಿವಾರ ಜಂಟಿ ಪದವಿ ಪರೇಡ್‌ನಲ್ಲಿ ಪದವೀಧರೆಯಾಗಿ ಸೇನೆಗೆ ಪಾದಾರ್ಪನೆ ಮಾಡಿರುವ ಮೇಘನಾ ಚಿಕ್ಕಮಗಳೂರಿನ ವಿದ್ಯಾಮಂದಿರ ಪಬ್ಲಿಕ್ ಶಾಲೆಯ ಪ್ರತಿಭೆ.

ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿ

ಮೇಘನಾ ನಾಲ್ಕನೇ ತರಗತಿಯಲ್ಲಿ ಇದ್ದಾಗಲೇ ಮನೆಯ ಎಲ್ಲ ಸೌಕರ್ಯಗಳನ್ನು ತೊರೆದು ಸ್ವತಂತ್ರವಾಗಿ ಬದುಕಬೇಕೆಂಬ ಇಚ್ಛೆ ಹೊಂದಿದ್ದಳು. ಸದಾ ಬೋರ್ಡಿಂಗ್ ಶಾಲೆಯಲ್ಲಿದ್ದುಕೊಂಡೇ ಕಲಿಯಬೇಕೆಂಬ ಆಸೆ ಅವಳಿಗಿತ್ತು.

ಆಕೆಯ ತಾಯಿ ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲವಾದರೂ ಕ್ರಮೇಣ ಮೇಘನಾಳ ಮಹತ್ವಾಕಾಂಕ್ಷೆ ಆಕೆಯನ್ನು ತಡೆಯಲಾಗಲಿಲ್ಲ. ಕೊನೆಗೆ ಪಾಲಕರ ಪ್ರೋತ್ಸಾಹದಿಂದಲೇ ಉಡುಪಿಯ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಸೇರ್ಪಡೆಗೊಳ್ಳುವ ಮೂಲಕ ಈಕೆಯ ಸಾಧನೆಯ ಅಭಿಯಾನ ಆರಂಭವಾಯಿತು. 5ರಿಂದ 12ನೇ ತರಗತಿವರೆಗೆ ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್‌ ಎಂಜಿನಿಯರಿಂಗ್ (ಎಸ್‌ಜೆಇಸಿ) ಸೇರ್ಪಡೆಗೊಂಡಳು.

ಇದೇ ವೇಳೆ ಎಸ್‌ಜೆಇಸಿಯಲ್ಲಿ ಸಾಹಸ ಅಡ್ವೆಂಚರ್ ಕ್ಲಬ್ ಸ್ಥಾಪಿಸಿ, ಆಗಿನಿಂದಲೇ ಸಾಹಸಮಯ ಚಟುವಟಿಕೆಗಳನ್ನು ಸ್ನೇಹಿತರ ಜತೆ ಆರಂಭಿಸಿದ್ದಳು. ಬೇಸಿಗೆ ರಜೆ ದಿನಗಳಲ್ಲಿ ಟ್ರೆಕ್ಕಿಂಗ್, ರಾಫ್ಟಿಂಗ್, ಮೌಂಟೆನಿರೀಂಗ್ ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗುತ್ತಿದ್ದಳು.

ತನ್ನ 20ನೇ ವಯಸ್ಸಿನಲ್ಲಿ ಎಂಜಿನಿಯರಿಂಗ್ ಎರಡನೇ ವರ್ಷದಲ್ಲಿ ಓದುತ್ತಿದ್ದಾಗ ಮೇಘನಾ ಮೊಟ್ಟ ಮೊದಲ ಬಾರಿಗೆ ಸೋಲೋ ಪ್ಯಾರಾಗ್ಲೈಡಿಂಗ್ ನಡೆಸಿದಳು. ಈ ಘಟನೆ ಅವಳ ಬದುಕಿನಲ್ಲಿ ಸಾಮಾನ್ಯದಿಂದ ಅಸಾಮಾನ್ಯದೆಡೆಗೆ ಸಾಗಬೇಕೆಂಬ ಅವಳ ಮಹತ್ವಾಕಾಂಕ್ಷೆಗೆ ಮತ್ತಷ್ಟು ಇಂಬು ನೀಡಿತು. ಗೋವಾ ಕ್ವೇರಂ ಬೀಚ್‌ನಲ್ಲಿ ಪ್ಯಾರಾಗ್ಲೈಡರ್‌ನಿಂದ ಜಿಗಿದು ಹೊಸ ಅನುಭವ ಪಡೆದಳು.

2016ರ ಜೂನ್‌ನಲ್ಲಿ ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಮಹಿಳಾ ಪೈಲೆಟ್‌ಗಳಿಗೂ ಅವಕಾಶ ನೀಡಲಾಗುತ್ತದೆ ಎಂಬ ಭಾರತೀಯ ವಾಯು ದಳ ಪ್ರಕಟಿಸಿದ ಬಿಗ್ ಬ್ರೇಕಿಂಗ್ ನ್ಯೂಸ್ ಮೇಘನಾಳನ್ನು ಪ್ರೇರೇಪಿಸಿತ್ತು.

'ವಾಯುದಳದ ಈ ಪ್ರಕಟಣೆ ನನ್ನಲ್ಲಿ ಸಾಹಸಮಯ ಗುಣ ಬಡಿದೆಬ್ಬಿಸಿತು. ನಾನು ಆಗಲೇ ಏರ್ ಫೋರ್ಸ್ ಕಾಮನ್ ಎಡ್ಮಿಶನ್ ಟೆಸ್ಟ್ ಹಾಜರಾಗಲು ನಿರ್ಧರಿಸಿದೆ. ನನ್ನ ಇಚ್ಛೆಯಿಂತೆ ಪ್ರವೇಶ ಪರೀಕ್ಷೆ ಉತ್ತೀರ್ಣಳಾದೆ. ಆಗಲೇ ದುಂಡಿಗಲ್ ಏರ್ ಫೋರ್ಸ್ ಅಕಾಡೆಮಿಗೆ ಸೀಟು ಗಿಟ್ಟಿಸಿಕೊಂಡೆ' ಎಂದು ಹೆಮ್ಮೆಯಿಂದ ಹೇಳುತ್ತಾಳೆ ಮೇಘನಾ. ಧೈರ್ಯ, ಸಾಹಸದ ಗುಣ ಹಾಗೂ ಈ ಸಾಧನೆಗೆ ತನ್ನ ತಂದೆ ನ್ಯಾಯವಾದಿ ಎಂ.ಕೆ.ರಮೇಶ್ ಹಾಗೂ ಪ್ಯಾರಾ ಗ್ಲೈಡಿಂಗ್ ತರಬೇತುದಾರ ನಾಗೇಂದ್ರ ಅವರು ಮೇಘನಾಳಿಗೆ ರೋಲ್ ಮಾಡೆಲ್ ಎಂದು ಸ್ವತಃ ಆಕೆಯೇ ಹೇಳುತ್ತಾಳೆ.

English summary
A girl from Chikmagalur, Meghana Shanboug has become fighter pilot of Indian Air Force and she will be first from South India as women pilot for fighter jet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more