ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಂದಿನ ಸಿಜೆಐ ಅರವಿಂದ್ ಬೊಬ್ಡೆ, ನ್ಯಾ. ಗೊಗಾಯ್ ಶಿಫಾರಸು

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅರವಿಂದ್ ಬೊಬ್ಡೆ ನೇಮಕ ಬಹುತೇಕ ಖಚಿತವಾಗಿದೆ. ಜಸ್ಟೀಸ್ ರಂಜನ್ ಗೊಗಾಯ್ ಅವರು ಜಸ್ಟೀಸ್ ಬೊಬ್ಡೆ ಅವರ ಹೆಸರನ್ನು ಉನ್ನತ ಹುದ್ದೆಗೆ ಶಿಫಾರಸು ಮಾಡಿದ್ದಾರೆ ಎಂಬ ಮೂಲಗಳಿಂದ ತಿಳಿದು ಬಂದಿದೆ.

ಮುಖ್ಯ ನ್ಯಾಯಮೂರ್ತಿ ನೇಮಕ ಕುರಿತಂತೆ ಕೇಂದ್ರ ಸರ್ಕಾರಕ್ಕೆ ನ್ಯಾ ರಂಜನ್ ಗೊಗಾಯ್ ಅವರು ಶಿಫಾರಸು ಪತ್ರ ಕಳಿಸಿದ್ದಾರೆ. ಸದ್ಯ ಸುಪ್ರೀಂಕೋರ್ಟಿನಲ್ಲಿ ನ್ಯಾ. ಗೊಗಾಯ್ ನಂತರದ ಸ್ಥಾನದಲ್ಲಿ ನಂ.2 ಆಗಿರುವ ನ್ಯಾ ಬೊಬ್ಡೆ ಅವರ ಆಯ್ಕೆ ನಿರೀಕ್ಷಿತವಾಗಿದೆ.

ಮುಖ್ಯನ್ಯಾಯಮೂರ್ತಿಯಾಗಲಿರುವ ಶರದ್ ಅರವಿಂದ್ ಬೊಬ್ಡೆ ವ್ಯಕ್ತಿಚಿತ್ರಮುಖ್ಯನ್ಯಾಯಮೂರ್ತಿಯಾಗಲಿರುವ ಶರದ್ ಅರವಿಂದ್ ಬೊಬ್ಡೆ ವ್ಯಕ್ತಿಚಿತ್ರ

ನವೆಂಬರ್ 17ರಂದು ಹಾಲಿ ಸಿಜೆಐ ರಂಜನ್ ಗೊಗಾಯ್ ನಿವೃತ್ತರಾಗುತ್ತಿದ್ದಾರೆ. ನವೆಂಬರ್ 18 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಬೊಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಬೊಬ್ಡೆ 47 ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಬೊಬ್ಡೆ ಅವರ ನಿವೃತ್ತಿ ದಿನಾಂಕ 2021 ಏಪ್ರಿಲ್ 23.

Chief Justice Recommends To Centre Justice Bobde As Successor: Sources

ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956ರಂದು ಜನಿಸಿದ ಬೊಬ್ಡೆ ಅವರು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. 2000ರ ಮಾರ್ಚ್ 29ರಂದು ಬಾಂಬೆ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾದರು. 2013ರ ಏಪ್ರಿಲ್ ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದಿದ್ದಾರೆ.

English summary
Chief Justice of India Ranjan Gogoi has written to government recommending Justice Sharad Arvind Bobde as his successor, say sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X