ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ ಎಂದ ಛೋಟಾ ಶಕೀಲ್

|
Google Oneindia Kannada News

ನವದೆಹಲಿ, ಆಗಸ್ಟ್ 26: ಭಾರತಕ್ಕೆ ಬೇಕಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಇದ್ದಾನೆ ಎಂಬ ವರದಿಗಳನ್ನು ದೇಶಭ್ರಷ್ಟ ಭೂಗತ ಪಾತಕಿ ಛೋಟಾ ಶಕೀಲ್ ತಳ್ಳಿಹಾಕಿದ್ದಾನೆ. ಪಾಕಿಸ್ತಾನ ಸರ್ಕಾರವು ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿಯೇ ಇದ್ದಾನೆ ಎಂದು ಒಪ್ಪಿಕೊಂಡು ಬಳಿಕ ನಿರಾಕರಿಸಿತ್ತು.

'ಡಿ ಕಂಪೆನಿ'ಯ ಸದಸ್ಯರಲ್ಲಿ ಒಬ್ಬನಾದ ಛೋಟಾ ಶಕೀಲ್, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾನೆ. ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ದಾವೂದ್ ಇಬ್ರಾಹಿಂ ವಾಸಿಸುತ್ತಿದ್ದಾನೆ ಎಂದು ಬಿಂಬಿಸುವುದು ಭಾರತೀಯ ಮಾಧ್ಯಮಗಳ ಹೊಣೆಗಾರಿಕೆ. ಪಾಕಿಸ್ತಾನ ಸೇರಿದಂತೆ ಯಾವುದೇ ಸರ್ಕಾರಕ್ಕೆ ತಾವು ಉತ್ತರದಾಯಿಗಳಲ್ಲ ಎಂದು ಹೇಳಿದ್ದಾನೆ.

ದಾವೂದ್ ಇಬ್ರಾಹಿಂ ಇಲ್ಲಿಲ್ಲ ಎಂದು ಮತ್ತೆ ಪಾಕಿಸ್ತಾನದ ಸುಳ್ಳಿನ ಕತೆ ದಾವೂದ್ ಇಬ್ರಾಹಿಂ ಇಲ್ಲಿಲ್ಲ ಎಂದು ಮತ್ತೆ ಪಾಕಿಸ್ತಾನದ ಸುಳ್ಳಿನ ಕತೆ

'ಅದು ನಿಮ್ಮ ಜವಾಬ್ದಾರಿ, ನಮ್ಮದಲ್ಲ. ನಾವು ಕರಾಚಿಯಲ್ಲಿ ಇಲ್ಲದೇ ಇರುವಾಗ ನಮ್ಮ ಮೇಲೆ ಯಾರು ಅಧಿಕಾರ ಚಲಾಯಿಸಲು ಸಾಧ್ಯ?' ಎಂದು ಛೋಟಾ ಶಕೀಲ್, ನಿರ್ಬಂಧಕ್ಕೆ ಒಳಗಾದ 88 ಉಗ್ರರ ಪಟ್ಟಿಯಲ್ಲಿ ಪಾಕಿಸ್ತಾನ ಸರ್ಕಾರವು ಆತನ ವಿಳಾಸ ಹೆಸರಿಸಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾನೆ.

ಮೋಸ್ಟ್‌ ವಾಂಟೆಡ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡ ಪಾಕಿಸ್ತಾನಮೋಸ್ಟ್‌ ವಾಂಟೆಡ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡ ಪಾಕಿಸ್ತಾನ

Chhota Shakeel Denies The Reports Of Dawood Ibrahim Lives In Karachi

'ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ನೀವು ಏನನ್ನು ಬೇಕಾದರೂ ಬಿಂಬಿಸಬಹುದು. ಬಂಗಲೆ ಅಥವಾ ಕಾರು ಇದೆ ಎನ್ನಬಹುದು. ದಾವೂದ್ ಇಬ್ರಾಹಿಂನ ಮನೆ ಎಂದು ನೀವು ತೋರಿಸಿರುವುದೆಲ್ಲವೂ ನಿಮ್ಮ ಜವಾಬ್ದಾರಿಯಷ್ಟೇ. ನಮ್ಮದಲ್ಲ. ನೀವು ಏನನ್ನು ಬೇಕಾದರೂ ತೋರಿಸಲು ಸ್ವತಂತ್ರರಾಗಿದ್ದೀರಿ' ಎಂದು ವ್ಯಂಗ್ಯವಾಗಿ ಹೇಳಿದ್ದಾನೆ.

English summary
Underworld don Chhota Shakeel has denied that Dawood Ibrahim is living in Karachi as reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X