ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್‌ಗಢ ಸರ್ಕಾರ

|
Google Oneindia Kannada News

ಛತ್ತೀಸ್‌ಗಢ, ಮೇ 22: ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫೋಟೋ ಇರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಆದರೆ ಛತ್ತೀಸ್ ಗಢ ಸರ್ಕಾರವು ಇದರಲ್ಲಿ ಬದಲಾವಣೆ ತಂದಿದ್ದು ಛತ್ತೀಸ್‌ಗಢದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಕೋವಿಡ್ ಲಸಿಕೆ ಫಲಾನುಭವಿಗಳಿಗೆ ನೀಡುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬದಲಾಗಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಫೋಟೋ ಹಾಕಲಾಗಿದೆ.

ಈಗಾಗಲೇ ಛತ್ತೀಸ್‌ಗಢ ಸರ್ಕಾರ 18-44 ವರ್ಷದೊಳಗಿನವರಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ಫೋಟೋ ಇರುವ ಲಸಿಕೆ ಪ್ರಮಾಣಪತ್ರಗಳನ್ನು ನೀಡಲು ಆರಂಭಿಸಿದೆ. ದೇಶಾದ್ಯಂತ ಈವರೆಗೆ ಲಸಿಕೆ ಪ್ರಮಾಣಪತ್ರಗಳನ್ನು ಪ್ರಧಾನಿ ಮೋದಿ ಪೋಟೋ ಸಹಿತ ಸಂದೇಶದೊಂದಿಗೆ ನೀಡಲಾಗುತ್ತಿದೆ.

ಕೊರೊನಾ ನೆಗೆಟಿವ್ ವರದಿ ಇಲ್ಲ :ರಾಯ್ಪುರದಿಂದ ಬೆಂಗಳೂರಿಗರು ವಾಪಸ್ಕೊರೊನಾ ನೆಗೆಟಿವ್ ವರದಿ ಇಲ್ಲ :ರಾಯ್ಪುರದಿಂದ ಬೆಂಗಳೂರಿಗರು ವಾಪಸ್

ಇನ್ನು ದೇಶಾದ್ಯಂತ ಲಸಿಕೆ ಹಾಕಲು ಕೇಂದ್ರದ ಕೋವಿನ್ ಪೋರ್ಟಲ್ ಅನ್ನು ಬಳಸಲಾಗುತ್ತಿದೆ. ಆದರೆ ಛತ್ತೀಸ್ ಗಢ ಸರ್ಕಾರವು 18-44 ವರ್ಷ ವಯಸ್ಸಿನವರಿಗೆ ಲಸಿಕೆ ನೋಂದಣಿಗೆ ಕೋವಿನ್ ಬದಲಿಗೆ ತನ್ನದೇ ಆದ ಲಸಿಕೆ ವೆಬ್‌ಸೈಟ್ ಸಿಜಿಟಿಇಇಕೆಎ ಅನ್ನು ಪ್ರಾರಂಭಿಸಿದೆ.

Chhattisgarh starts to issue vaccine certificates with CMs photo instead of PM Modis

ಈ ಪೋರ್ಟಲ್‌ ಮೂಲಕ ಲಸಿಕೆಗೆ ನೋಂದಣಿ ಮಾಡಿದವರಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಫೋಟೋ ಇರುವ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ ಇದು ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಇಂತಹ ಸಾಂಕ್ರಾಮಿಕದ ಸಮಯಗಳಲ್ಲಿಯೂ ಸಹ, ಕಾಂಗ್ರೆಸ್ ತನ್ನ ಪ್ರಚಾರದ ಲಾಭ ಪಡೆಯಲು ದೊರೆಯುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಮುಖ್ಯಮಂತ್ರಿಯವರ ಫೋಟೋದೊಂದಿಗೆ ಪ್ರಮಾಣಪತ್ರವನ್ನು ನೀಡುತ್ತಿದೆ ಎಂದು ಟೀಕಿಸಿದೆ.

ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಛತ್ತೀಸ್‌ಗಢ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ಡಿಯೋ, ಸಿಎಂ ಫೋಟೋ ಹಾಕುವುದರಲ್ಲಿ ತಪ್ಪೇನಿದೆ. ಇದಕ್ಕೆ ಆಕ್ಷೇಪಣೆ ಮಾಡುವುದು ನಿಷ್ಪ್ರಯೋಜಕ ಎಂದು ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಫೋಟೋ ಇರುವ ಪ್ರಮಾಣಪತ್ರಗಳನ್ನು ಕೋವಿನ್ ಪೋರ್ಟಲ್‌ ಮೂಲಕ ನೀಡುತ್ತಿದೆ. ಹಾಗಿರುವಾಗ ಛತ್ತೀಸ್‌ಗಢದಲ್ಲಿ ನಾವು ಸಿಎಂ ಫೋಟೋವನ್ನು ಏಕೆ ಹಾಕಬಾರದು ಎಂದು ಪ್ರಶ್ನಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Chhattisgarh starts to issue covid vaccine certificates with Chief minister Bhupesh Baghel photo instead of prime minister modi's photo. The opposition party Bjp objectes this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X