ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಲ್ಲ ಅವನು: ನಿಶಾಳನ್ನು ಹಿಡಿಯಲು ಹೋದ ಪೊಲೀಸರಿಗೆ ಸಿಕ್ಕಿದ್ದು ರವಿ

|
Google Oneindia Kannada News

ರಾಯ್‌ಪುರ, ಏಪ್ರಿಲ್ 20: ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿದ್ದ ರವಿ ಪೂಜಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಛತ್ತಿಸ್‌ಗಢದ ರಾಯ್‌ಪುರದಲ್ಲಿ ನಡೆದಿದೆ.

ನಿಶಾ ಜಿಂದಾಲ್ ಎಂಬ ಫೇಸ್ ಬುಕ್ ಖಾತೆಯ ಮೂಲಕ ಕೋಮು ಸೌಹಾರ್ದತೆ ಕದಡುವ ಪೋಸ್ಟ್‌ಗಳು ಹಾಕಲಾಗಿದ್ದು, ಪೊಲೀಸರು ಆರೋಪಿಯನ್ನು ಬಂದಿಸಲು ಮುಂದಾದರು. ಈ ವೇಳೆ ಈ ಖಾತೆ ಮಹಿಳೆಯದಲ್ಲ, ಪುರುಷನದ್ದು ಎಂದು ತಿಳಿದುಬಂದಿದೆ. ಕಳೆದ 8 ವರ್ಷಗಳಿಂದ ಈ ಖಾತೆಯನ್ನು ಈತ ಬಳಕೆ ಮಾಡುತ್ತಿದ್ದ.

ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಡಿಗೇಡಿಗಳ ಆವಾಜ್ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಡಿಗೇಡಿಗಳ ಆವಾಜ್

ನಿಶಾ ಜಿಂದಾಲ್ ಹೆಸರಿನಲ್ಲಿ ರವಿ ಪೂಜಾರ್ ಎಂಬುವವನು ನಕಲಿ ಖಾತೆಯನ್ನು ಸೃಷ್ಟಿ ಮಾಡಿದ್ದ. ಮಹಿಳೆಯ ಫೋಟೋಗಳನ್ನು ಹಾಕಿ, ಇದು ಮಹಿಳೆಯ ಖಾತೆ ರೀತಿಯೇ ಎಂದು ಬಿಂಬಿಸಿದ್ದ. ಆ ಖಾತೆಯಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿದ್ದ. ಈ ಖಾತೆಯ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿದ್ದ.

Chhattisgarh Police Arrested Ravi Pujar, who posted communal messages under fake IDs

ರವಿಯನ್ನು ಬಂದಿಸಿದ ಪೊಲೀಸರು ತಾನು ತೆರೆದಿದ್ದ ನಿಶಾ ಜಿಂದಾಲ್ ಖಾತೆಯಲ್ಲಿ ತನ್ನ ನಿಜವಾದ ಫೋಟೋವನ್ನು ಹಾಕುವಂತೆ ತಿಳಿಸಿದ್ದರು. ಅದರಂತೆ, ಆತ ''ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ. ನಾನು ನಿಶಾ ಜಿಂದಾಲ್'' ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾನೆ.

Chhattisgarh Police Arrested Ravi Pujar, who posted communal messages under fake IDs

ಬಂದಿತ ಆರೋಪಿಯ ವಿರುದ್ಧ ಐಪಿಸಿ 153 (ಸೌಹಾರ್ದ ಕದಡುವುದು) ಹಾಗೂ 295 (ಧರ್ಮ ನಿಂದನೆ) ಆರೋಪದ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

English summary
Chhattisgarh Police Arrested Ravi Pujar, a 31 year old who posted communal messages under Nisha Jindal fake IDs. Since 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X