ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢದ ಈ ಮತದಾನ ಕೇಂದ್ರದಲ್ಲಿ ಇರುವುದು ನಾಲ್ಕು ಮತ

By ವಿನೋದ್ ಕುಮಾರ್
|
Google Oneindia Kannada News

ರಾಯ್ ಪುರ (ಛತ್ತೀಸ್ ಗಢ), ನವೆಂಬರ್ 19 : ಛತ್ತೀಸ್ ಗಢ ವಿಧಾನಸಭೆಗೆ ಮಂಗಳವಾರದಂದು, ಅಂದರೆ ನವೆಂಬರ್ 20ರಂದು ಎರಡನೇ ಹಂತದ ಚುನಾವಣೆ, ಎಪ್ಪತ್ತೆರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ನವೆಂಬರ್ 12ರಂದು 18 ಕ್ಷೇತ್ರಗಳಿಗೆ ನಡೆದಿತ್ತು. ಅವುಗಳಲ್ಲಿ ಬಹುತೇಕ ನಕ್ಸಲರ ಹಿಡಿತ ಇರುವ ಪ್ರದೇಶಗಳು. ಶೇಕಡಾ ಎಪ್ಪತ್ತರಷ್ಟು ಮತದಾನ ಆಗಿತ್ತು.

ಇನ್ನು ಮಂಗಳವಾರದಂದು ಮತದಾನ ನಡೆಯುವ 72 ಕ್ಷೇತ್ರಗಳ ಪೈಕಿ ಭರತ್ ಪುರ್-ಸೋನ್ ಹತ್ ವಿಧಾನಸಭಾ ಕ್ಷೇತ್ರವು ಕೊರಿಯಾ ಜಿಲ್ಲೆಯ ಈಶಾನ್ಯಕ್ಕಿದೆ. ಇಲ್ಲಿ ಶೆರನ್ ದಾದ್ ಎಂಬ ಹಳ್ಳಿಯಲ್ಲಿ ಒಂದು ಮತದಾನ ಕೇಂದ್ರ ಇದ್ದು, ನಾಲ್ವರು ಮತದಾರರು ಮಾತ್ರ ಇದ್ದಾರೆ. ಅದರಲ್ಲಿ ಮೂವರು ಮತದಾರರು ಒಂದೇ ಕುಟುಂಬದವರು.

ಛತ್ತೀಸ್ ಗಢ ಸಿಎಂ ವಿರುದ್ಧ 41 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ ರಾಹುಲ್ಛತ್ತೀಸ್ ಗಢ ಸಿಎಂ ವಿರುದ್ಧ 41 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ ರಾಹುಲ್

ಈ ಮತದಾನ ಕೇಂದ್ರ ತಲುಪುವುದು ಕೂಡ ಅಷ್ಟು ಸಲೀಸಾದ ವಿಚಾರ ಏನಲ್ಲ. ಅದಕ್ಕಾಗಿ ಬೆಟ್ಟ ಮತ್ತು ನದಿ ದಾಟಿ ಕುಗ್ರಾಮವಾದ ಶೆರನ್ ದಾದ್ ಮತದಾನ ಕೇಂದ್ರವನ್ನು ತಲುಪಬೇಕು.

Chhattisgarh phase 2 polling: This village has 4 voters

2013ರಲ್ಲಿ ಬಿಜೆಪಿಯ ಚಂಪಾ ದೇವಿ ಪಾವ್ಲೆ ಭರತ್ ಪುರ್- ಸೋನ್ ಹತ್ ವಿಧಾನಸಭಾ ಕ್ಷೇತ್ರದಿಂದ 4608 ಮತಗಳಿಂದ ಜಯ ಗಳಿಸಿದ್ದರು. ಅಂದಹಾಗೆ ಕೊರಿಯಾ ಜಿಲ್ಲೆಯಲ್ಲಿ ಇರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಿತ್ತು. ಈ ವಿಧಾನಸಭಾ ಕ್ಷೇತ್ರವು ಕೊರ್ಬಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶವು ಡಿಸೆಂಬರ್ 11ರಂದು ಪ್ರಕಟವಾಗಲಿದೆ.

English summary
Chhattisgarh second phase 72 seats going to polling on Tuesday is Bharatpur-Sonhat, which is one of the three Assembly constituencies located in the north-eastern district of Koriya. Here, in one polling booth located in Sherandandh village, only four voters are enlisted and of them, three are from the same family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X