ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಗಢ: 10 ಕಿ.ಮೀವರೆಗೆ ಮಗಳ ಶವ ಹೊತ್ತೊಯ್ದ ತಂದೆ; ತನಿಖೆಗೆ ಆದೇಶ

|
Google Oneindia Kannada News

ಛತ್ತೀಸ್‌ಗಢ, ಮಾರ್ಚ್ 26: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳ ಶವವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋವನ್ನು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ಅವರು ತನಿಖೆಗೆ ಆದೇಶಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಸುರ್ಗುಜಾ ಜಿಲ್ಲೆಯ ಲಖನ್‌ಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದು, ಶವ ವಾಹನ ಬರುವ ಮುನ್ನ ಆಕೆಯ ತಂದೆ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಅಮದಾಳ ಗ್ರಾಮದವರಾದ ಈಶ್ವರ ದಾಸ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪುತ್ರಿ ಸುರೇಖಾಳನ್ನು ಲಖನ್‌ಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ ಕರೆತಂದಿದ್ದರು.

"ಹುಡುಗಿಯ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿತ್ತು. ಆಕೆಯ ಪೋಷಕರ ಪ್ರಕಾರ ಅವಳು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಅಗತ್ಯ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತಾದರೂ, ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಇದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವಳು ಬೆಳಿಗ್ಗೆ 7:30ರ ಸುಮಾರಿಗೆ ಸಾವನ್ನಪ್ಪಿದ್ದಾಳೆ,'' ಎಂದು ಡಾ. ವಿನೋದ್ ಭಾರ್ಗವ್ ಹೇಳಿದರು.

Chhattisgarh Man Seen Carrying Daughters Body For 10 Km, Probe Ordered

ಗ್ರಾಮೀಣ ವೈದ್ಯಕೀಯ ಸಹಾಯಕ (RMA) ಆರೋಗ್ಯ ಕೇಂದ್ರದಲ್ಲಿ ವಾಹನ ಬುಕ್ ಮಾಡಲಾಗಿತ್ತು. ಶವನೌಕೆ ಶೀಘ್ರದಲ್ಲೇ ಬರಲಿದೆ ಎಂದು ನಾವು ಕುಟುಂಬ ಸದಸ್ಯರಿಗೆ ತಿಳಿಸಿದ್ದೇವೆ. ಅದು ಬೆಳಿಗ್ಗೆ 9:20ರ ಸುಮಾರಿಗೆ ಬಂದಿತು, ಆದರೆ ಅಷ್ಟರಲ್ಲಿ ಅವರು ಶವದೊಂದಿಗೆ ತೆರಳಿದ್ದರು ಎಂದು ಅವರು ಹೇಳಿದರು. ವಿಡಿಯೋದಲ್ಲಿ, ವ್ಯಕ್ತಿ ತನ್ನ ಹೆಗಲ ಮೇಲೆ ಶವವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮನೆ ತಲುಪಲು ಕಾಲ್ನಡಿಗೆಯಲ್ಲಿ ಸುಮಾರು 10 ಕಿ.ಮೀ ದೂರ ಕ್ರಮಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕೇಂದ್ರವಾದ ಅಂಬಿಕಾಪುರದಲ್ಲಿದ್ದ ಆರೋಗ್ಯ ಸಚಿವ ಟಿ.ಎಸ್‌. ಸಿಂಗ್‌ ದೇವ್‌ ಅವರು ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಸೂಚಿಸಿದ್ದಾರೆ.

"ನಾನು ವಿಡಿಯೋ ನೋಡಿದ್ದೇನೆ. ಇದು ಗೊಂದಲದ ಸಂಗತಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‌ಒಗೆ ತಿಳಿಸಿದ್ದೇನೆ. ಅಲ್ಲಿ ನೇಮಕಗೊಂಡಿದ್ದರೂ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದವರನ್ನು ತೆಗೆದುಹಾಕಬೇಕು ಎಂದು ಹೇಳಿದ್ದೇನೆ,'' ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಸಿಂಗ್ ದೇವ್ ಅವರು ರಾಜ್ಯ ಅಸೆಂಬ್ಲಿಯಲ್ಲಿ ಅಂಬಿಕಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. "ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿ ವಾಹನಕ್ಕಾಗಿ ಕಾಯುವಂತೆ ಕುಟುಂಬವನ್ನು ಮನವೊಲಿಸಬೇಕು. ಅಂತಹ ಘಟನೆಗಳು ನಡೆಯದಂತೆ ಅವರು ಖಚಿತಪಡಿಸಿಕೊಳ್ಳಬೇಕು,'' ಎಂದು ಸಚಿವರು ಹೇಳಿದರು.

English summary
A video of a man carrying the body of his seven-year-old daughter on his shoulders in Chhattisgarh's Surguja district was widely shared on social media on Friday, prompting health minister TS Singh Deo to order a probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X